Tuesday, 29 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 189 - 194

ತಸ್ಮಿನ್ ಹತೇ ದಾನವಲೋಕಪಾಲೇ ದಿತೇಃ ಸುತಾ ದುದ್ರುವುರಿನ್ದ್ರಭೀಷಿತಾಃ ।
ತಾನ್ ವಿಪ್ರಚಿತ್ತಿರ್ವಿನಿವಾರ್ಯ್ಯ ಧನ್ವೀ ಸಸಾರ ಶಕ್ರಪ್ರಮುಖಾನ್ ಸುರೋತ್ತಮಾನ್ ॥೧೧.೧೮೯॥

ಇಂದ್ರನಿಂದ ಕೊನೆಗೊಳ್ಳುತ್ತಿರಲು ದೈತ್ಯರ ಒಡೆಯ ಶಂಬರನ ಆಟ,
ದೈತ್ಯರು ಭಯಗೊಂಡು ಪ್ರಾರಂಭಿಸಿದರು ಜೀವ ಉಳಿಸಿಕೊಳ್ಳಲು ಓಟ.
ಓಡುತ್ತಿರುವ ದೈತ್ಯರನ್ನು ವಿಪ್ರಚಿತ್ತಿ ಎಂಬ ಅಸುರ ತಡೆದ,
ಬಿಲ್ಲು ಹಿಡಿದ ವಿಪ್ರಚಿತ್ತಿ ಇಂದ್ರ ಮುಂತಾದ  ದೇವತೆಗಳಿಗೆ ಎದುರಾದ.

ವರಾದಜೇಯೇನ ವಿಧಾತುರೇವ ಸುರೋತ್ತಮಾಂಸ್ತೇನ ಶರೈರ್ನ್ನಿಪಾತಿತಾನ್ ।
ನಿರೀಕ್ಷ್ಯ ಶಕ್ರಂ ಚ ವಿಮೋಹಿತಂ ದ್ರುತಂ ನ್ಯವಾರಯತ್ ತಂ ಪವನಃ ಶರೌಘೈಃ ॥೧೧.೧೯೦॥

ಬ್ರಹ್ಮದೇವರ ವರದಿಂದ  ಅಜೇಯನಾಗಿದ್ದ ವಿಪ್ರಚಿತ್ತಿಯ ಬಾಣ,
ದೇವತೆಗಳ ಬೀಳಿಸಿ ಇಂದ್ರನ ಮೂರ್ಛೆಗೊಳಿಸಿ ಕಸಿಯಿತು ತ್ರಾಣ.
ವಿಪ್ರಚಿತ್ತಿಯ ತಡೆದ ಇದನ್ನೆಲ್ಲಾ ಗಮನಿಸುತ್ತಿದ್ದ ಮುಖ್ಯಪ್ರಾಣ.

ಅಸ್ತ್ರಾಣಿ ತಸ್ಯಾಸ್ತ್ರವರೈರ್ನ್ನಿವಾರ್ಯ್ಯ ಚಿಕ್ಷೇಪ ತಸ್ಯೋರಸಿ ಕಾಞ್ಚನೀಮ್ ಗದಾಮ್ ।
ವಿಚೂರ್ಣ್ಣಿತೋsಸೌ ನಿಪಪಾತ ಮೇರೌ ಮಹಾಬಲೋ 
ವಾಯುಬಲಾಭಿನುನ್ನಃ ॥೧೧.೧೯೧॥

ಪವನ ವಿಪ್ರಚಿತ್ತಿಯ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದ,
ವಿಪ್ರಚಿತ್ತಿಯ ಎದೆಯ ಮೇಲೆ ಬಂಗಾರದ ಗದೆಯ ತಾ ಎಸೆದ.
ಪ್ರಾಣ ಬಲಕ್ಕೆ ವಿಪ್ರಚಿತ್ತಿ ಮೇರುಪರ್ವತದ ಮೇಲೆ ಬಿದ್ದು ಪುಡಿಯಾದ.

ಅಥಾsಸಸಾದಾsಶು ಸ ಕಾಲನೇಮೀಸ್ತ್ವದಾಜ್ಞಯಾ ಯಸ್ಯ ವರಂ ದದೌ ಪುರಾ ।
ಸರ್ವೈರಜೇಯತ್ವಮಜೋsಸುರಃ ಸ ಸಹಸ್ರಶೀರ್ಷೋ 
ದ್ವಿಸಹಸ್ರಬಾಹುಯುಕ್ ॥೧೧.೧೯೨॥

ಹೀಗೆ ನಡೆದಮೇಲೆ ವಿಪ್ರಚಿತ್ತಿಯ ಘೋರ ಸಾವು,
ಕಾಲನೇಮಿಗಿತ್ತು ನಿನ್ನಾಜ್ಞೆಯ ಅಜೇಯತ್ವದ ಬ್ರಹ್ಮ ವರವು.
ಅಂಥಾ ಕಾಲನೇಮಿ ಬಂದ ಹೊಂದಿ ಸಾವಿರತಲೆ ಎರಡುಸಾವಿರ ಬಾಹು.

ತಮಾಪತನ್ತನಂ ಪ್ರಸಮೀಕ್ಷ್ಯ ಮಾರುತಸ್ತ್ವದಾಜ್ಞಯಾ ದತ್ತವರಸ್ತ್ವಯೈವ ।
ಹನ್ತವ್ಯ ಇತ್ಯಸ್ಮರದಾಶು ಹಿ ತ್ವಾಂ 
ತದಾssವಿರಾಸೀಸ್ತ್ವಮನನ್ತಪೌರುಷಃ ॥೧೧.೧೯೩॥

ಯುದ್ಧಭೂಮಿಗೆ ಬರುತ್ತಿರುವ ಕಾಲನೇಮಿಯನ್ನು ಕಂಡ  ಮಾರುತ,
ನಿನ್ನಾಜ್ಞೆಯ ವರ ಹೊಂದಿದವ ನಿನ್ನಿಂದಲೇ ಆಗಲೆಂದು ಹತ.
ಹೀಗೆ ಯೋಚಿಸಿ ನಿನ್ನ ಸ್ಮರಿಸಿದ ಆ ಪ್ರಾಣದೇವ,
ಆಗಾಯಿತು ಅನಂತಪರಾಕ್ರಮದ ನಿನ್ನಾವಿರ್ಭಾವ.

ತಮಸ್ತ್ರಶಸ್ತ್ರಾಣಿ ಬಹೂನಿ ಬಾಹುಭಿಃ ಪ್ರವರ್ಷಮಾಣಂ ಭುವನಾಪ್ತದೇಹಮ್ ।
ಚಕ್ರೇಣ ಬಾಹೂನ್ ವಿನಿಕೃತ್ಯ ಕಾನಿ ಚ ನ್ಯವೇದಯಶ್ಚಾsಶು ಯಮಾಯ 
ಪಾಪಮ್ ॥೧೧.೧೯೪ ॥

ಅಸಂಖ್ಯ ಬಾಹುಗಳಿಂದ ಅಸ್ತ್ರಶಸ್ತ್ರಗಳೆಸೆಯುತ್ತ ಭುವಿಯ ವ್ಯಾಪಿಸಿದ್ದ ಕಾಲನೇಮಿ,
ಅವನ ಕೈತಲೆಗಳ ಸುದರ್ಶನದಿ ಕತ್ತರಿಸುತ್ತಾ ಅವನ ದೇಹವ ಯಮಗೆ ಕೊಟ್ಟೆ ನೀ ಭಕ್ತಪ್ರೇಮಿ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula