ಪುನರ್ಮ್ಮನೋಃ ಫಲವತ್ತ್ವಾಯ ಮಾದ್ರೀ ಸಮ್ಪ್ರಾರ್ತ್ಥಯಾಮಾಸ ಪತಿಂ ತದುಕ್ತಾ ।
ಪೃಥಾsವಾದೀತ್ ಕುಟಿಲೈಷಾ ಮದಾಜ್ಞಾಮೃತೇ ದೇವಾವಾಹ್ವಯಾಮಾಸ ದಸ್ರೌ ॥೧೨.೧೨೬॥
ಅತೋ ವಿರೋಧಂ ಚ ಮದಾತ್ಮಜಾನಾಂ ಕುರ್ಯ್ಯಾದೇಷೇತ್ಯೇವ ಭೀತಾಂ ನ ಮಾಂ ತ್ವಮ್ ।
ನಿಯೋಕ್ತುಮರ್ಹಃ ಪುನರೇವ ರಾಜನ್ನಿತೀರಿತೋsಸೌ ವಿರರಾಮ ಕ್ಷಿತೀಶಃ ॥೧೨.೧೨೭॥
ಮಾದ್ರಿಯಿಂದ ಎರಡು ಮಕ್ಕಳ ಪಡೆಯುವಿಕೆ,
ಮತ್ತೆ ಮಂತ್ರ ಫಲವತ್ತತೆಗೆ ಮಾದ್ರಿಯ ಬೇಡಿಕೆ.
ಪಾಂಡುವಿನಿಂದ ಅದ ಹೇಳಲ್ಪಟ್ಟ ಕುಂತೀದೇವಿ ಹೀಗೆ ಹೇಳುತ್ತಾಳೆ,
ನಮ್ಮರಿವಿಗೆ ಬಾರದೆ ಕುಟಿಲತೆಯಿಂದ ಇಬ್ಬರು ದೇವತೆಗಳ ಕರೆದಿದ್ದಾಳೆ.
ಆದಕಾರಣ ಈಕೆಯಿಂದ ನನ್ನ ಮಕ್ಕಳಿಗೆ ನಿಶ್ಚಯ,
ಮುಂದೆ ವಿರೋಧ ಬರಬಹುದೆಂದು ನನ್ನ ಭಯ.
ಮತ್ತೆ ಮಾಡಬೇಡ ಮಂತ್ರ ನೀಡೆಂಬ ಪ್ರಚೋದನೆ,
ಕುಂತಿಯ ವಿಶ್ಲೇಷಣೆ ಕೇಳಿ ಪಾಂಡು ಆದ ಸುಮ್ಮನೆ.
ವಿಶೇಷನಾಮ್ನೈವ ಸಮಾಹುತಾಃ ಸುತಾನ್ ದಧ್ಯುಃ ಸುರಾ ಇತ್ಯವಿಶೇಷಿತಂ ಯಯೋಃ।
ವಿಶೇಷನಾಮಾಪಿ ಸಮಾಹ್ವಯತ್ ತೌ ಮನ್ತ್ರಾವೃತ್ತಿರ್ನ್ನಾಮಭೇದೇsಸ್ಯ ಚೋಕ್ತಾ
॥೧೨.೧೨೮॥
ದೇವತೆಗಳಿಗೆ ಉಂಟು ವಿಶೇಷ ನಾಮ,
ಅದನುಚ್ಚರಿಸಿ ಕರೆದಾಗವರು ಬರುವ ನೇಮ.
ಕರೆಯಲ್ಪಡುವ ದೇವತೆಗಳಿಗೆ ನಾಮಭೇದವಿದ್ದಲ್ಲಿ ಮಾತ್ರ,
ಪುನರುಚ್ಚರಿಸಿ ಪ್ರಾರ್ಥಿಸಿ ಹೇಳಲ್ಪಡಬೇಕಾಗುತ್ತದೆ ಮಂತ್ರ.
ಅಶ್ವೀದೇವತೆಗಳಿಗೆ ಸಾಕಾಯಿತು ಒಂದುಬಾರಿ ಕರೆದ ತಂತ್ರ.
ಯುಧಿಷ್ಠಿರಾದ್ಯೇಷು ಚತುರ್ಷು ವಾಯುಃ ಸಮಾವಿಷ್ಟಃ ಫಲ್ಗುನೇsಥೋ ವಿಶೇಷಾತ್ ।
ಯುಧಿಷ್ಠಿರೇ ಸೌಮ್ಯರೂಪೇಣ ವಿಷ್ಟೋ ವೀರೇಣ ರೂಪೇಣ ಧನಞ್ಜಯೇsಸೌ ॥೧೨.೧೨೯॥
ಯುಧಿಷ್ಠಿರ ಮೊದಲಾದ ನಾಲ್ವರಲ್ಲೂ ವಾಯುವಿನ ಆವೇಶ,
ಆದರೆ ಅರ್ಜುನನಲ್ಲಿ ಮಾತ್ರ ಇದ್ದದ್ದದು ಹೆಚ್ಚಾದ
ವಿಶೇಷ.
ಯುಧಿಷ್ಠರನಲ್ಲಿತ್ತು ಮುಖ್ಯಪ್ರಾಣನ ಶಾಂತರೂಪ,
ಅರ್ಜುನನಲ್ಲಿತ್ತು ಮುಖ್ಯಪ್ರಾಣನ ವೀರರೂಪ.
ಶೃಙ್ಗಾರರೂಪಂ ಕೇವಲಂ ದರ್ಶಯಾನೋ ವಿವೇಶ ವಾಯುರ್ಯ್ಯಮಜೌ ಪ್ರಧಾನಃ ।
ಶೃಙ್ಗಾರಕೈವಲ್ಯಮಭೀಪ್ಸಮಾನಃ ಪಾಣ್ಡುರ್ಹಿ ಪುತ್ರಂ ಚಕಮೇ ಚತುರ್ತ್ಥಮ್ ॥೧೨.೧೩೦॥
ಕೇವಲ ಶೃಂಗಾರರೂಪ ತೋರಿಸುವುದಕ್ಕಾಗಿ,
ಮುಖ್ಯಪ್ರಾಣ ಅವಳಿಗಳಲ್ಲಿ ಪ್ರವೇಶಿಸಿದವರಾಗಿ,
ಪಾಂಡು ಬಯಸಿದ್ದ ಸುಂದರಮಗುವ ನೀಡುವರಾಗಿ.
ಶೃಙ್ಗಾರರೂಪೋ ನಕುಲೋ ವಿಶೇಷಾತ್ ಸುನೀತಿರೂಪಃ ಸಹದೇವಂ ವಿವೇಶ ।
ಗುಣೈಃ ಸಮಸ್ತೈಃ ಸ್ವಯಮೇವ ವಾಯುರ್ಬಭೂವ ಭೀಮೋ ಜಗದನ್ತರಾತ್ಮಾ ॥೧೨.೧೩೧॥
ಶೃಂಗಾರರೂಪನಾಗಿ ನಕುಲನಲ್ಲಿ ಪ್ರವೇಶ,
ಸುನೀತಿರೂಪನಾಗಿ ಸಹದೇವನಲ್ಲಿ ಪ್ರವೇಶ.
ಜಗತ್ತಿನ ಅಂತರ್ನಿಯಾಮಕನಾದ ಪ್ರಾಣರೂಪ,
ಎಲ್ಲ ಗುಣತುಂಬಿದ ವಾಯು ತಾಳಿತು ಭೀಮರೂಪ.
ಸುಪಲ್ಲವಾಕಾರತನುರ್ಹಿ ಕೋಮಳಃ ಪ್ರಾಯೋ ಜನೈಃ ಪ್ರೋಚ್ಯತೇ ರೂಪಶಾಲೀ ।
ತತಃ ಸುಜಾತಂ ವರವಜ್ರಕಾಯೌ ಭೀಮಾರ್ಜ್ಜುನಾವಪ್ಯೃತೇ ಪಾಣ್ಡುರೈಚ್ಛತ್ ॥೧೨.೧೩೨॥
ಮೃದುವಾಗಿ ಕೋಮಲವಾಗಿರುವ ದೇಹ,
ಹೆಚ್ಚಿನ ಪಕ್ಷದಲ್ಲಿ ರೂಪಶಾಲಿ ಎಂಬ ಭಾವ.
ಉತ್ಕೃಷ್ಟ ವಜ್ರಕಾಯದ ಭೀಮ ಅರ್ಜುನರನ್ನು ಬಿಟ್ಟು,
ಕೋಮಲಮೈಯ ಚೆಲುಮಗನ ಕೇಳಿದ್ದ ಪಾಂಡು ಆಸೆಪಟ್ಟು.
ಅಪ್ರಾಕೃತಾನಾಂ ತು ಮನೋಹರಂ ಯದ್ ರೂಪಂ ದ್ವಾತ್ರಿಂಶಲ್ಲಕ್ಷಣೋಪೇತಮಗ್ರ್ಯಮ್ ।
ತನ್ಮಾರುತೋ ನಕುಲೇ ಕೋಮಳಾಭ ಏವಂ ವಾಯುಃ ಪಞ್ಚರೂಪೋsತ್ರ ಚಾsಸೀತ್ ॥೧೨.೧೩೩॥
ವಾಯುದೇವರದು ಅಪ್ರಾಕೃತವಾದ ಮೂವತ್ತೆರಡು
ಲಕ್ಷಣ,
ಅವೆಲ್ಲ ಧರಿಸಿ ಭೀಮಸೇನಾಗಿ ಬಂದಿದ್ದ ತಾ ಮುಖ್ಯಪ್ರಾಣ.
ಪಾಂಡುವಿನಿಚ್ಛೆಯಂತೆ ಮುಖ್ಯಪ್ರಾಣ ನಕುಲನಲ್ಲಿ ಕೋಮಲ,
ನಾಕರಲ್ಲಿ ನಾಕು ಪಾಂಡವರಲ್ಲಿ ಪಂಚವಾಗಿ ನಿಂತ ತಾ ಅನಿಲ.
ಅತೀತೇನ್ದ್ರಾ ಏವ ತೇ ವಿಷ್ಣುಷಷ್ಠಾಃ ಪೂರ್ವೇನ್ದ್ರೋsಸೌ ಯಜ್ಞನಾಮಾ ರಮೇಶಃ
।
ಸ ವೈ ಕೃಷ್ಣೋ ವಾಯುರಥ ದ್ವಿತೀಯಃ ಸ ಭೀಮಸೇನೋ ಧರ್ಮ್ಮ ಆಸೀತ್ ತೃತೀಯಃ ॥೧೨.೧೩೪॥
ಯಧಿಷ್ಠಿರೋsಸಾವಥ ನಾಸತ್ಯದಸ್ರೌ ಕ್ರಮಾತ್ ತಾವೇತೌ ಮಾದ್ರವತೀಸುತೌ ಚ ।
ಪುರನ್ದರಃ ಷಷ್ಠ ಉತಾತ್ರ ಸಪ್ತಮಃ ಸ ಏವೈಕಃ ಫಲ್ಗುನೋ ಹ್ಯೇತ ಇನ್ದ್ರಾಃ ॥೧೨.೧೩೫॥
ಪಂಚಪಾಂಡವರು ವಿಷ್ಣು ಸೇರಿ ಆರು ಮಂದಿಯೂ ಇಂದ್ರರೇ,
ಮೊದಲ ಇಂದ್ರ ಯಜ್ಞನಾಮಕ ವಿಷ್ಣು ಕೃಷ್ಣನಾಗಿ ಬಂದಿದ್ದರೆ,
ಎರಡನೇ ಇಂದ್ರ ವಾಯು ಭೀಮ;ಮೂರನೆಯವ ಯಮನಾಗಿದ್ದಾರೆ.
ಆ ಯಮಧರ್ಮನೇ ಯುಧಿಷ್ಠಿರನಾಗಿ ಬಂದ ಯೋಗ,
ನಾಸತ್ಯ ದಸ್ರರು ಇಂದ್ರರಾಗಿ -ಮಾದ್ರಿದೇವಿಯ ಪುತ್ರರಾದರಾಗ.
ಪುರಂದರ ಆರು ಮತ್ತು ಏಳನೇ ಇಂದ್ರ -ಅರ್ಜುನನಾಗಿ ಬಂದನಾಗ.
ಕ್ರಮಾತ್ ಸಂಸ್ಕಾರಾನ್ ಕ್ಷತ್ರಿಯಾಣಾಮವಾಪ್ಯ 'ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ' ।
ಸರ್ವೇ ಸರ್ವಜ್ಞಾಃ ಸರ್ವಧರ್ಮ್ಮೋಪಪನ್ನಾಃ ಸರ್ವೇ ಭಕ್ತಾಃ ಕೇಶವೇsತ್ಯನ್ತಯುಕ್ತಾಃ ॥೧೨.೧೩೬॥
ಕ್ರಮವಾಗಿ ಕ್ಷತ್ರಿಯ ಸಂಸ್ಕಾರ ಹೊಂದಿದ ಈ ಪಾಂಡವರು,
ಮಹಿಮೆ ಸ್ವರೂಪಸಾಮರ್ಥ್ಯವುಳ್ಳವರಾಗಿ ಬೆಳೆದರು.
ಯೋಗ್ಯತೆಗೆ ಅನುಗುಣವಾಗಿ ಎಲ್ಲವನ್ನೂ ಬಲ್ಲವರು,
ಧರ್ಮಯುಕ್ತರಾಗಿ ಭಗವಂತನ ಪ್ರೀತಿಯ ಭಕ್ತರು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಪಾಣ್ಡವೋತ್ಪತ್ತಿರ್ನ್ನಾಮ ದ್ವಾದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯ ಅನುವಾದ,
ಪಾಂಡವೋತ್ಪತ್ತಿ ಹೆಸರಿನ ಹನ್ನೆರಡನೇ ಅಧ್ಯಾಯ,
ಪಾಂಡವಮಿತ್ರ
ಕೃಷ್ಣನಡಿಗಳಿಗರ್ಪಿಸಿದ ಧನ್ಯಭಾವ.