ಯೋ ಬಾಣಮಾವಿಶ್ಯ ಮಹಾಸುರೋsಭೂತ್ ಸ್ಥಿತಃ ಸ ನಾಮ್ನಾ
ಪ್ರಥಿತೋsಪಿ ಬಾಣಃ
।
ಸ ಕೀಚಕೋ ನಾಮ ಬಭೂವ ರುದ್ರವರಾದವಧ್ಯಃ ಸ ತಮಃ ಪ್ರವೇಶ್ಯಃ ॥೧೧.೨೧೮॥
ಬಾಣನೆಂಬ
ಹೆಸರಿನವನು ಬಲಿಚಕ್ರವರ್ತಿಯ ಪುತ್ರ,
ಅವನೊಳು
ಪ್ರವೇಶಿಸಿದವನು ದೈತ್ಯ ಬಾಣಾಸುರ.
ಅವನೇ ಕೀಚಕನೆಂಬ
ಹೆಸರಿನಿಂದ ಹುಟ್ಟಿದಾತ,
ರುದ್ರದೇವ
ವರಬಲದಿಂದ ಅವಧ್ಯನಾಗಿರುವಾತ.
ಅಂಧಂತಮಸ್ಸಿಗೆ
ಬೀಳಲು ಅತ್ಯಂತ ಅರ್ಹನಾದಾತ.
ಅತಸ್ತ್ವಯಾ ಭುವ್ಯವತೀರ್ಯ್ಯ ದೇವಕಾರ್ಯ್ಯಾಣಿ ಕಾರ್ಯ್ಯಾಣ್ಯಖಿಲಾನಿ
ದೇವ ।
ತ್ವಮೇವ ದೇವೇಶ ಗತಿಃ ಸುರಾಣಾಂ ಬ್ರಹ್ಮೇಶಶಕ್ರೇನ್ದುಯಮಾದಿಕಾನಾಮ್
॥೧೧.೨೧೯॥
ಆ ಕಾರಣದಿಂದ ದೇವ;ಭೂಮಿಯಲ್ಲಾಗಬೇಕಿದೆ
ನಿನ್ನವತಾರ,
ನಿನ್ನಿಂದ
ಮಾಡಪಡಲ್ಬೇಕಾಗಿದೆ ಅನೇಕಾನೇಕ ದೇವಕಾರ್ಯ.
ಓ ದೇವತೆಗಳ ಒಡೆಯ
ನೀನು ಅತ್ಯದ್ಭುತ ಅನಂತ ಮೂಲಶಕ್ತಿ,
ಬ್ರಹ್ಮ ರುದ್ರ
ಇಂದ್ರ ಯಮ ಮುಂತಾದ ದೇವತೆಗಳಿಗೆ ನೀನೇ ಗತಿ.
ತ್ವಮೇವ ನಿತ್ಯೋದಿತಪೂರ್ಣ್ಣಶಕ್ತಿಸ್ತ್ವಮೇವ
ನಿತ್ಯೋದಿತಪೂರ್ಣ್ಣಚಿದ್ಘನಃ ।
ತ್ವಮೇವ ನಿತ್ಯೋದಿತಪೂರ್ಣ್ಣಸತ್ಸುಖಸ್ತ್ವದೃಙ್ ನ ಕಶ್ಚಿತ್ ಕುತ ಏವ
ತೇsಧಿಕಃ ॥೧೧.೨೨೦ ॥
ನೀನೊಬ್ಬನೇ
ನಿತ್ಯದಲ್ಲಿ ಅಭಿವ್ಯಕ್ತವಾಗಬಲ್ಲಂಥ ಪೂರ್ಣಶಕ್ತಿ,
ನೀನೊಬ್ಬನೇ
ಎಂದೆಂದಿಗೂ ಪೂರ್ಣಜ್ಞಾನದ ಕರಗದ ಬುತ್ತಿ.
ನೀನೊಬ್ಬನೇ
ಪರಿಪೂರ್ಣ ಉದ್ಭವವಾದ ಜ್ಞಾನಾನಂದ,
ನಿನಗೆ ಸಮವೇ
ಇರದಮೇಲೆ ಮಿಗಿಲಾದವನು ಇನ್ನೆಲ್ಲಿಂದ.
ಇತೀರಿತೋ ದೇವವರೈರುದಾರಗುಣಾರ್ಣ್ಣವೋsಕ್ಷೋಭ್ಯತಮಾಮೃತಾಕೃತಿಃ
।
ಉತ್ಥಾಯ ತಸ್ಮಾತ್ ಪ್ರಯಯಾವನನ್ತಸೋಮಾರ್ಕ್ಕಕಾನ್ತಿದ್ಯುತಿರನ್ವಿತೋsಮರೈಃ
॥೧೧.೨೨೧॥
ಹೀಗೆ ದೇವತೆಗಳಿಂದ
ಸ್ತೋತ್ರ ಮಾಡಲ್ಪಟ್ಟ ಭಗವಂತ,
ಉತ್ಕೃಷ್ಟ
ಗುಣಗಳಿಗೆ ಕಡಲಿನಂತೆ ಇರುವ ಅನಂತ.
ಎಂದೂ ನಾಶವಾಗದ
ದೇಹವುಳ್ಳ ಆ ನಾರಾಯಣ,
ಶೇಷಶಯ್ಯೆಯಿಂದ
ಎದ್ದು ಹೊರಟ ಲಕ್ಷ್ಮೀರಮಣ.
ಎಣೆಯಿರದ ಸೂರ್ಯ
ಚಂದ್ರರ ಕಾಂತಿವುಳ್ಳ ಸ್ವಾಮಿ,
ದೇವತೆಗಳಿಂದನುಸರಿಸಲ್ಪಟ್ಟು ಹೊರಟ ಭಕ್ತಪ್ರೇಮಿ.
No comments:
Post a Comment
ಗೋ-ಕುಲ Go-Kula