ಸ ಮೇರುಮಾಪ್ಯಾsಹ ಚತುರ್ಮ್ಮುಖಂ ಪ್ರಭುರ್ಯ್ಯತ್ರ ತ್ವಯೋಕ್ತೋsಸ್ಮಿ ಹಿ
ತತ್ರ ಸರ್ವಥಾ ।
ಪ್ರಾದುರ್ಭವಿಷ್ಯೇ ಭವತೋ ಹಿ ಭಕ್ತ್ಯಾ ವಶಸ್ತ್ವಿವಾಹಂ ಸ್ವವಶೋsಪಿ
ಚೇಚ್ಛಯಾ ॥೧೧.೨೨೨॥
ದೇವತೆಗಳೊಂದಿಗೆ
ಹರಿ ಮೇರುಪರ್ವತದ ಬಳಿ ಬಂದ,
ಚತುರ್ಮುಖ
ಬ್ರಹ್ಮನುದ್ದೇಶಿಸಿ ಭಗವಂತ ಹೀಗೆ ಹೇಳಿದ.
ಸರ್ವಥಾ ನೀನು
ಹೇಳಿದಲ್ಲಿಯೇ ನಾನು ಅವತರಿಸುವೆ,
ಸ್ವತಂತ್ರನಾದರೂ
ಸ್ವೇಚ್ಛೆಯಿಂದ ನಿನ್ನ ಭಕ್ತಿಗೆ ವಶನಾಗಿರುವೆ.
ಬ್ರಹ್ಮಾ ಪ್ರಣಮ್ಯಾsಹ ತಮಾತ್ಮಕಾರಣಂ ಪ್ರಾದಾಂ ಪುರಾsಹಂ
ವರುಣಾಯ ಗಾಃ ಶುಭಾಃ ।
ಜಹಾರ ತಾಸ್ತಸ್ಯ ಪಿತಾsಮೃತಸ್ರವಾಃ ಸ ಕಶ್ಯಪೋ
ದ್ರಾಕ್ ಸಹಸಾsತಿಗರ್ವಿತಃ
॥೧೧.೨೨೩॥
ಮಾತ್ರಾ ತ್ವದಿತ್ಯಾ ಚ ತಥಾ ಸುರಭ್ಯಾ ಪ್ರಚೋದಿತೇನೈವ ಹೃತಾಸು ತಾಸು ।
ಶ್ರುತ್ವಾ ಜಲೇಶಾತ್ ಸ ಮಯಾ ತು ಶಪ್ತಃ ಕ್ಷತ್ರೇಷು ಗೋಜೀವನಕೋ ಭವೇತಿ
॥೧೧.೨೨೪ ॥
ಬ್ರಹ್ಮ ತನ್ನ
ಪಿತನಾದ ಭಗವಂತಗೆ ವಂದಿಸುತ್ತಾ ಹೇಳುತ್ತಾನೆ,
ಹಿಂದೆ ವರುಣಗೆ
ಅಮೃತಸುರಿಸುವ ಗೋವುಗಳ ಕೊಟ್ಟಿದ್ದು ನಾನೆ.
ಅವನ ತಂದೆ ಕಾಶ್ಯಪ
ಅಹಂಕಾರ ಬಲಾತ್ಕಾರದಿಂದ ಅವನ್ನಪಹರಿಸಿದ್ದಾನೆ.
ಕಾಶ್ಯಪ ಅದಿತಿ
ಸುರಭಿಯರಿಂದ ಪ್ರಚೋದಿತನಾದ,
ಹಾಗೆ ವರುಣನ
ಗೋವುಗಳನ್ನು ತಾ ಅಪಹರಿಸಿದ.
ವರುಣನಿಂದ ಎಲ್ಲ
ತಿಳಿದ ನಾನು ಕಾಶ್ಯಪನಿಗೆ ಶಾಪ ಇತ್ತೆ ಹೀಗೆ,
ಕ್ಷತ್ರಿಯನಾಗಿ
ಹುಟ್ಟಿದರೂ ಗೋರಕ್ಷಣೆಯಿಂದ ನಿನ್ನ ಜೀವನಬಗೆ.
ಶೂರಾತ್ ಸ ಜಾತೋ ಬಹುಗೋಧನಾಢ್ಯೋ ಭೂಮೌ ಯಮಾಹುರ್ವಸುದೇವ ಇತ್ಯಪಿ ।
ತಸ್ಯೈವ ಭಾರ್ಯ್ಯಾ ತ್ವದಿತಿಶ್ಚ ದೇವಕೀ ಬಭೂವ ಚಾನ್ಯಾ ಸುರಭಿಶ್ಚ
ರೋಹಿಣೀ ॥೧೧.೨೨೫॥
ಕಾಶ್ಯಪ ಭುವಿಯಲ್ಲಿ
ಶೂರನಿಂದ ಜನಿಸಿ ಗೋಸಂಪತ್ತಿನ ಒಡೆಯನಾದ,
ಬಹುದನಗಳ ಹೊಂದಿ
ಗೋಧನದಿಂದ ಶೋಭಿಸುವ ವಸುದೇವನಾದ.
ಅದಿತಿ ದೇವಕಿಯಾಗಿ
ಹುಟ್ಟಿ ಬಂದಿದ್ದಳಾಗ,
ಸುರಭಿ ರೋಹಿಣಿಯಾಗಿ ಹೆಂಡಂದಿರಾದರಾಗ.
No comments:
Post a Comment
ಗೋ-ಕುಲ Go-Kula