Monday 10 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 126 - 130

ವಿಚಿತ್ರವೀರ್ಯ್ಯ ಪ್ರಮದಾದ್ವಯಂ ತತ್ ಸಮ್ಪ್ರಾಪ್ಯ ರೇಮೇsಬ್ದಗಣಾನ್ ಸುಸಕ್ತಃ ।
ತತ್ಯಾಜ ದೇಹಂ ಚ ಸ ಯಕ್ಷ್ಮಣಾsರ್ದ್ದಿತಸ್ತತೋsಸ್ಯ ಮಾತಾsಸ್ಮರದಾಶು 
ಕೃಷ್ಣಮ್ ॥೧೧.೧೨೪॥

ವಿಚಿತ್ರವೀರ್ಯ ನಡೆಸಿದ ಅಂಬಿಕೆ ಅಂಬಾಲಿಕೆಯೊಂದಿಗೆ ಆಸಕ್ತ ದೀರ್ಘ ದಾಂಪತ್ಯ,
ಆನಂತರದ ಕಾಲದಲ್ಲಿ ವಿಚಿತ್ರವೀರ್ಯ ಕ್ಷಯರೋಗಪೀಡಿತನಾಗಿ ಆಯಿತವನ ದೇಹಾಂತ್ಯ.
ವಿಚಿತ್ರವೀರ್ಯನ ಸಾವಿನ ನಂತರ,
ಸತ್ಯವತಿ ಸ್ಮರಿಸಿದಳು ವೇದವ್ಯಾಸರ.

ಆವಿರ್ಬಭೂವಾsಶು ಜಗಜ್ಜನಿತ್ರೋ ಜನಾರ್ದ್ದನೋ ಜನ್ಮಜರಾಭಯಾಪಹಃ ।
ಸಮಸ್ತ ವಿಜ್ಞಾನತನುಃ ಸುಖಾಣ್ಣವಃ ಸಮ್ಪೂಜಯಾಮಾಸ ಚ ತಂ 
ಜನಿತ್ರೀ ॥೧೧.೧೨೫ ॥

ಜಗತ್ತಿನ ಹುಟ್ಟಿಗೆ ಕಾರಣನಾರೋ,
ಮುಪ್ಪು ಅಳುಕುಗಳ ಪರಿಹರಿಸುವನಾರೋ,
ಅರಿವೇ ಮೈವೆತ್ತು ಬಂದಿರುವನಾರೋ,
ಸುಖದ ಸಾಗರದಂತಿರುವ ವ್ಯಾಸರೂಪಿ ನಾರಾಯಣ,
ಸತ್ಯವತಿ ಗೌರವಿಸುತ್ತಾಳಾಗ ಆವಿರ್ಭವಿಸಿದ ಭಗವಂತನನ್ನ.

ತಂ ಭೀಷ್ಮಪೂರ್ವೈಃ ಪರಮಾದರಾರ್ಚ್ಚಿತಂ ಸ್ವಭಿಷ್ಟುತಂ ಚಾವದದಸ್ಯ ಮಾತಾ ।
ಪುತ್ರೌ ಮೃತೌ ಮೇ ನತು ರಾಜ್ಯಮೈಚ್ಛದ್ ಭೀಷ್ಮೋ ಮಯಾ 
ನಿತರಾಮರ್ತ್ಥಿತೋsಪಿ॥೧೧.೧೨೬॥
ಕ್ಷೇತ್ರೇ ತತೋ ಭ್ರಾತುರಪತ್ಯಮುತ್ತಮಮುತ್ಪಾದಯಾಸ್ಮತ್ಪರಮಾದರಾರ್ತ್ಥಿತಃ ।
ಇತೀರಿತಃ ಪ್ರಣತಶ್ಚಾಪ್ಯಭಿಷ್ಟುತೋ ಭೀಷ್ಮಾದಿಭಿಷ್ಚಾsಹ 
ಜಗದ್ಗುರುರ್ವಚಃ         ॥೧೧.೧೨೭॥


ಭೀಷ್ಮಾಚಾಚಾರ್ಯ ಮೊದಲಾದವರಿಂದ ಸದಾ ಪೂಜಿತ,
ತಾನೂ ಸ್ತುತಿಗೈದ ವ್ಯಾಸರಿಗ್ಹೇಳುತ್ತಾಳೆ ಸತ್ಯವತಿ ಈ ಮಾತ.
ನನ್ನ ಮಕ್ಕಳೀರ್ವರೂ ಆಗಿಹೋಗಿದ್ದಾರೆ ಮೃತ,
ಭೀಷ್ಮ ರಾಜ್ಯಬಯಸಲಿಲ್ಲ ನನ್ನಿಂದಾದರೂ  ಪ್ರಾರ್ಥಿತ.
ನಮ್ಮಿಂದ ನೀನು ಆಗಿರುವೆ ಪೂಜಿತ,
ನಮ್ಮ ಬೇಡಿಕೆಯ ಸ್ವೀಕರಿಸಿರುವಾತ.
ನಿನ್ನ ಸಹೋದರನ ಹೆಂಡತಿಯಲ್ಲಿ ಮಗುವ ನೀಡು.
ಸ್ತುತಿತರಾದ ವ್ಯಾಸರದು ಹೀಗಿರುತ್ತದೆ ನುಡಿಜಾಡು. 

ಋತೇ ರಮಾಂ ಜಾತು ಮಮಾಙ್ಗಯೋಗಯೋಗ್ಯಾsಙ್ಗನಾ ನೈವ ಸುರಾಲಯೇsಪಿ ।
ತಥಾsಪಿ ತೇ ವಾಕ್ಯಮಹಂ ಕರಿಷ್ಯೇ ಸಾಂವತ್ಸರಂ ಸಾ ಚರತು 
ವ್ರತಂ ಚ ॥೧೧.೧೨೮ ॥
ಸಾ ಪೂತದೇಹಾsಥ ಚ ವೈಷ್ಣವವ್ರತಾನ್ಮತ್ತಃ ಸಮಾಪ್ನೋತು ಸುತಂ ವರಿಷ್ಠಮ್ ।
ಇತೀರಿತೇ ರಾಷ್ಟ್ರಮುಪೈತಿ ನಾಶಮಿತಿ ಬ್ರುವನ್ತೀಂ ಪುನರಾಹ 
ವಾಕ್ಯಮ್ ॥೧೧.೧೨೯॥
ಸೌಮ್ಯಸ್ವರೂಪೋsಪ್ಯತಿಭೀಷಣಂ ಮೃಷಾ ತಚ್ಚಕ್ಷುಷೋ ರೂಪಮಹಂ ಪ್ರದರ್ಶಯೇ ।
ಸಹೇತ ಸಾ ತದ್ ಯದಿ ಪುತ್ರಕೋsಸ್ಯಾ ಭವೇದ್ ಗುಣಾಢ್ಯೋ 
ಬಲವೀರ್ಯ್ಯಯುಕ್ತಃ ॥೧೧.೧೩೦ ॥

ಲಕ್ಷ್ಮೀದೇವಿಯನ್ನು ಹೊರತುಪಡಿಸಿ ನನ್ನ ಅಂಗಸಂಗದ ಭಾಗ್ಯ,
ಸ್ವರ್ಗದಲ್ಲಷ್ಟೇ ಅಲ್ಲ ಯಾವಲೋಕದ ಯಾರಿಗೂ ಇಲ್ಲ ಆ ಯೋಗ.
ಆದರೂ ನಿನ್ನ ಮಾತ ನಡೆಸಿಕೊಡುತ್ತೇನೆ ನಾನು,
ನಿನ್ನ ಸೊಸೆ ವರ್ಷ ಕಠಿಣವ್ರತ ನಡೆಸಬೇಕು ತಾನು.
ಈ ರೀತಿ ವೈಷ್ಣವವ್ರತ ಮಾಡಿದ ಮೇಲೆ,
ಆಕೆ ಪವಿತ್ರ ದೇಹ ಉಳ್ಳವಳಾಗುತ್ತಾಳೆ.
ಅವಳು ನನ್ನಿಂದ ಶ್ರೇಷ್ಠ ಮಗನ ಹೊಂದಲಿ ಎಂದಾಗ ವ್ಯಾಸ,
ಸತ್ಯವತಿಯೆಂದಳು ಅವರಿಗೆ ಗರ್ಭದಾನಮಾಡಿ ತಪ್ಪಿಸು ದೇಶ ನಾಶ.
ನನ್ನದ್ಯಾವಾಗಲೂ ಅತಿಸುಂದರವಾದ ಆಕರ್ಷಕ ರೂಪ,
ಆದರೂ ನಾನವಳಿಗೆ ತೋರುವೆ ಭೀಕರರೂಪದ ತಾಪ.
ಒಂದುವೇಳೆ ಅದನ್ನು ಸಹಿಸಿಕೊಂಡರೆ ಅವಳಿಗೆ,
ಖಚಿತವದು ಪುತ್ರಸಂತಾನಭಾಗ್ಯದ ತುಂಬು ತಳಿಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula