ಜ್ಯೇಷ್ಠಂ ವಿಹಾಯ ಸ ಕದಾಚಿದಚಿನ್ತ್ಯಶಕ್ತಿರ್ಗ್ಗೋಗೋಪಗೋಗಣಯುತೋ
ಯಮುನಾ ಜಲೇಷು।
ರೇಮೇ ಭವಿಷ್ಯದನುವೀಕ್ಷ್ಯ ಹಿ ಗೋಪದುಃಖಂ ತತ್ಬಾಧನಾಯ ನಿಜಮಗ್ರಜಮೇಷು
ಸೋsಧಾತ್ ॥೧೩.೩೪॥
ಸರ್ವಜ್ಞನಾದ
ಶ್ರೀಕೃಷ್ಣನ ಅಚಿಂತ್ಯ ಶಕ್ತಿಯದು ಅಪಾರ,
ಒಮ್ಮೆ ಅಣ್ಣನಾದ
ಬಲರಾಮನ ಬೇಕೆಂದೇ ಬಿಟ್ಟ ದೂರ.
ಗೋವು
ಗೋಪಾಲಕರೊಡಗೂಡಿ ಮಾಡಿದ ಯಮುನಾ ಜಲವಿಹಾರ.
ಗೋಪಾಲಕರು ಮುಂದೆ
ಎದುರಿಸಬೇಕಾದ ದುಃಖ ಕೃಷ್ಣ ಮನಗಂಡ ನೋಟ,
ಅದರ
ಪರಿಹಾರಕ್ಕೆಂದೇ ಅಣ್ಣ ಬಲರಾಮನ ಬಿಟ್ಟ ಸರ್ವಜ್ಞ ಶ್ರೀಕೃಷ್ಣನಾಟ.
ಸ ಬ್ರಹ್ಮಣೋ ವರಬಲಾದುರಗಂ ತ್ವವದ್ಧ್ಯಂ
ಸರ್ವೈರವಾರ್ಯ್ಯವಿಷವೀರ್ಯ್ಯಮೃತೇ ಸುಪರ್ಣ್ಣಾತ್ ।
ವಿಜ್ಞಾಯ ತದ್ವಿಷವಿದೂಷಿತವಾರಿಪಾನಸನ್ನಾನ್ ಪಶೂನಪಿ ವಯಸ್ಯಜನಾನ್ ಸ
ಆವೀತ್ ॥೧೩.೩೫॥
ಬ್ರಹ್ಮದೇವರ
ವರಬಲದಿಂದ ಅವಧ್ಯನಾಗಿದ್ದ ,
ಗರುಡನ ಬಿಟ್ಟು ಬೇರಾರಿಂದಲೂ
ತಡೆಯಲಸಾಧ್ಯವಾದ,
ಭಾರೀ ತೀಕ್ಶ್ಣ
ವಿಷದ ಕಾಳಿಯನಾಗ ಯಮುನೆಯಲ್ಲಿದ್ದ.
ಅದನರಿತ ಕೃಷ್ಣ
ವಿಷದನೀರು ಕುಡಿದು ಮಡಿದ ದನ ಜನರ ರಕ್ಷಿಸಿದ.
ತದ್ದೃಷ್ಟಿದಿವ್ಯಸುಧಯಾ ಸಹಸಾsಭಿವೃಷ್ಟಾಃ ಸರ್ವೇऽಪಿ
ಜೀವಿತಮವಾಪುರಥೋಚ್ಚಶಾಖಮ್ ।
‘ಕೃಷ್ಣಃ
ಕದಮ್ಬಮಧಿರುಹ್ಯ ತತೋsತಿತುಙ್ಗಾದಾಸ್ಪೋಟ್ಯ
ಗಾಢರಶನೋ ನ್ಯಪತದ್ ವಿಷೋದೇ॥೧೩.೩೬॥
ಭಗವಂತನ
ಕಣ್ಣನೋಟವೆಂಬ ಅಮೃತ ಕಿರಣ,
ಸೋಕಿದೊಡನೆ
ಕೊಟ್ಟಿತವರೆಲ್ಲರಿಗೆ ಮರುಜೀವನ.
ಆನಂತರ ಕೃಷ್ಣ
ಎತ್ತರದ ಕೊಂಬೆಗಳ ಕಡವೆ ಮರ ಏರಿದ,
ಸೊಂಟಕ್ಕೆ
ಗಟ್ಟಿಯಾಗಿ ತನ್ನ ಉತ್ತರೀಯವನ್ನು ಬಿಗಿದ.
ತನ್ನ ಭುಜಗಳ
ತಟ್ಟುತ್ತಾ ಅಗಾಧ ವಿಷಜಲಕ್ಕೆ ಹಾರಿದ.
‘ಸಾರ್ಪ್ಪಹ್ರದಃ
ಪುರುಷಸಾರನಿಪಾತವೇಗಸಙ್ಕ್ಷೋಭಿತೋರಗವಿಷೋಚ್ಛ್ವಸಿತಾಮ್ಬುರಾಶಿಃ ।
ಪರ್ಯ್ಯುತ್ಪ್ಲುತೋ ವಿಷಕಷಾಯವಿಭೀಷಣೋರ್ಮ್ಮಿಭೀಮೋ ಧನುಃಶತಮನನ್ತಬಲಸ್ಯ
ಕಿಂ ತತ್ ‘ ॥೧೩.೩೭॥
ಪುರುಷೋತ್ತಮ
ಶ್ರೀಕೃಷ್ಣನ ಧುಮುಕಿದ ಆ ವೇಗ,
ಕಾಳಿಯನಿದ್ದ
ಮಡುವದು ಅಲ್ಲೋಲಕಲ್ಲೋಲವಾಯಿತಾಗ.
ಕ್ಷೋಭೆಗೊಂಡ
ಕಾಳಿಯನ ವಿಷದ ಮಡುವಿನ ಆ ನೀರು,
ಭಯಂಕರ ಅಲೆಗಳಾಗಿ
ಉಕ್ಕಿ ಹರಿಯಿತಾಗ ನೂರು ಮಾರು.
ಅದ್ಯಾವ ಲೆಕ್ಕ ಅವಗೆ ಅವನನಂತ ಅಪರಿಮಿತ ಬಲದ ಮೇರು.
No comments:
Post a Comment
ಗೋ-ಕುಲ Go-Kula