Tuesday, 29 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 184 - 188


ಜಘ್ನುರ್ಗ್ಗಿರೀನ್ದ್ರತಳಮುಷ್ಟಿಮಹಾಸ್ತ್ರಶಸ್ತ್ರೈಶ್ಚಕ್ರುರ್ನ್ನದೀಶ್ಚ ರುಧಿರೌಘವಹಾ 
ಮಹೌಘಮ್ ।
ತತ್ರ ಸ್ಮ ದೇವವೃಷಭೈರಸುರೇಶಚಮ್ವಾ ಯುದ್ಧೇ ನಿಸೂದಿತ ಉತೌಘಬಲೈಃ 
ಶತಾಂಶಃ ॥೧೧.೧೮೪॥

ಹೀಗೆ ಸೇರಿದ ದೈತ್ಯ-ದೇವತೆಗಳ ಯುದ್ಧ ಸಮಯದ ಆ ನೋಟ,
ಬೆಟ್ಟ ಕೈತಳ ಮುಷ್ಠಿ ಅಸ್ತ್ರ ಶಸ್ತ್ರಗಳಿಂದ ನಡೆದ ಆ  ಹೊಡೆದಾಟ.
ಆ ರೀತಿಯ ಯುದ್ಧದಲ್ಲಿ ರಕ್ತದ ಹೊಳೆ ನದಿಗಳು ಹರಿದವು ಆಗ,
ಯುದ್ಧದಿ ನಾಶವಾಯಿತು ದೈತ್ಯಸೈನ್ಯದ ನೂರನೇ ಒಂದು ಭಾಗ.

ಅಥಾsತ್ಮಸೇನಾಮವಮೃದ್ಯಮಾನಾಂ ವೀಕ್ಷ್ಯಾಸುರಃ ಶಮ್ಬರನಾಮಧೇಯಃ ।
ಸಸಾರ ಮಾಯಾವಿದಸಹ್ಯ̐ಮಾಯೋ ವರಾದುಮೇಶಸ್ಯ ಸುರಾನ್ 
ವಿಮೋಹಯನ್ ॥೧೧.೧೮೫॥

ನಾಶವಾಗುತ್ತಿರುವ ತನ್ನ ಸೇನೆಯನ್ನು ಕಂಡ ಮಾಯಾವಿದ್ಯೆಯ ಬಲ್ಲ ಶಂಬರ,
ಕಣ್ಕಟ್ಟುವಿದ್ಯೆ, ರುದ್ರವರ ಪ್ರಭಾವದಿಂದ ದೇವತೆಗಳ ಪ್ರಜ್ಞೆ ತಪ್ಪಿಸುತ್ತಾ ಬಂದ ಅಸುರ.

ಮಾಯಾಸಹಸ್ರೇಣ ಸುರಾಃ ಸಮರ್ದ್ದಿತಾ ರಣೇ ವಿಷೇದುಃ 
ಶಶಿಸೂರ್ಯ್ಯಮುಖ್ಯಾಃ ।
ತಾನ್ ವಿಕ್ಷ್ಯ ವಜ್ರೀ ಪರಮಾಂ ತು ವಿದ್ಯಾಂ ಸ್ವಯಮ್ಭುದತ್ತಾಮ್ ಪ್ರಯುಯೋಜ ವೈಷ್ಣವೀಮ್॥೧೧.೧೮೬॥

ಶಂಬರಾಸುರನಿಂದ ಸಾವಿರಾರು ಮಾಯೆಗಳ ಜಾಲ,
ಚಂದ್ರ ಸೂರ್ಯಾದಿಗಳು ಆಯಾಸಗೊಂಡ ಆ ಕಾಲ.
ಇದೆಲ್ಲವನ್ನೂ ನೋಡುತ್ತಿದ್ದ ಇಂದ್ರದೇವ ಆಗ,
ಶಂಬರನ ಮೇಲೆ ಮಾಡಿದ ವೈಷ್ಣವವಿದ್ಯೆ ಪ್ರಯೋಗ.

ಸಮಸ್ತಮಾಯಾಪಹಯಾ ತಯೈವ ವರಾದ್ ರಮೇಶಸ್ಯ ಸದಾsಪ್ಯಸ̐ಹ್ಯಯಾ
ಮಾಯಾ ವಿನೇಶುರ್ದ್ದಿತಿಜೇನ್ದ್ರಸೃಷ್ಟಾ ವಾರೀಶವಹ್ನೀನ್ದುಮುಖಾಶ್ಚ 
ಮೋಚಿತಾಃ ॥೧೧.೧೮೭॥

ಎಲ್ಲಾ ಮಾಯೆಗಳನ್ನು ನಾಶ ಮಾಡುವ ಆ ವೈಷ್ಣವ ವಿದ್ಯೆಯಿಂದ,
ನಿನ್ನ ವರದಿಂದ ನಾಶವಾಯಿತು ಶಂಬರ ನಿರ್ಮಿತ ಮಾಯಾಬಂಧ.
ಬಿಡುಗಡೆಯಾದ ವರುಣ ಅಗ್ನಿ ಚಂದ್ರ ಮೊದಲಾದ ದೇವತಾವೃಂದ.

ಯಮೇನ್ದುಸೂರ್ಯ್ಯಾದಿಸುರಾಸ್ತತೋsಸುರಾನ್ ನಿಜಘ್ನುರಾಪ್ಯಾಯಿತವಿಕ್ರಮಾಸ್ತದಾ ।
ಸುರೇಶ್ವರೇಣೋರ್ಜ್ಜಿತಪೌರುಷಾ ಬಹೂನ್ ವಜ್ರೇಣ ವಜ್ರೀ ನಿಜಘಾನ 
ಶಮ್ಬರಮ್ ॥೧೧.೧೮೮ ॥

ತದನಂತರ ಯಮಧರ್ಮ ಚಂದ್ರ ಸೂರ್ಯ,
ಎಲ್ಲಾ ದೇವತೆಗಳಿಗೆ ಬಲ ಮರಳಿದ ವ್ಯಾಪಾರ.
ದೇವೇಂದ್ರನಿಂದ ವರ್ಧಿತಬಲವುಳ್ಳ ದೇವತೆಗಳಿಂದ ಅಸುರರ ಸಂಹಾರ,
ದೇವೇಂದ್ರನ ವಜ್ರಾಯುಧಕ್ಕೆ ಶಂಬರಾಸುರನಾದ ತಾನು ಆಹಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula