Wednesday, 19 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 155 - 157

ಸ ತತ್ರ ಜಜ್ಞಿವಾನ್ ಸ್ವಯಂ ದ್ವಿತೀಯರೂಪಕೋ ವಿಭುಃ ।
ಸವರ್ಮ್ಮದಿವ್ಯಕುಣ್ಡಲೋ ಜ್ವಲನ್ನಿವ ಸ್ವತೇಜಸಾ ॥೧೧.೧೫೫ ॥

ಸೂರ್ಯ ಕುಂತಿಯಲ್ಲಿ ಇನ್ನೊಂದು ರೂಪದಿಂದ ಹುಟ್ಟಿಬಂದ ಚೆಂದ,
ದಿವ್ಯ ಕವಚ ಕುಂಡಲಗಳ ಸಮೇತ ಕಾಂತಿಯಿಂದ ಬೆಳಗುತ್ತಾ ನಿಂದ.

ಪುರಾ ಸ ವಾಲಿಮಾರಣಪ್ರಭೂತದೋಷಕಾರಣಾತ್ ।
ಸಹಸ್ರವರ್ಮ್ಮನಾಮಿನಾsಸುರೇಣ ವೇಷ್ಟಿತೋsಜನಿ ॥೧೧.೧೫೬॥

ಹಿಂದೆ ಅವನು ವಾಲಿಯನ್ನು ಕೊಲ್ಲಿಸಿದ್ದರ ಕಾರಣದಿಂದಾದ ದೋಷ,
ಹುಟ್ಟಿ ಬಂದಿದ್ದ ಸಹಸ್ರವರ್ಮನೆಂಬ ಅಸುರ ಸುತ್ತುವರಿದುಕೊಂಡ ಆವೇಶ.

ಯಥಾ ಗ್ರಹೈರ್ವಿದೂಷ್ಯತೇ ಮತಿರ್ನ್ನೃಣಾಂ ತಥೈವ ಹಿ ।
ಅಭೂಚ್ಚ ದೈತ್ಯದೂಷಿತಾ ಮತಿರ್ದ್ದಿವಾಕರಾತ್ಮನಃ  ॥೧೧.೧೫೭॥

ಹೇಗೆ ಮನುಷ್ಯರ ಬುದ್ಧಿಗೆ ಸೂರ್ಯಾದಿ ಗ್ರಹಗಳಿಂದ ಆಗುತ್ತದೋ ಕೆಡುಕು,
ಹಾಗೆಯೇ ದಿವಾಕರನ ಬುದ್ಧಿಗೂ ಆವರಿಸಿಕೊಂಡಿತು ದೈತ್ಯರಿಂದ ಮಂಕು.
[Contributed by Shri Govind Magal] 

Tuesday, 18 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 151 - 154

ಚಕಾರ ಕರ್ಮ್ಮ ಸಾ ಪೃಥಾ ಮುನೇಃ ಸುಕೋಪನಸ್ಯ ಹಿ ।
ಯಥಾ ನ ಶಕ್ಯತೇ ಪರೈಃ ಶರೀರವಾಙ್ಮನೋನುಗಾ ॥೧೧.೧೫೧ll

ಬೇರೆ ಯಾರೊಬ್ಬರಿಂದ ಮಾಡಲಸಾಧ್ಯವಾದ ಕೆಲಸ,
ಕಾರಣವಿರದೆ ಕೋಪಗೊಳ್ಳುವ ಋಷಿ ಆ ದುರ್ವಾಸ.
ಅಂಥಾ ವಿಚಿತ್ರವಾದ ಋಷಿಯ ಸೇವಾರೂಪವಾದ ವಿಶೇಷ ಕರ್ಮ,
ಪೃಥೆ ದೇಹ ಮಾತು ಮನದಿಂದವರ ಇಂಗಿತ ತಿಳಿದು ಸೇವಿಸಿದ ಮರ್ಮ.

ಸ ವತ್ಸರತ್ರಯೋದಶಂ ತಯಾ ಯಥಾವದರ್ಚ್ಚಿತಃ ।
ಉಪಾದಿಶತ್ ಪರಂ ಮನುಂ ಸಮಸ್ತದೇವವಶ್ಯದಮ್ ॥೧೧.೧೫೨॥

ಹೀಗೆ ಸೇವೆ ಮಾಡುತ್ತಾ ಬಂದಳು ಕುಂತಿ  ಒಂದುವರ್ಷ,
ಆ ಸಮಯಕ್ಕೆ ತುಂಬಿತ್ತು ಅವಳಿಗೆ ಹದಿಮೂರು ವರ್ಷ.
ಅವಳಿಂದ ಪೂಜಿತರಾಗಿ ಸಂತುಷ್ಟರಾದರು ಮುನಿ  ದುರ್ವಾಸ,
ಕೊಟ್ಟರು ದೇವತೆಗಳ ವಶಮಾಡಿಕೊಳ್ಳುವ ಮಂತ್ರದ ಉಪದೇಶ.

ಋತೌ ತು ಸಾ ಸಮಾಪ್ಲುತಾ ಪರೀಕ್ಷಣಾಯಾ ತನ್ಮನೋಃ।
ಸಮಾಹ್ವಯದ್ ದಿವಾಕರಂ ಸ ಚಾsಜಗಾಮ ತತ್ ಕ್ಷಣಾತ್ ॥೧೧.೧೫೩ ॥

ಮೊದಲ ಋತುಸ್ನಾನಾನಂತರ ಪೃಥೆ ಕುತೂಹಲದಿ ಮಾಡಿದಳು ಮಂತ್ರಪರೀಕ್ಷ,
ಮಂತ್ರ ಪಠಿಸಿ ಕರೆದವಳಿಗೆ ಸೂರ್ಯದೇವ ತಾನು ಆಗಿಯೇ ಬಿಟ್ಟ ಪ್ರತ್ಯಕ್ಷ.

ತತೋ ನ ಸಾ ವಿಸರ್ಜ್ಜಿತುಂ ಶಶಾಕ ತಂ ವಿನಾ ರತಿಮ್ ।
ಸುವಾಕ್ಪ್ರಯತ್ನತೋsಪಿ ತಾಮಥಾsಸಸಾದ ಭಾಸ್ಕರಃ ॥೧೧.೧೫೪॥

ಹೀಗೆ ಬಂದ ಸೂರ್ಯ ತನ್ನನ್ನು ಸೇರದಂತೆ ಕುಂತಿ ಪ್ರಯತ್ನದ ವಿವಿಧ ಬಗೆ,
ಘಟನೆ ತಡೆಯಲಾಗದ ಭಾಸ್ಕರ ಕುಂತಿಯ ಸೇರುತ್ತಾನೆ ಪಡೆದವಳ ಒಪ್ಪಿಗೆ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 147 - 150


ಗಾನ್ಧಾರರಾಜಸ್ಯ ಸುತಾಮುವಾಹ ಗಾನ್ಧಾರಿನಾಮ್ನೀಂ ಸುಬಲಸ್ಯ ರಾಜಾ ।
ಜ್ಯೇಷ್ಠೋ ಜ್ಯೇಷ್ಠಾಂ ಶಕುನೇರ್ದ್ದ್ವಾಪರಸ್ಯ ನಾಸ್ತಿಕ್ಯರೂಪಸ್ಯ 
ಕುಕರ್ಮ್ಮಹೇತೋಃ  ॥೧೧.೧೪೭॥

ಸುಬಲ ಎಂಬ ಹೆಸರಿನ ಗಾಂಧಾರ ದೇಶದ ರಾಜನ ಮಗಳು ಗಾಂಧಾರಿ,
ನಾಸ್ತಿಕ್ಯ ದುಷ್ಕೃತ್ಯಗಳ ಹೇತು ದ್ವಾಪರ ಅವತಾರಿ ಶಕುನಿಯ ಸೋದರಿ.
ರಾಜ ಧೃತರಾಷ್ಟ್ರ ವರಿಸಬೇಕಾಗುತ್ತದೆ ಅವಳನ್ನು ದೈವೀಚ್ಛೆಯನುಸಾರಿ.

ಶೂರಸ್ಯ ಪುತ್ರೀ ಗುಣಶೀಲರೂಪಯುಕ್ತಾ ದತ್ತಾ ಸಖ್ಯುರೇವ ಸ್ವಪಿತ್ರಾ ।
ನಾಮ್ನಾ ಪೃಥಾ ಕುನ್ತಿಭೋಜಸ್ಯ ತೇನ ಕುನ್ತೀ ಭಾರ್ಯ್ಯಾ ಪೂರ್ವದೇಹೇsಪಿ 
ಪಾಣ್ಡೋಃ  ॥೧೧.೧೪೮॥

ಶೂರನೆಂಬ ಯಾದವನಿಗೆ ಗುಣ ಶೀಲ ರೂಪದಿ ಕೂಡಿದ ಪೃಥಾ ಎಂಬೊಬ್ಬ ಮಗಳು,
ಅವಳು ಶೂರನಿಂದಲೇ ಗೆಳೆಯ ಕುಂತೀಭೋಜನಿಗೆ ದತ್ತು ಕೊಡಲ್ಪಟ್ಟವಳು.
ಕುಂತೀಭೋಜ ಸಲಹಿದವಳ ಹೆಸರಾಯಿತು ಕುಂತಿ,
ಮೂಲದಲ್ಲವಳು (ಪಾಂಡು) ಪರಾವಹನ ಹೆಂಡತಿ.

ಕೂರ್ಮ್ಮಶ್ಚ ನಾಮ್ನಾ ಮರುದೇವ ಕುನ್ತಿಭೋಜೋsಥೈನಾಂ ವರ್ದ್ಧಯಾಮಾಸ ಸಮ್ಯಕ್ ।
ತತ್ರಾsಗಮಚ್ಛಙ್ಕರಾಂಶೋsತಿಕೋಪೋ ದುರ್ವಾಸಾಸ್ತಂ ಪ್ರಾಹ ಮಾಂ 
ವಾಸಯೇತಿ  ॥೧೧.೧೪೯॥

ಕೂರ್ಮ ಎಂದೆನಿಸಿಕೊಂಡ ಮರುದ್ದೇವತೆಯೇ ಕುಂತೀಭೋಜ ನಾಮಕನಾಗಿ ಹುಟ್ಟಿದ್ದ,
ಈ ಕುಂತೀಭೋಜ ದತ್ತು ಮಗಳು ಪೃಥೆಯನ್ನು ಬಲುಪ್ರೀತಿಯಿಂದ ಚೆನ್ನಾಗಿ ಸಾಕಿದ್ದ.
ಈ ಸಮಯದಲ್ಲಿ ರಾಜ್ಯಕ್ಕೆ ರುದ್ರಾಂಶರಾದ ಕೋಪಿಷ್ಟ ದೂರ್ವಾಸರ ಪ್ರವೇಶ,
ತಮ್ಮ ವಾಸಕ್ಕಲ್ಲಿ ತಕ್ಕದಾದ ವ್ಯವಸ್ಥೆ ಮಾಡೆಂದು ಕುಂತೀಭೋಜಗಿತ್ತರು ಆದೇಶ.

ತಮಾಹ ರಾಜಾ ಯದಿ ಕನ್ಯಕಾಯಾಃ ಕ್ಷಮಿಷ್ಯಸೇ ಶಕ್ತಿತಃ ಕರ್ಮ್ಮ ಕರ್ತ್ರ್ಯಾಃ ।
ಸುಖಂ ವಸೇತ್ಯೋಮಿತಿ ತೇನ ಚೋಕ್ತೇ ಶುಶ್ರೂಷಣಾಯಾsದಿಶದಾಶು 
ಕುನ್ತೀಮ್  ॥೧೧. ೧೫೦॥

ಕುಂತೀಭೋಜ ರಾಜ ದೂರ್ವಾಸರಲ್ಲಿ ಮಾಡಿಕೊಳ್ಳುತ್ತಾನೆ ಹೀಗೆಂದು ವಿನಂತಿ,
ಶ್ಯಕ್ತ್ಯಾನುಸಾರ ಸೇವೆ ಮಾಡುವ ಬಾಲಕಿಯ ಸಹಿಸುವಿರಾದರೆ ನೋಡಿಕೊಳ್ಳುವಳು ಕುಂತಿ.
ದೂರ್ವಾಸರಿಂದ ಬರುತ್ತದೆ ಆಯಿತು ಎಂಬ ಒಪ್ಪಿಗೆ,
ಕುಂತಿಗಾಜ್ಞಾಪಿಸುತ್ತಾನೆ ರಾಜ ದೂರ್ವಾಸರ ಸೇವೆಗೆ.
[Contributed by Shri Govind Magal]

Saturday, 15 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 143 -146


ಯೋಗ್ಯಾನಿ ಕರ್ಮ್ಮಾಣಿ ತತಸ್ತು ತೇಷಾಂ ಚಕಾರ ಭೀಷ್ಮೋ ಮುನಿಭಿರ್ಯ್ಯಥಾವತ್ ।
ವಿದ್ಯಾಃ ಸಮಸ್ತಾ ಅದದಾಚ್ಚ ಕೃಷ್ಣಸ್ತೇಷಾಂ ಪಾಣ್ಡೋರಸ್ತ್ರಶಸ್ತ್ರಾಣಿ ಭೀಷ್ಮಃ ॥೧೧.೧೪೩॥

ಆನಂತರ ಮುನಿಗಳಿಂದ ಕೂಡಿಕೊಂಡ ಹಿರಿಯ  ಭೀಷ್ಮಾಚಾರ್ಯ,
ಮೂವರಿಗೂ ಮಾಡಿದ ಜಾತಕರ್ಮ ನಾಮಕರಣ ಇತ್ಯಾದಿ ಸಂಸ್ಕಾರ.
ವೇದವ್ಯಾಸರಿಂದ ಮೂವರಿಗೂ ಸಮಸ್ತ ವಿದ್ಯೆಗಳ ಉಪದೇಶ,
ಪಾಂಡುವಿಗೆ ಭೀಷ್ಮರೇ ಅಸ್ತ್ರಶಸ್ತ್ರ ವಿದ್ಯೆಯ ನೀಡಿದ್ದು ವಿಶೇಷ.

ತೇ ಸರ್ವವಿದ್ಯಾಪ್ರವರಾ ಬಭೂವುರ್ವಿಶೇಷತೋ ವಿದುರಃ ಸರ್ವವೇತ್ತಾ ।
ಪಾಣ್ಡುಃ ಸಮಸ್ತಾಸ್ತ್ರವಿದೇಕವೀರೋ ಜಿಗಾಯ ಪೃಥ್ವೀಮಖಿಲಾಂ ಧನುರ್ದ್ಧರಃ ॥೧೧.೧೪೪॥

ಅವರೆಲ್ಲರಾದರು ಅಸ್ತ್ರಶಸ್ತ್ರ ವೇದವಿದ್ಯೆಗಳಲ್ಲಿ ಶ್ರೇಷ್ಠ,
ವಿಶೇಷತಃ ವಿದುರ ಜ್ಞಾನಿಯಾಗಿ ಬೆಳೆದದ್ದು ವಿಶಿಷ್ಠ.
ಪಾಂಡುರಾಜ ಅಸ್ತ್ರಗಳಲ್ಲಿ ಶೂರನಾಗಿ ಖ್ಯಾತ,
ಧನುರ್ಧಾರಿಯಾಗಿ ಎಲ್ಲ ಭೂಭಾಗ ಗೆದ್ದನಾತ.

ಗವದ್ಗಣಾದಾಸ ತಥೈವ ಸೂತಾತ್ ಸಮಸ್ತಗನ್ಧರ್ವಪತಿಃ ಸ ತುಮ್ಬುರುಃ ।
ಯ ಉದ್ವಹೋ ನಾಮ ಮರುತ್ ತದಂಶಯುಕ್ತೋ ವಶೀ ಸಞ್ಜಯನಾಮಧೇಯಃ ॥೧೧.೧೪೫॥

ಅವರ ಗುಂಪಿಗೆ ಒಡೆಯನಾದವ ತುಂಬುರು ಗಂಧರ್ವ,
ಉದ್ವಹ ಮರುದಂಶನಾಗಿ ಜಿತೇಂದ್ರಿಯನಾದ ಕಾಲಪರ್ವ.
ಗವದ್ಗಣನೆಂಬುವ ವಿಚಿತ್ರವೀರ್ಯನ ಸಾರಥಿಯಾದ ಕಾಲ,
ಅವನಲ್ಲಿ ಗಾವದ್ಗಣ-ಸಂಜಯ ಹುಟ್ಟಿಬಂದ ದೈವೀ ಜಾಲ.

ವಿಚಿತ್ರವೀರ್ಯ್ಯಸ್ಯ ಸ ಸೂತಪುತ್ರಃ ಸಖಾ ಚ ತೇಷಾಮಭವತ್ ಪ್ರಿಯಶ್ಚ ।
ಸಮಸ್ತವಿನ್ಮತಿಮಾನ್ ವ್ಯಾಸಶಿಷ್ಯೋ ವಿಶೇಷತೋ ಧೃತರಾಷ್ಟ್ರಾನುವರ್ತ್ತೀ ॥೧೧.೧೪೬॥

ಸಂಜಯ ಎಲ್ಲವನ್ನು ಬಲ್ಲವನಾದ ಪ್ರಜ್ಞಾವಂತನಾಗಿದ್ದ,
ಧೃತರಾಷ್ಟ್ರ ಪಾಂಡು ವಿದುರ ಮೂವರಿಗೂ ಪ್ರಿಯಸಖನಾಗಿದ್ದ.
ವಿಶೇಷತಃ ಸಂಜಯ ಅಂಧ ಧೃತರಾಷ್ಟ್ರನ ಅನುಸಾರಿಯಾಗಿದ್ದ.

Thursday, 13 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:139 -142

ಅಯೋಗ್ಯಸಮ್ಪ್ರಾಪ್ತಿಕೃತಪ್ರಯತ್ನದೋಷಾತ್ ಸಮಾರೋಪಿತಮೇವ ಶೂಲೇ ।
ಚೋರೈರ್ಹೃತೆsರ್ತ್ಥೇsಪಿತು ಚೋರಬುದ್ಧ್ಯಾ ಮಕ್ಷೀವಧಾದಿತ್ಯವದದ್ 
ಯಮಸ್ತಮ್ ॥ ೧೧.೧೩೯ ॥

ಯಾರೋ ಕಳ್ಳರಿಂದ ಆಗುತ್ತದೆ ಹಣದ ಕಳವು,
ಮಾಂಡವ್ಯಗಾಗುತ್ತದೆ ಶೂಲಕ್ಕೇರಿಸಲ್ಪಟ್ಟ ನೋವು.
ಯೋಗ್ಯತೆಗೆ ಮೀರಿದ ವಸಿಷ್ಠಸ್ಥಾನಕ್ಕಾಗಿ ಮಾಂಡವ್ಯನ ತಪದ ದೋಷ,
ಯಮನೆಂದ-ಹಿಂದೆ ನೊಣವ ಚುಚ್ಚಿ ಕೊಂದದ್ದರಿಂದ ನಿನಗೀ ಶಿಕ್ಷಾಪಾಶ.

ನಾಸತ್ಯತಾ ತಸ್ಯ ಚ ತತ್ರ ಹೇತುತಃ ಶಾಪಂ ಗೃಹೀತುಂ ಸ ತಥೈವ ಚೋಕ್ತ್ವಾ ।
ಅವಾಪ ಶೂದ್ರತ್ವಮಥಾಸ್ಯ ನಾಮ ಚಕ್ರೇ ಕೃಷ್ಣಃ ಸರ್ವವಿತ್ತ್ವಂ 
ತಥಾsದಾತ್ ॥ ೧೧.೧೪೦ ॥

ನೊಣಕ್ಕೆ ಚುಚ್ಚಿದ್ದ ಪಾಪವೂ ಆ ಶಿಕ್ಷೆಗಾಯಿತು ಒಂದು ಕಾರಣ,
ಬರಲಿಲ್ಲ ಯಮಧರ್ಮನ ಮಾತಿಗೆ ಅಸತ್ಯತ್ವದ ಯಾವ ಆವರಣ.
ಚಿಕ್ಕ ಕಾರಣ ಕೇಳಿದ ಮಾಂಡವ್ಯಮುನಿಗೆ ಬಂತು ಬಲು ಕೋಪ,
ತಿಳಿದೇ ಯಮ ಸ್ವೀಕರಿಸಿದ ಮಾಂಡವ್ಯನಿಂದ ಶೂದ್ರತ್ವದ ಶಾಪ.
ಶೂದ್ರನಾಗಿ ಹುಟ್ಟಿದ ಈತಗೆ ವ್ಯಾಸರಿಂದ ಸರ್ವಜ್ಞತ್ವ ವರದ ಲೇಪ.


ವಿದ್ಯಾರತೇರ್ವಿದುರೋ ನಾಮಾ ಚಾಯಂ ಭವಿಷ್ಯತಿ ಜ್ಞಾನಬಲೋಪಪನ್ನಃ ।
ಮಹಾಧನುರ್ಬಾಹುಬಲಾಧಿಕಶ್ಚ ಸುನೀತಿಮಾನಿತ್ಯವದತ್ ಸ 
ಕೃಷ್ಣಃ ॥೧೧.೧೪೧॥

ಹೀಗೆ ದಾಸಿಯಲ್ಲಿ ವೇದವ್ಯಾಸರಿಂದ ಹುಟ್ಟಿದ ಯಮಧರ್ಮ,
ವಿದ್ಯೆಯಲ್ಲೇ ರತನಾಗಿ ವಿದುರನಾಗಿ ಬೆಳಗಿದ ದೈವೀಮರ್ಮ.
ಈತನಾಗುತ್ತಾನೆ ಒಳ್ಳೇ ಧನುರ್ಧಾರಿ ಬಾಹುಬಲಾಧಿಕ,
ವ್ಯಾಸರ ವರ ಪಡೆದ ಒಳ್ಳೆಯ ನೀತಿಶಾಸ್ತ್ರ ಪ್ರವರ್ತಕ.

ಜ್ಞಾತ್ವಾsಸ್ಯ ಶೂದ್ರತ್ವಮಥಾಸ್ಯ ಮಾತಾ ಪುನಶ್ಚ ಕೃಷ್ಣಂ ಪ್ರಣತಾ ಯಯಾಚೇ ।
ಅಮ್ಬಾಲಿಕಾಯಾಂ ಜನಯಾನ್ಯಮಿತ್ಯಥೋ ನೈಚ್ಛತ್ ಸ 
ಕೃಷ್ಣೋsಭವದಪ್ಯದೃಶ್ಯಃ ॥೧೧.೧೪೨॥

ವಿದುರನ ಶೂದ್ರ ಹುಟ್ಟಿನ ವಿಷಯ ತಿಳಿದವಳಾದ  ಸತ್ಯವತಿ,
ಮತ್ತೆ ಇಡುತ್ತಾಳೆ ವ್ಯಾಸರಲ್ಲಿ ಇನ್ನೊಂದು ಮಗನಿಗಾಗಿ ವಿನಂತಿ.
ಆದರೆ ವೇದವ್ಯಾಸರಿಗಿರಲಿಲ್ಲ ಅದರಲ್ಲಿ ಮನ,
ಹಾಗೇ ಅವರಾಗುತ್ತಾರೆ ಅಲ್ಲಿಂದ ಅಂತರ್ಧಾನ.
[Contributed by Shri Govind Magal]

Wednesday, 12 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 131 - 138

ಇತೀರಿತೇsಸ್ತ್ವಿತ್ಯುದಿತಸ್ತಯಾsಗಮತ್ ಕೃಷ್ಣೋsಮ್ಬಿಕಾಂ ಸಾ ತು ಭಿಯಾ ನ್ಯಮೀಲಯತ್ ।
ಅಭೂಚ್ಚ ತಸ್ಯಾಂ ಧೃತರಾಷ್ಟ್ರನಾಮಕೋ ಗನ್ಧರ್ವರಾಟ್ 
ಪವನಾವೇಶಯುಕ್ತಃ   ॥ ೧೧.೧೩೧ ॥

ಈ ರೀತಿ ಹೇಳಿ ತಾಯಿಯಿಂದ ಒಪ್ಪಿಗೆ ಪಡೆದ ಕೃಷ್ಣದ್ವೈಪಾಯನ,
ಅಂಬಿಕೆಯಲ್ಲಿಗೆ ಹೋಗಿ ಆಯಿತವರಿಬ್ಬರ ದೇಹಗಳಮಿಲನ.
ನೋಡಿ ವ್ಯಾಸರ ಅತಿಭಯಂಕರವಾದ ರೂಪ,
ಭಯದಿಂದ ಅಂಬಿಕೆ ಕಣ್ಮುಚ್ಚಿಕೊಂಡಳು ಪಾಪ.
ಇದರಿಂದಾಯಿತು ಗಂಧರ್ವ ಧೃತರಾಷ್ಟ್ರನ ಜನನ.
ಅಲ್ಲಿ ವಾಯುದೇವರ ಆವೇಶವುಳ್ಳವನ ಆಗಮನ.


ಸ ಮಾರುತಾವೇಶಬಲಾದ್ ಬಲಾಧಿಕೋ ಬಭೂವ ರಾಜಾ ಧೃತರಾಷ್ಟ್ರನಾಮಾ।
ಅದಾದ್ ವರಂ ಚಾಸ್ಯ ಬಲಾಧಿಕತ್ವಂ ಕೃಷ್ಣೋsನ್ಧ ಆಸೀತ್ ಸ ತು 
ಮಾತೃದೋಷತಃ ॥ ೧೧.೧೩೨ ॥

ಈ ರೀತಿ ಹುಟ್ಟಿದವನದು ಧೃತರಾಷ್ಟ್ರ ಎಂದು ಹೆಸರು,
ಬಲಾಢ್ಯ ಈತನಲ್ಲಿ ಮುಖ್ಯಪ್ರಾಣಾವೇಷವು ಉಸಿರು.
ವೇದವ್ಯಾಸರಿಂದವನಿಗೆ ಬಲಾಧಿಕತ್ವವಾದ ರೂಪ,
ತಾಯಿ ತಪ್ಪಿನಿಂದ ಕುರುಡನಾಗಿ ಹುಟ್ಟಿದ್ದ  ಪಾಪ.

ಜ್ಞಾತ್ವಾ ತಮನ್ಧಂ ಪುನರೇವ ಕೃಷ್ಣಂ ಮಾತಾsಬ್ರವೀಜ್ಜನಯಾನ್ಯಂ ಗುಣಾಢ್ಯಮ್ ।
ಅಮ್ಬಾಲಿಕಾಯಾಮಿತಿ ತತ್ ತಥಾsಕರೋತ್ ಭಯಾತ್ತು 
ಸಾ ಪಾಣ್ಡುರಭೂನ್ಮೃಷಾದೃಕ್ ॥ ೧೧.೧೩೩ ॥
ಪರಾವಹೋ ನಾಮ ಮರುತ್ ತತೋsಭವದ್ ವರ್ಣ್ಣೇನ ಪಾಣ್ಡುಃ ಸ ಹಿ ನಾಮತಶ್ಚ ।
ಸ ಚಾsಸ ವೀರ್ಯ್ಯಾಧಿಕ ಏವ ವಾಯೋರಾವೇಶತಃ 
ಸರ್ವಶಸ್ತ್ರಾಸ್ತ್ರವೇತ್ತಾ    ॥ ೧೧.೧೩೪ ॥

ಸತ್ಯವತಿಗೆ ಅರಿವಾಯಿತು ಕುರುಡಗೆ ಜನ್ಮವಿತ್ತಿದ್ದಾಳೆ ಅಂಬಿಕೆ,
ಅಂಬಾಲಿಕೆಯಲ್ಲಿ ಇನ್ನೊಂದು ಮಗನ ಕೊಡಲು ವ್ಯಾಸರಲ್ಲಿ ಬೇಡಿಕೆ.
ಘಟನೆ ತಿಳಿದ ಅಂಬಾಲಿಕೆ ಕಣ್ಮುಚ್ಚದಿದ್ದರೂ ಭಯದಿಂದ ಅತಿಯಾಗಿ ಬಿಳಿಚಿಕೊಂಡಳು,
ಅವಳಂತೇ ಬಿಳಿಚಿದ ಪರಾವಹಮರುದ್ದೇವತೆಯ ಮುಖ್ಯಪ್ರಾಣಾವೇಷದ ಪಾಂಡುವಾಗಿ ಪಡೆದಳು.

ತಸ್ಮೈ ತಥಾ ಬಲವೀರ್ಯ್ಯಾಧಿಕತ್ವವರಂ ಪ್ರಾದಾತ್ ಕೃಷ್ಣ ಏವಾಥ ಪಾಣ್ಡುಮ್  ।
ವಿಜ್ಞಾಯ ತಂ ಪ್ರಾಹ ಪುನಶ್ಚ ಮಾತಾ ನಿರ್ದ್ದೋಷಮನ್ಯಂ ಜನಯೋತ್ತಮಂ 
ಸುತಮ್॥ ೧೧.೧೩೫ ॥

ಈ ರೀತಿ ಹುಟ್ಟಿದ ಪಾಂಡುವಿಗೆ ವ್ಯಾಸರಿಂದ ವರ,
ಅಧಿಕವಾಗಿರಲೆಂದು ಅವನಲ್ಲಿ ಬಲ ಮತ್ತು ವೀರ್ಯ.
ಇವನು ಬಿಳಿಚಿದವ ಎಂದು ಅರಿವಾದ ಸತ್ಯವತಿ,
ಮಾಡಿದಳು ದೋಷವಿರದ ಮಗನಿಗಾಗಿ ವಿನಂತಿ.

ಉಕ್ತ್ವೇತಿ ಕೃಷ್ಣಂ ಪುನರೇವ ಚ ಸ್ನುಷಾಮಾಹ ತ್ವಯಾsಕ್ಷ್ಣೋರ್ಹಿ ನಿಮೀಲನಂ ಪುರಾ ।
ಕೃತಂ ತತಸ್ತೇ ಸುತ ಆಸ ಚಾನ್ಧಸ್ತತಃ ಪುನಃ ಕೃಷ್ಣಮುಪಾಸ್ವ ಭಕ್ತಿತಃ ॥ ೧೧.೧೩೬ ॥

ಹೀಗೆ ವ್ಯಾಸರ ಪ್ರಾರ್ಥಿಸಿಕೊಂಡು ಸೊಸೆಗ್ಹೇಳುತ್ತಾಳೆ ಸತ್ಯವತಿ,
ನಿನ್ನ ಕಣ್ಮುಚ್ಚುವಿಕೆಯಿಂದಾಗಿ ಮಗ ಕುರುಡಾಗಿ ಹುಟ್ಟಿದ ಗತಿ.
ಮತ್ತೊಮ್ಮೆ ವೇದವ್ಯಾಸರ ಕೂಡು,
ಭಕ್ತಿಯಿಂದ ಉಪಾಸನೆಯ ಮಾಡು.

ಇತೀರಿತಾsಪ್ಯಸ್ಯ ಹಿ ಮಾಯಯಾ ಸಾ ಭೀತಾ ಭುಜಿಷ್ಯಾಂ ಕುಮತಿರ್ನ್ನ್ಯಯೋಜಯತ್ ।
ಸಾ ತಂ ಪರಾನನ್ದತನುಂ ಗುಣಾರ್ಣ್ಣವಂ ಸಮ್ಪ್ರಾಪ್ಯ ಭಕ್ತ್ಯಾ ಪರಯೈವ 
ರೇಮೇ ॥ ೧೧.೧೩೭ ॥
ತಸ್ಯಾಂ ಸ ದೇವೋsಜನಿ ಧರ್ಮ್ಮರಾಜೋ ಮಾಣ್ಡವ್ಯಶಾಪಾದ್ ಯ ಉವಾಹ ಶೂದ್ರತಾಮ್ ।
ವಸಿಷ್ಠಸಾಮ್ಯಂ ಸಮಭೀಪ್ಸಮಾನಂ ಪ್ರಚ್ಯಾವಯನ್ನಿಚ್ಛಯಾ ಶಾಪಮಾಪ   ॥೧೧.೧೩೮ ॥

ಈ ರೀತಿ ಸತ್ಯವತಿಯಿಂದ ಹೇಳಲ್ಪಟ್ಟ ಅಂಬಿಕೆ,
ಭಯ, ಭಗವದಿಚ್ಛೆಯಂತೆ ದಾಸಿಯ ಕಳಿಸುವಿಕೆ.
ಆನಂದ ಮೈದಾಳಿಬಂದ ಗುಣಸಾಗರನೊಂದಿಗೆ ಅವಳ ಮಿಲನ,
ಭಕ್ತಿಯಿಂದ ಅರ್ಪಿಸಿಕೊಂಡವಳಿಗೆ ಯಮನೇ ಮಗನಾಗಿ ಜನನ.
ಆ ದಾಸಿಯಲ್ಲಿ ಯಮದೇವನ ಅವತರಣ,
ಮಾಂಡವ್ಯ ಶಾಪಪ್ರಯುಕ್ತ ಶೂದ್ರತ್ವದಾವರಣ.
ವಸಿಷ್ಠ ಸಾಮ್ಯ ಬಯಸಿ ತಪಸ್ಸು ಮಾಡುತ್ತಿದ್ದ,
ಮಾಂಡವ್ಯನ ತಪೋಭಂಗಕ್ಕೆ ಇಚ್ಛಾಶಾಪ ಪಡೆದಿದ್ದ.

Monday, 10 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 126 - 130

ವಿಚಿತ್ರವೀರ್ಯ್ಯ ಪ್ರಮದಾದ್ವಯಂ ತತ್ ಸಮ್ಪ್ರಾಪ್ಯ ರೇಮೇsಬ್ದಗಣಾನ್ ಸುಸಕ್ತಃ ।
ತತ್ಯಾಜ ದೇಹಂ ಚ ಸ ಯಕ್ಷ್ಮಣಾsರ್ದ್ದಿತಸ್ತತೋsಸ್ಯ ಮಾತಾsಸ್ಮರದಾಶು 
ಕೃಷ್ಣಮ್ ॥೧೧.೧೨೪॥

ವಿಚಿತ್ರವೀರ್ಯ ನಡೆಸಿದ ಅಂಬಿಕೆ ಅಂಬಾಲಿಕೆಯೊಂದಿಗೆ ಆಸಕ್ತ ದೀರ್ಘ ದಾಂಪತ್ಯ,
ಆನಂತರದ ಕಾಲದಲ್ಲಿ ವಿಚಿತ್ರವೀರ್ಯ ಕ್ಷಯರೋಗಪೀಡಿತನಾಗಿ ಆಯಿತವನ ದೇಹಾಂತ್ಯ.
ವಿಚಿತ್ರವೀರ್ಯನ ಸಾವಿನ ನಂತರ,
ಸತ್ಯವತಿ ಸ್ಮರಿಸಿದಳು ವೇದವ್ಯಾಸರ.

ಆವಿರ್ಬಭೂವಾsಶು ಜಗಜ್ಜನಿತ್ರೋ ಜನಾರ್ದ್ದನೋ ಜನ್ಮಜರಾಭಯಾಪಹಃ ।
ಸಮಸ್ತ ವಿಜ್ಞಾನತನುಃ ಸುಖಾಣ್ಣವಃ ಸಮ್ಪೂಜಯಾಮಾಸ ಚ ತಂ 
ಜನಿತ್ರೀ ॥೧೧.೧೨೫ ॥

ಜಗತ್ತಿನ ಹುಟ್ಟಿಗೆ ಕಾರಣನಾರೋ,
ಮುಪ್ಪು ಅಳುಕುಗಳ ಪರಿಹರಿಸುವನಾರೋ,
ಅರಿವೇ ಮೈವೆತ್ತು ಬಂದಿರುವನಾರೋ,
ಸುಖದ ಸಾಗರದಂತಿರುವ ವ್ಯಾಸರೂಪಿ ನಾರಾಯಣ,
ಸತ್ಯವತಿ ಗೌರವಿಸುತ್ತಾಳಾಗ ಆವಿರ್ಭವಿಸಿದ ಭಗವಂತನನ್ನ.

ತಂ ಭೀಷ್ಮಪೂರ್ವೈಃ ಪರಮಾದರಾರ್ಚ್ಚಿತಂ ಸ್ವಭಿಷ್ಟುತಂ ಚಾವದದಸ್ಯ ಮಾತಾ ।
ಪುತ್ರೌ ಮೃತೌ ಮೇ ನತು ರಾಜ್ಯಮೈಚ್ಛದ್ ಭೀಷ್ಮೋ ಮಯಾ 
ನಿತರಾಮರ್ತ್ಥಿತೋsಪಿ॥೧೧.೧೨೬॥
ಕ್ಷೇತ್ರೇ ತತೋ ಭ್ರಾತುರಪತ್ಯಮುತ್ತಮಮುತ್ಪಾದಯಾಸ್ಮತ್ಪರಮಾದರಾರ್ತ್ಥಿತಃ ।
ಇತೀರಿತಃ ಪ್ರಣತಶ್ಚಾಪ್ಯಭಿಷ್ಟುತೋ ಭೀಷ್ಮಾದಿಭಿಷ್ಚಾsಹ 
ಜಗದ್ಗುರುರ್ವಚಃ         ॥೧೧.೧೨೭॥


ಭೀಷ್ಮಾಚಾಚಾರ್ಯ ಮೊದಲಾದವರಿಂದ ಸದಾ ಪೂಜಿತ,
ತಾನೂ ಸ್ತುತಿಗೈದ ವ್ಯಾಸರಿಗ್ಹೇಳುತ್ತಾಳೆ ಸತ್ಯವತಿ ಈ ಮಾತ.
ನನ್ನ ಮಕ್ಕಳೀರ್ವರೂ ಆಗಿಹೋಗಿದ್ದಾರೆ ಮೃತ,
ಭೀಷ್ಮ ರಾಜ್ಯಬಯಸಲಿಲ್ಲ ನನ್ನಿಂದಾದರೂ  ಪ್ರಾರ್ಥಿತ.
ನಮ್ಮಿಂದ ನೀನು ಆಗಿರುವೆ ಪೂಜಿತ,
ನಮ್ಮ ಬೇಡಿಕೆಯ ಸ್ವೀಕರಿಸಿರುವಾತ.
ನಿನ್ನ ಸಹೋದರನ ಹೆಂಡತಿಯಲ್ಲಿ ಮಗುವ ನೀಡು.
ಸ್ತುತಿತರಾದ ವ್ಯಾಸರದು ಹೀಗಿರುತ್ತದೆ ನುಡಿಜಾಡು. 

ಋತೇ ರಮಾಂ ಜಾತು ಮಮಾಙ್ಗಯೋಗಯೋಗ್ಯಾsಙ್ಗನಾ ನೈವ ಸುರಾಲಯೇsಪಿ ।
ತಥಾsಪಿ ತೇ ವಾಕ್ಯಮಹಂ ಕರಿಷ್ಯೇ ಸಾಂವತ್ಸರಂ ಸಾ ಚರತು 
ವ್ರತಂ ಚ ॥೧೧.೧೨೮ ॥
ಸಾ ಪೂತದೇಹಾsಥ ಚ ವೈಷ್ಣವವ್ರತಾನ್ಮತ್ತಃ ಸಮಾಪ್ನೋತು ಸುತಂ ವರಿಷ್ಠಮ್ ।
ಇತೀರಿತೇ ರಾಷ್ಟ್ರಮುಪೈತಿ ನಾಶಮಿತಿ ಬ್ರುವನ್ತೀಂ ಪುನರಾಹ 
ವಾಕ್ಯಮ್ ॥೧೧.೧೨೯॥
ಸೌಮ್ಯಸ್ವರೂಪೋsಪ್ಯತಿಭೀಷಣಂ ಮೃಷಾ ತಚ್ಚಕ್ಷುಷೋ ರೂಪಮಹಂ ಪ್ರದರ್ಶಯೇ ।
ಸಹೇತ ಸಾ ತದ್ ಯದಿ ಪುತ್ರಕೋsಸ್ಯಾ ಭವೇದ್ ಗುಣಾಢ್ಯೋ 
ಬಲವೀರ್ಯ್ಯಯುಕ್ತಃ ॥೧೧.೧೩೦ ॥

ಲಕ್ಷ್ಮೀದೇವಿಯನ್ನು ಹೊರತುಪಡಿಸಿ ನನ್ನ ಅಂಗಸಂಗದ ಭಾಗ್ಯ,
ಸ್ವರ್ಗದಲ್ಲಷ್ಟೇ ಅಲ್ಲ ಯಾವಲೋಕದ ಯಾರಿಗೂ ಇಲ್ಲ ಆ ಯೋಗ.
ಆದರೂ ನಿನ್ನ ಮಾತ ನಡೆಸಿಕೊಡುತ್ತೇನೆ ನಾನು,
ನಿನ್ನ ಸೊಸೆ ವರ್ಷ ಕಠಿಣವ್ರತ ನಡೆಸಬೇಕು ತಾನು.
ಈ ರೀತಿ ವೈಷ್ಣವವ್ರತ ಮಾಡಿದ ಮೇಲೆ,
ಆಕೆ ಪವಿತ್ರ ದೇಹ ಉಳ್ಳವಳಾಗುತ್ತಾಳೆ.
ಅವಳು ನನ್ನಿಂದ ಶ್ರೇಷ್ಠ ಮಗನ ಹೊಂದಲಿ ಎಂದಾಗ ವ್ಯಾಸ,
ಸತ್ಯವತಿಯೆಂದಳು ಅವರಿಗೆ ಗರ್ಭದಾನಮಾಡಿ ತಪ್ಪಿಸು ದೇಶ ನಾಶ.
ನನ್ನದ್ಯಾವಾಗಲೂ ಅತಿಸುಂದರವಾದ ಆಕರ್ಷಕ ರೂಪ,
ಆದರೂ ನಾನವಳಿಗೆ ತೋರುವೆ ಭೀಕರರೂಪದ ತಾಪ.
ಒಂದುವೇಳೆ ಅದನ್ನು ಸಹಿಸಿಕೊಂಡರೆ ಅವಳಿಗೆ,
ಖಚಿತವದು ಪುತ್ರಸಂತಾನಭಾಗ್ಯದ ತುಂಬು ತಳಿಗೆ.
[Contributed by Shri Govind Magal]

Saturday, 8 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 116 - 123

ಗಾನ್ಧರ್ವಂ ದೇಹಮಾವಿಶ್ಯ ಸ್ವಕೀಯಂ ಭವನಂ ಯಯೌ ।
ತಸ್ಯಾಸ್ತದ್ದೇಹಸಾದೃಶ್ಯಂ ಗನ್ಧರ್ವಸ್ಯ ಪ್ರಸಾದತಃ ॥೧೧.೧೧೬॥
ಪ್ರಾಪ ಗನ್ಧರ್ವದೇಹೋsಪಿ ತಯಾ ಪಶ್ಚಾದಧಿಷ್ಠಿತಃ ।
ಶ್ವೋ ದೇಹಿ ಮಮ ದೇಹಂ ಮೇ ಸ್ವಂ ಚ ದೇಹಂ ಸಮಾವಿಶ  ॥೧೧.೧೧೭॥

ಹೀಗೆ ಶಿಖಂಡಿನೀಗೆ ಆಯಿತು ಗಂಧರ್ವಗೆ ಸಂಬಂಧಪಟ್ಟ ದೇಹದ ಪ್ರವೇಶ,
ತನ್ನ ಮನೆಗೆ ಹೊರಟ ಶಿಖಂಡಿನೀಗೆ ದೊರಕಿತ್ತು ಗಂಧರ್ವ ದೇಹದ ಸಾದೃಶ್ಯ.
ಹೀಗೆ ಅವಳಲ್ಲಿ ಗಂಧರ್ವ ದೇಹವು ಅಧಿಷ್ಠಿತವಾಗಿತ್ತು,
ಹಿಂದಿನ ತನ್ನ ರೂಪದ ದೇಹ ಸಾದೃಶ್ಯವೂ ಕೂಡಾ ಅಲ್ಲಿತ್ತು.

ಇತ್ಯುಕ್ತ್ವಾ ಸ ತು ಗನ್ಧರ್ವಃ ಕನ್ಯಾದೇಹಂ ಸಮಾಸ್ಥಿತಃ ।
ಉವಾಸೈವ ವನೇ ತಸ್ಮಿನ್ ಧನದಸ್ತತ್ರ ಚಾsಗಮತ್   ॥೧೧.೧೧೮ ॥
ಅಪ್ರತ್ಯುತ್ಥಾಯಿನಂ ತನ್ತುಲೀಯಮಾನಂ ವಿಲಜ್ಜಯಾ ।
ಶಶಾಪ ಧನದೋ ದೇವಶ್ಚಿರಮಿತ್ಥಂ ಭವೇತಿ ತಮ್   ॥೧೧.೧೧೯॥

ನನಗೆ ನಾಳೆ ನನ್ನ ದೇಹವನ್ನು ನೀಡಬೇಕು,
ನಿನ್ನದಾಗಿರುವ ದೇಹವ ನೀ ಪ್ರವೇಶಿಸಬೇಕು.
ಹೀಗಾದ ಮೇಲೆ ಅವರ ನಡುವೆ ಒಪ್ಪಂದ,
ಗಂಧರ್ವ ಶಿಖಂಡಿನೀ ದೇಹ ಪ್ರವೇಶಿಸಿದ್ದ.

ಕನ್ಯಾದೇಹ ಹೊತ್ತ ತುಂಬುರು ಕಾಡಲ್ಲಿದ್ದ ಆದಮೇಲೆ ಶಿಖಂಡಿನೀ ನಿರ್ಗಮನ,
ವಿಧಿಯಂತಾಸಮಯದಲ್ಲೇ ಆಯಿತು ಅದೇ ಕಾಡಿಗೆ ಕುಬೇರನ ಆಗಮನ.
ತನ್ನ ನೋಡಿಯೂ ಗೌರವಿಸದೆ ನಾಚಿಕೊಂಡ ತುಂಬುರುವಿನ ಮೇಲೆ ಕುಬೇರನ ಕೋಪ,
ಬಹುಕಾಲ ಹೀಗೆಯೇ ಸ್ತ್ರೀದೇಹಿಯಾಗಿರು ಎಂದು ತುಂಬುರುವಿಗೆ ಕೊಟ್ಟ ಶಾಪ.

ಯದಾ ಯುದ್ಧೇ ಮೃತಿಂ ಯಾತಿ ಸಾ ಕನ್ಯಾ ಪುನ್ತನುಸ್ಥಿತಾ ।
ತದಾ ಪುಂಸ್ತ್ವಂ ಪುನರ್ಯ್ಯಾಸಿ ಚಪಲತ್ವಾದಿತೀರಿತಃ ॥೧೧.೧೨೦॥

ಕೋಪದಿಂದ ಶಾಪ ಕೊಟ್ಟಿದ್ದ ಕುಬೇರ,
ಸೂಚಿಸಿದ ತಾನೇ ತನ್ನ ಶಾಪಕ್ಕೆ ಪರಿಹಾರ.
ಎಂದು ಯುದ್ಧದಿ ನಿನ್ನ ಗಂಡುದೇಹದಲ್ಲಿರುವ ಹೆಣ್ಣಿಗೆ
ಆಗುತ್ತದೋ ಸಾವು,
ಆಗ ನಿನಗೆ ಒದಗಿಬರುತ್ತದೆ ಗಂಡಾಗಿ ಬದಲಾಗುವ ಹೊಸದಾದ ನಲಿವು.
ಚಪಲದಿಂದಾಗಿದೆ ನಿನ್ನ ಈ ದೇಹ ಬದಲಿಸುವ ಕಾರ್ಯ,
ಅಲ್ಲೀತನಕ ನೀನೀ ಶಾಪ ಅನುಭವಿಸುವುದು ಅನಿವಾರ್ಯ.

ತಥಾsವಸತ್ ಸ ಗನ್ಧರ್ವಃ ಕನ್ಯಾ ಪಿತ್ರೋರಶೇಷತಃ ।
ಕಥಯಾಮಾಸಾನುಭೂತಂ ತೌ ಭೃಶಂ ಮುದಮಾಪತುಃ   ॥೧೧.೧೨೧॥

ಕುಬೇರನ ಶಾಪದಂತೆ ಗಂಧರ್ವನದು ಆ ದೇಹದಿಂದಲೇ ಕಾಡಲ್ಲಿ ವಾಸ,
ಗಂಡುದೇಹದ ಶಿಖಂಡಿನೀಯಿಂದ ತಂದೆತಾಯಿಗೆ ಘಟನೆಯ ಅರಿವಾಯ್ತು ನಿಸ್ಸೇಶ.
ಆಗ ಹೊಂದುತ್ತಾರೆ ದ್ರುಪದ ದಂಪತಿಗಳು ಸಹಜವಾಗೇ ಸಂತೋಷ.

ಪರೀಕ್ಷ್ಯ ತಾಮುಪಾಯೈಶ್ಚ ಶ್ವಶುರೋ ಲಜ್ಜಿತೋ ಯಯೌ ।
ಶ್ವೋಭೂತೇ ಸಾ ತು ಗನ್ಧರ್ವಂ ಪ್ರಾಪ್ಯ ತದ್ವಚನಾತ್ ಪುನಃ   ॥೧೧.೧೨೨॥

ನಂತರ ಹಿರಣ್ಯವರ್ಮನಿಂದ ಶಿಖಂಡಿನೀಯ ಪೌರುಷ ಪರೀಕ್ಷಾ ಪ್ರಸಂಗ,
ಎಲ್ಲಾ ಉಪಾಯಗಳಿಂದ ಪರೀಕ್ಷಿಸಿ ಸೋತು ನಾಚಿಕೊಂಡು ಹಿಂದಿರುಗುತ್ತಾನಾಗ.
ಮರುದಿನ ಶಿಖಂಡಿನೀ ತುಂಬುರುವಿದ್ದಲ್ಲಿಗೆ ಹೋಗುವಿಕೆ,
ಅವನಿಂದ ಪಡೆದ ದೇಹವ ಹಿಂದಿರುಗಿಸಲು ತೆರಳುವಿಕೆ.

ಯಯೌ ತೇನೈವ ದೇಹೇನ ಪುಂಸ್ತ್ವಮೇವ ಸಮಾಶ್ರಿತಾ ।
ಸ ಶಿಖಣ್ಡೀ ನಾಮತೋsಭೂದಸ್ತ್ರಶಸ್ತ್ರಪ್ರತಾಪವಾನ್ ॥೧೧.೧೨೩॥

ಹೀಗೆ ವಾಪಸಾದ ಶಿಖಂಡಿನೀಗೆ ತುಂಬುರು ಹೇಳುತ್ತಾನೆ,
ನಾನಿನಗೆ ನನ್ನ ದೇಹವ ಔದಾರ್ಯದಿಂದ ಕೊಟ್ಟಿದ್ದೇನೆ.
ನೀನು ಬದುಕಿರುವವರೆಗೂ ಈ ದೇಹ ನಿನ್ನಲ್ಲಿರುತ್ತದೆ ಎಂದು,
ಪುರುಷನಾದ ಶಿಖಂಡಿನೀ ಶಿಖಂಡೀಯಾಗಿ ಪ್ರವೀಣನಾದ ಮುಂದು.
[Contributed by Shri Govind Magal]