ನೈಷಾ ವಿರೋಧೇ
ಕುರುಪಾಣ್ಡವಾನಾಂ ತಿಷ್ಠೇದಿತಿ ವ್ಯಾಸ ಉದೀರ್ಣ್ಣಸದ್ಗುಣಃ ।
ಸ್ವಮಾತರಂ ಸ್ವಾಶ್ರಮಮೇವ ನಿನ್ಯೇ ಸ್ನುಷೇ ಚ ತಸ್ಯಾ ಯಯತುಃ ಸ್ಮ
ತಾಮನು ॥೧೧.೧೭೦॥
ಎಲ್ಲವನ್ನೂ ಬಲ್ಲ
ಉತ್ಕೃಷ್ಟವಾದ ಗುಣವುಳ್ಳ ವೇದವ್ಯಾಸರ ಯೋಚನೆ,
ತಟ್ಟದಿರಲೆಂದು
ತಾಯಿ ಸತ್ಯವತಿಗೆ ಕೌರವ ಪಾಂಡವ ಕಾಳಗದ ವೇದನೆ.
ಹಸ್ತಿನಾವತಿಯಲ್ಲಿ
ಆಕೆ ಇರಬಾರದೆಂದು ತಮ್ಮ ಆಶ್ರಮಕೆ ಕರೆದೊಯ್ಯುವಿಕೆ,
ಸತ್ಯವತಿಯ
ಸೊಸೆಯರಿಬ್ಬರು ವಿದುರನ ತಾಯಿ ಅವರನ್ನು ಅನುಸರಿಸುವಿಕೆ.
ಸುತೋಕ್ತಮಾರ್ಗ್ಗೇಣ ವಿಚಿನ್ತ್ಯ ತಂ ಹರಿಂ ಸುತಾತ್ಮನಾ ಬ್ರಹ್ಮತಯಾ ಚ
ಸಾ ಯಯೌ ।
ಪರಂ ಪದಂ ವೈಷ್ಣವಮೇವ ಕೃಷ್ಣಪ್ರಸಾದತಃ ಸ್ವರ್ಯ್ಯಯತುಃ ಸ್ನುಷೇ
ಚ
॥೧೧.೧೭೧॥
ಸತ್ಯವತಿಯಿಂದ ಮಗ
ವ್ಯಾಸರು ಹೇಳಿದ ರೀತಿಯಲ್ಲಿ ಅನುಸಂಧಾನಪೂರ್ವಕ ನಾರಾಯಣನ ಚಿಂತನೆ,
ಹಾಗೆ ಧ್ಯಾನಿಸಿ
ವೈಷ್ಣವಲೋಕ ಹೊಂದಿದಳಾಕೆ; ಸೊಸೆಯರದೂ ದೈವಾನುಗ್ರಹದ ಸ್ವರ್ಗಾರೋಹಣೆ.
ಮಾತಾ ಚ ಸಾ ವಿದುರಸ್ಯಾsಪ ಲೋಕಂ ವೈರಿಞ್ಚಮನ್ವೇವ
ಗತಾsಮ್ಬಿಕಾಂ
ಸತೀ ।
ವ್ಯಾಸಪ್ರಸಾದಾತ್ ಸುತಸದ್ಗುಣೈಶ್ಚ ಕಾಲೇನ ಮುಕ್ತಿಂ ಚ ಜಗಾಮ
ಸನ್ಮತಿಃ
॥೧೧.೧೭೨ ॥
ವಿದುರನ ತಾಯಿ ಕೂಡಾ
ಅಂಬಿಕೆಯನ್ನು ಅನುಸರಿಸಿ ಹೋಗುತ್ತಾಳೆ,
ವ್ಯಾಸಾನುಗ್ರಹ
ವಿದುರನ ಸದ್ಗುಣಗಳಿಂದ ಬ್ರಹ್ಮಲೋಕ ಸೇರುತ್ತಾಳೆ.
ಕಾಲಾಂತರದ
ಸಾಧನೆಯಿಂದ ಮುಕ್ತಿಯನ್ನೂ ಮುಂದೆ ಪಡೆಯುತ್ತಾಳೆ.
ಅಮ್ಬಾಲಿಕಾsಪಿ ಕ್ರಮಯೋಗತೋsಗಾತ್ ಪರಾಂ ಗತಿಂ ನೈವ ತಥಾsಮ್ಬಿಕಾ ಯಯೌ ।
ಯಥಾಯಥಾ ವಿಷ್ಣುಪರಶ್ಚಿದಾತ್ಮಾ ತಥಾತಥಾ ಹ್ಯಸ್ಯ ಗತಿಃ ಪರತ್ರ
॥೧೧.೧೭೩॥
ಅಂಬಾಲಿಕೆಗೆ ಕೂಡಾ
ಭಕ್ತಿಮಾರ್ಗದ ಬೆಳವಣಿಗೆ ನಂತರ ವೈಷ್ಣವಲೋಕ ಪ್ರಾಪ್ತಿ.
ದುರ್ಬುದ್ಧಿಯ
ಅಂಬಿಕೆಗೆ ಅವಳ ನಡೆಯನನುಸರಿಸಿ ಪರಮಗತಿಯಾಯ್ತು ನಾಸ್ತಿ.
ಸಾಧಕರದು ಇಲ್ಲಿ
ಹೇಗಿರುತ್ತದೋ ಉಪಾಸನಾಮಾರ್ಗ,
ಅದನ್ನನುಸರಿಸಿ ಆಗುವ ಅವರವರ ಗತಿ ಹೊಂದುವ ಭಾಗ್ಯ.[Contributed by Shri Govind Magal]
No comments:
Post a Comment
ಗೋ-ಕುಲ Go-Kula