Friday 5 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 38 - 42

ತಂ ಯಾಮುನಹ್ರದವಿಲೋಳಕಮಾಪ್ಯ ನಾಗಃ ಕಾಳ್ಯೋ ನಿಜೈಃ ಸಮದಶತ್ ಸಹ ವಾಸುದೇವಮ್ ।
ಭೋಗೈರ್ಬಬನ್ಧ ಚ ನಿಜೇಶ್ವರಮೇನಮಜ್ಞಃ ಸೇಹೇ ತಮೀಶ ಉತ ಭಕ್ತಿತಮತೋsಪರಾಧಮ್ ॥೧೩.೩೮॥
ಯಮುನೆಯ ಮಡುವನ್ನೇ ಕಲಕಿದಂಥಾ ತನ್ನ ಒಡೆಯ,
ತನ್ನವರೊಡಗೂಡಿ ಕೃಷ್ಣನ ಕಟ್ಟಿಹಾಕಿದ ಅಜ್ಞ ಕಾಳಿಯ.
ಸರ್ವಜ್ಞನಾದ ಶ್ರೀಕೃಷ್ಣ ಸದಾ ಸರ್ವಸಮರ್ಥನೇ,
ತೋರಿದ ತನ್ನ ಭಕ್ತ ಕಾಳಿಯನ ಅಪರಾಧಕ್ಕೆ ಸಹನೆ.

ಉತ್ಪಾತಮೀಕ್ಷ್ಯ ತು ತದಾsಖಿಲಗೋಪಸಙ್ಘಸ್ತತ್ರಾsಜಗಾಮ ಹಲಿನಾ ಪ್ರತಿಬೋಧಿತೋsಪಿ ।
ದೃಷ್ಟ್ವಾ ನಿಜಾಶ್ರಯಜನಸ್ಯ ಬಹೋಃ ಸುದುಃಖಂ ಕೃಷ್ಣಃ ಸ್ವಭಕ್ತಮಪಿ ನಾಗಮಮುಂ ಮಮರ್ದ್ದ ॥೧೩.೩೯॥
ಬಲರಾಮನಿಂದ ಕೃಷ್ಣಮಹಿಮೆ ಕೇಳಿ ತಿಳಿದಿದ್ದರೂ ಸಹ,
ಉತ್ಪಾತ ಕಂಡು ಕೃಷ್ಣನಲ್ಲಿಗೆ ಬಂತು ಗೋಪಾಲಕರ ಸಮೂಹ.
ಮನಗಂಡು ತನ್ನನಾಶ್ರಯಿಸಿ ಬಂದವರ ದುಃಖ,
ಕೃಷ್ಣ ಕಾಳಿಯನ ತುಳಿದ ಅವನಾಗಿದ್ದರೂ ತನ್ನ ಭಕ್ತ.

ತಸ್ಯೋನ್ನತೇಷು ಸ ಫಣೇಷು ನನರ್ತ್ತ ಕೃಷ್ಣೋ ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ।
ಆರ್ತ್ತೋ ಮುಖೈರುರು ವಮನ್ ರುಧಿರಂ ಸ ನಾಗೋ ‘ನಾರಾಯಣಂ ತಮರಣಂ ಮನಸಾ ಜಗಾಮ’ ॥೧೩.೪೦॥
ಅಂಥ ಕಾಳಿಯನಾಗನ ಎತ್ತರವಾಗಿರುವ ಹೆಡೆ,
ಆ ಹೆಡೆಗಳ ಮೇಲೆ ಕೃಷ್ಣನಾಡಿದ ನಾಟ್ಯದ ನಡೆ.
ಹೂಮಳೆಯೊಂದಿಗೆ ಸ್ತೋತ್ರಗೈವ ಬ್ರಹ್ಮಾದಿಗಳ ಪಡೆ.
ಸಂಕಟ ಭಯದಿಂದ ಆ ನಾಗ ಹೆಡೆಗಳಿಂದ ರಕ್ತ ಕಾರುತ್ತಾ,
ಹೋರಾಡುತ್ತಿದ್ದ -ಮನದಲ್ಲೇ ನಾರಾಯಣನ ನೆನೆಯುತ್ತಾ .

ತಚ್ಚಿತ್ರತಾಣ್ಡವವಿರುಗ್ಣಫಣಾತಪತ್ರಂ ರಕ್ತಂ ವಮನ್ತಮುರು ಸನ್ನಧಿಯಂ ನಿತಾನ್ತಮ್ ।
ದೃಷ್ಟ್ವಾsಹಿರಾಜಮುಪಸೇದುರಮುಷ್ಯ ಪತ್ನ್ಯೋ ನೇಮುಶ್ಚ ಸರ್ವಜಗದಾದಿಗುರುಂ ಭುವೀಶಮ್ ॥೧೩.೪೧॥
ಶ್ರೀಕೃಷ್ಣನ ವಿಚಿತ್ರವಾದ ಆ ನರ್ತನ,
ಜರ್ಜರಿತವಾಗುತ್ತಿತ್ತು ಆ ನಾಗನ ಫಣ.
ಬಹುವಾಗಿ ವಾಂತಿಮಾಡಿಕೊಂಡ ನಾಗನಿಗಾಯ್ತು ಬುದ್ಧಿಭ್ರಮಣ,
ಕಾತರದಿ ಶ್ರೀಕೃಷ್ಣನ ಬಳಿ ಧಾವಿಸಿ ಬಂತು ಕಾಳಿಯನ ಪತ್ನಿಯರ ಗಣ.
ಜಗದಾದಿಗುರುವಾದ ಭೂಪಾಲಗೆ ಎಲ್ಲ ಸಲ್ಲಿಸಿದರು ಭಕ್ತಿಯ ನಮನ.

ತಾಭಿಃ ಸ್ತುತಃ ಸ ಭಗವಾನಮುನಾ ಚ ತಸ್ಮೈ ದತ್ತ್ವಾsಭಯಂ ಯಮಸಹೋದರವಾರಿತೋsಮುಮ್ ।
ಉತ್ಸೃಜ್ಯ ನಿರ್ವಿಷಜಲಾಂ  ಯಮುನಾಂ ಚಕಾರ ಸಂಸ್ತೂಯಮಾನಚರಿತಃ ಸುರಸಿದ್ಧಸಾದ್ಧ್ಯೈಃ ॥೧೩.೪೨॥
ಅವರೆಲ್ಲರಿಂದ ಸ್ತೋತ್ರ ಮಾಡಲ್ಪಟ್ಟ,
ಕಾಳಿಯನಿಂದಲೂ ಸ್ತೋತ್ರ ಮಾಡಲ್ಪಟ್ಟ,
ಶ್ರೀಕೃಷ್ಣ ಕಾಳಿಯನಾಗಗೆ ಅಭಯ ಕೊಟ್ಟ.
ಕಾಳಿಯನ ಯಮುನೆಯಿಂದಾಚೆ ಕಳಿಸಿದ,
ಯಮುನಾಜಲವನ್ನು ವಿಷರಹಿತವಾಗಿಸಿದ.
ದೇವತೆಗಳಿಂದ ಸ್ತುತಿಸಲ್ಪಡುವ ಆ ಚರಿತ್ರಬದ್ಧ,
ಕೃಷ್ಣಪರಮಾತ್ಮ ಮಾಡಿದ ಯಮುನೆಯ ಶುದ್ಧ. 

No comments:

Post a Comment

ಗೋ-ಕುಲ Go-Kula