Friday, 1 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 202 - 206

ಜಿತ್ವಾ ಜಲೇಶಂ ಚ ಹೃತಾನಿ ಯೇನ ರತ್ನಾನಿ ಯಕ್ಷಾಶ್ಚ ಜಿತಾಃ ಶಿವಸ್ಯ।
ಕನ್ಯಾವನಾರ್ತ್ಥಂ ಮಗಧಾಧಿಪೇನ ಪ್ರಯೋಜಿತಾಸ್ತೇ ಚ ಹೃತೇ ಬಲೇನ ॥ ೧೧.೨೦೨ ॥

ಕಂಸ ಸಮುದ್ರರಾಜನ ಗೆದ್ದು ಅವನಿಂದ ರತ್ನಗಳ ಅಪಹರಿಸಿದ,
ಜರಾಸಂಧ ತನ್ನಿಬ್ಬರು ಹೆಣ್ಣುಮಕ್ಕಳ ರಕ್ಷಣೆಗೆ ಶಿವನ ಯಕ್ಷರ ನೇಮಿಸಿದ್ದ.
ಕಂಸ ಶಿವನ ಆ ಯಕ್ಷರನ್ನು ಗೆದ್ದ,
ಬಲಾತ್ಕಾರದಿ ಕನ್ಯೆಯರ ಅಪಹರಿಸಿದ.

ಸ ವಿಪ್ರಚಿತ್ತಿಶ್ಚ ಜರಾಸುತೋsಭೂದ್ ವರಾದ್ ವಿಧಾತುರ್ಗ್ಗಿರಿಶಸ್ಯ ಚೈವ ।
ಸರ್ವೈರಜೇಯೋ ಬಲಮುತ್ತಮಂ ತತೋ ಜ್ಞಾತ್ವೈವ ಕಂಸಸ್ಯ ಮುದಾ ಸುತೇ ದದೌ ॥೧೧.೨೦೩॥

ನಿವಾರಯಾಮಾಸ ನ ಕಂಸಮುದ್ಧತಂ ಶಕ್ತೋsಪಿ ಯೋ ಯಸ್ಯ ಬಲೇ ನ ಕಶ್ಚಿತ್ ।
ತುಲ್ಯಃ ಪೃಥಿವ್ಯಾಂ ವಿವರೇಷು ವಾ ಕ್ವಚಿದ್  ವಶೇ ಬಲಾದ್ ಯೋ ನೃಪತೀಂಶ್ಚ ಚಕ್ರೇ ॥೧೧.೨೦೪॥

ಜರಾಸಂಧ ಹಿಂದೆ ತಾನು ವಿಪ್ರಚಿತ್ತಿಯಾಗಿದ್ದವ,
ಬ್ರಹ್ಮಶಿವವರಬಲದಿಂದ ಸರ್ವರಿಗೂ ಅಜೇಯ.
ಕಂಸನ ಬಲ ತಿಳಿದಿದ್ದ ಜರಾಸಂಧ,
ಮಕ್ಕಳ ಕೊಟ್ಟಾದ ಅವನಿಗೆ ಮಾವ.
ಜರಾಸಂಧಗೆ ಬಲಸಮಾನರು ಭುವಿಯ ಯಾವ ಭಾಗದಲ್ಲಿ ಇಲ್ಲ,
ಬಲಾಢ್ಯನಾಗಿ ಅನೇಕರಾಜರ ಜಯಿಸಿದ್ದರೂ ಉನ್ಮತ್ತ ಕಂಸನ ತಡೆಯಲಿಲ್ಲ.

ಹತೌ ಪುರಾ ಯೌ ಮಧುಕೈಟಭಾಖ್ಯೌ ತ್ವಯೈವ ಹಂಸೋ ಡಿಭಕಶ್ಚ್ ಜಾತೌ ।
ವರಾದಜೈಯೌ ಗಿರಿಶಸ್ಯ ವೀರೌ ಭಕ್ತೌ ಜರಾಸನ್ಧಮನು ಸ್ಮ ತೌ ಶಿವೇ ॥೧೧.೨೦೫॥

ನಿನ್ನಿಂದ ಹಿಂದೆ ಹತರಾದ ಮಧು ಕೈಟಭರು,
ಅವರೇ ಹಂಸ ಡಿಭಗರಾಗಿ ಮತ್ತೆ ಹುಟ್ಟಿರುವರು.
ಶಿವವರಬಲದಿಂದ ಅಜೇಯರು ವೀರರು,
ಜರಾಸಂಧನ ನಂತರದ ಮುಖ್ಯ ಶಿವಭಕ್ತರು.

ಅನ್ಯೇsಪಿ ಭೂಮಾವಸುರಾಃ ಪ್ರಜಾತಾಸ್ತ್ವಯಾ ಹತಾ ಯೇ ಸುರದೈತ್ಯಸಙ್ಗರೇ ।
ಅನ್ಯೇ ತಥೈವಾನ್ಧತಮಃ ಪ್ರಪೇದಿರೇ ಕಾರ್ಯ್ಯಾ ತಥೈಷಾಂ ಚ ತಮೋಗತಿಸ್ತ್ವಯಾ ॥೧೧.೨೦೬॥

ಹಿಂದೆ ದೇವಾಸುರ ಯುದ್ಧದಲ್ಲಿ ನಿನ್ನಿಂದ ಕೊಲ್ಲಲ್ಪಟ್ಟ ಅಸುರರು,
ಕೆಲವರು ಅವರಲ್ಲಿ ಆಗಲೇ ಅಂಧಂತಮಸ್ಸನ್ನು ಹೊಂದಿರುವರು.
ಉಳಿದ ಹಲವರದು ಇದೀಗ ಭುವಿಯಲ್ಲಾಗಿದೆ ಜನನ,
ಅವರಿಗೆಲ್ಲಾ ನಿನ್ನಿಂದಾಗಬೇಕಿದೆ ಅಂಧಂತಮಸ್ಸು ಪ್ರದಾನ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula