Friday, 1 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 207 - 210

ವ್ಯಾಸಾವತಾರೇ ನಿಹತಸ್ತ್ವಯಾ ಯಃ ಕಲಿಃ ಸುಶಾಸ್ತ್ರೋಕ್ತಿಭಿರೇವ ಚಾದ್ಯ ।
ಶ್ರುತ್ವಾ ತ್ವದುಕ್ತೀಃ ಪುರುಷೇಷು ತಿಷ್ಠನ್ನೀಷಚ್ಚಕಾರೇವ ಮನಸ್ತ್ವಯೀಶ ॥೧೧.೨೦೭ ॥

ಎಲೋ ಶ್ರೀಹರಿನಿನ್ನಿಂದಾದಾಗ ವ್ಯಾಸಾವತಾರ,
ನೀನು ಹೇಳಿದೆ ಒಳ್ಳೇ ಶಾಸ್ತ್ರೀಯ ತತ್ವಗಳ ಸಾರ.
ಪುರುಷರ ಮನಸ್ಸಲ್ಲಿದ್ದ ಕಲಿಯದಾಗಿತ್ತು ಸಂಹಾರ.
ಸಜ್ಜನರಲ್ಲಿದ್ದು ನಿನ್ನುಕ್ತಿಗಳ ಕಲಿ ಕೇಳಿದ ವ್ಯಾಪಾರ,
ಹಾಗೆ ಕಲಿಗೂ ಬಂದಿದೆಯೇನೋ ನಿನ್ನಲ್ಲಿ ಆದರ.

ರಾಮಾತ್ಮನಾ ಯೇ ನಿಹತಾಶ್ಚ ರಾಕ್ಷಸಾ ದೃಷ್ಟ್ವಾ ಬಲಂ ತೇsಪಿ ತದಾ ತವಾದ್ಯ ।
ಸಮಂ ತವಾನ್ಯಂ ನಹಿ ಚಿನ್ತಯನ್ತಿ ಸುಪಾಪಿನೋsಪೀಶ ತಥಾ ಹನೂಮತಃ ॥೧೧.೨೦೮॥

ಹೇ ಈಶ, ರಾಮನಾಗಿದ್ದಾಗ ನಿನ್ನಿಂದಾದ ಯಾವ ರಕ್ಕಸರ ಸಂಹಾರ,
ನಿನ್ನ ನೋಡಿದ ಅವರಿಗೂ ಬಂದಿದೆ ನಿನ್ನಂಥ ಧೀರ ಇಲ್ಲೆಂಬ ನಿರ್ಧಾರ.
ಅಂಥಾ ಪಾಪಿಷ್ಠರಿಂದಲೂ ಹನುಮಂತನ ಗುಣ ಚಿಂತನಾ ವ್ಯಾಪಾರ.

ಯೇ ಕೇಶವ ತ್ವದ್ಬಹುಮಾನಯುಕ್ತಾಸ್ತಥೈವ ವಾಯೌ ನಹಿ ತೇ ತಮೋsನ್ಧಮ್ ।
ಯೋಗ್ಯಾಃ ಪ್ರವೇಷ್ಟುಂ ತದತೋ ಹಿ ಮಾರ್ಗ್ಗಾರ್ಚ್ಚಾಲ್ಯಾಸ್ತ್ವಯಾ ಜನಯಿತ್ವೈವ ಭೂಮೌ ॥೧೧.೨೦೯॥

ಹೇ ಕೇಶವ,ಯಾರಿಗೆ ಬರುತ್ತದೋ ನಿನ್ನಲ್ಲಿ ಮುಖ್ಯಪ್ರಾಣನಲ್ಲಿ ಮಹತ್ವಬುದ್ಧಿಯ ಸಾರ,
ಸಹಜವಾಗೇ ಅಂಥವರಿಗೆ ತೆರೆಯದೆ ಮುಚ್ಚುತ್ತದೆ ಅಂಧಂತಮಸ್ಸಿನ ದ್ವಾರ.
ಹಾಗಾಗಿ ಅಂಥವರನ್ನು ಭುವಿಯಲ್ಲಿ ಹುಟ್ಟಿಸು,
ಅವರನ್ನೆಲ್ಲಾ ಸನ್ಮಾರ್ಗದಿಂದ ಚ್ಯುತಿಗೊಳಿಸು.

ನಿತಾನ್ತಮುತ್ಪಾದ್ಯ ಭವದ್ವಿರೋಧಂ ತಥಾ ಚ ವಾಯೌ ಬಹುಭಿಃ ಪ್ರಕಾರೈಃ ।
ಸರ್ವೇಷು ದೇವೇಷು ಚ ಪಾತನೀಯಾಸ್ತಮಸ್ಯಥಾನ್ಧೇ ಕಲಿಪೂರ್ವಕಾಸುರಾಃ ॥೧೧.೨೧೦॥

ನಿನ್ನಲ್ಲಿ ವಾಯುದೇವರಲ್ಲಿ ವಿವಿಧ ದೇವತೆಗಳಲ್ಲಿ,
ನಾನಾಬಗೆಯ ತೀವ್ರ ವಿರೋಧ ಹುಟ್ಟಬೇಕವರಲ್ಲಿ.
ಕಲಿ ಮುಂತಾದ ಅಸುರರು ಬೀಳಬೇಕು ಅಂಧತಮಸ್ಸಲ್ಲಿ.

No comments:

Post a Comment

ಗೋ-ಕುಲ Go-Kula