ಅಥಾಙ್ಗನಾರತ್ನಮವಾಪ್ಯ ತದ್ ದ್ವಯಂ ಪಾಣ್ಡುಸ್ತು ಭೋಗಾನ್ ಬುಭುಜೇ
ಯಥೇಷ್ಟತಃ ।
ಅಪೀಪಲದ್ ಧರ್ಮ್ಮಸಮಾಶ್ರಯೋ ಮಹೀಂ ಜ್ಯೇಷ್ಠಾಪಚಾಯೀ
ವಿದುರೋಕ್ತಮಾರ್ಗ್ಗತಃ ॥೧೧.೧೬೭॥
ಕುಂತೀ ಮಾದ್ರೀ ಎಂಬ
ಇಬ್ಬರು ಹೆಂಡರಿಂದ ಪಾಂಡುವಿನ ಸುಖ ಭೋಗ,
ಧರ್ಮಾಶ್ರಿತ ಅಣ್ಣ
ಧೃತರಾಷ್ಟ್ರನ ಧನಿಕನ ಮಾಡುವ ಯುವರಾಜ ಯೋಗ.
ವಿದುರ ಹೇಳಿದ
ನೀತಿಗನುಗುಣವಾಗಿ ಭೂಮಿಯ ಪರಿಪಾಲನಾ ಯಾಗ.
ಭೀಷ್ಮೋ ಹಿ ರಾಷ್ಟ್ರೇ ಧೃತರಾಷ್ಟ್ರಮೇವ ಸಂಸ್ಥಾಪ್ಯ ಪಾಣ್ಡುಂ
ಯುವರಾಜಮೇವ ।
ಚಕ್ರೇ ತಥಾsಪ್ಯನ್ಧ ಇತಿ ಸ್ಮ ರಾಜ್ಯಂ ಚಕಾರ ನಾಸಾವಕರೋಚ್ಚ
ಪಾಣ್ಡುಃ ॥೧೧.೧೬೮ ॥
ಭೀಷ್ಮರಿಂದ
ಧೃತರಾಷ್ಟ್ರನನ್ನು ರಾಜನಾಗಿ ಪಾಂಡುವನ್ನು ಯುವರಾಜನಾಗಿ ನೇಮಕ,
ಯುವರಾಜನಾದರೂ ಅಣ್ಣ
ಅಂಧನಾದ್ದರಿಂದ ಪಾಂಡುವಿನದೇ ರಾಜ್ಯಭಾರದ ಕಾಯಕ.
ಭೀಷ್ಮಾಮ್ಬಿಕೇಯೋಕ್ತಿಪರಃ ಸದೈವ ಪಾಣ್ಡುಃ
ಶಶಾಸಾವನಿಮೇಕವೀರಃ ।
ಅಥಾsಮ್ಬಿಕೇಯೋ ಬಹುಭಿಶ್ಚ ಯಜ್ಞೈರೀಜೇ ಸಪಾಣ್ಡುಶ್ಚ
ಮಹಾಧನೌಘೈಃ ॥೧೧.೧೬೯॥
ಪಾಂಡುವಿನಿಂದ
ಭೀಷ್ಮರ ಧೃತರಾಷ್ಟ್ರನ ಮೇಲ್ವಿಚಾರಣೆಯಲ್ಲಿ ಭೂಮಿಯ ಪಾಲನೆ,
ಧೃತರಾಷ್ಟ್ರ ಪಾಂಡುವಿನಿಂದ ಸಂಪತ್ತು ಬಳಸಿ ವಿಶೇಷಯಜ್ಞಗಳಿಂದ
ಭಗವದಾರಾಧನೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula