Saturday, 8 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 116 - 123

ಗಾನ್ಧರ್ವಂ ದೇಹಮಾವಿಶ್ಯ ಸ್ವಕೀಯಂ ಭವನಂ ಯಯೌ ।
ತಸ್ಯಾಸ್ತದ್ದೇಹಸಾದೃಶ್ಯಂ ಗನ್ಧರ್ವಸ್ಯ ಪ್ರಸಾದತಃ ॥೧೧.೧೧೬॥
ಪ್ರಾಪ ಗನ್ಧರ್ವದೇಹೋsಪಿ ತಯಾ ಪಶ್ಚಾದಧಿಷ್ಠಿತಃ ।
ಶ್ವೋ ದೇಹಿ ಮಮ ದೇಹಂ ಮೇ ಸ್ವಂ ಚ ದೇಹಂ ಸಮಾವಿಶ  ॥೧೧.೧೧೭॥

ಹೀಗೆ ಶಿಖಂಡಿನೀಗೆ ಆಯಿತು ಗಂಧರ್ವಗೆ ಸಂಬಂಧಪಟ್ಟ ದೇಹದ ಪ್ರವೇಶ,
ತನ್ನ ಮನೆಗೆ ಹೊರಟ ಶಿಖಂಡಿನೀಗೆ ದೊರಕಿತ್ತು ಗಂಧರ್ವ ದೇಹದ ಸಾದೃಶ್ಯ.
ಹೀಗೆ ಅವಳಲ್ಲಿ ಗಂಧರ್ವ ದೇಹವು ಅಧಿಷ್ಠಿತವಾಗಿತ್ತು,
ಹಿಂದಿನ ತನ್ನ ರೂಪದ ದೇಹ ಸಾದೃಶ್ಯವೂ ಕೂಡಾ ಅಲ್ಲಿತ್ತು.

ಇತ್ಯುಕ್ತ್ವಾ ಸ ತು ಗನ್ಧರ್ವಃ ಕನ್ಯಾದೇಹಂ ಸಮಾಸ್ಥಿತಃ ।
ಉವಾಸೈವ ವನೇ ತಸ್ಮಿನ್ ಧನದಸ್ತತ್ರ ಚಾsಗಮತ್   ॥೧೧.೧೧೮ ॥
ಅಪ್ರತ್ಯುತ್ಥಾಯಿನಂ ತನ್ತುಲೀಯಮಾನಂ ವಿಲಜ್ಜಯಾ ।
ಶಶಾಪ ಧನದೋ ದೇವಶ್ಚಿರಮಿತ್ಥಂ ಭವೇತಿ ತಮ್   ॥೧೧.೧೧೯॥

ನನಗೆ ನಾಳೆ ನನ್ನ ದೇಹವನ್ನು ನೀಡಬೇಕು,
ನಿನ್ನದಾಗಿರುವ ದೇಹವ ನೀ ಪ್ರವೇಶಿಸಬೇಕು.
ಹೀಗಾದ ಮೇಲೆ ಅವರ ನಡುವೆ ಒಪ್ಪಂದ,
ಗಂಧರ್ವ ಶಿಖಂಡಿನೀ ದೇಹ ಪ್ರವೇಶಿಸಿದ್ದ.

ಕನ್ಯಾದೇಹ ಹೊತ್ತ ತುಂಬುರು ಕಾಡಲ್ಲಿದ್ದ ಆದಮೇಲೆ ಶಿಖಂಡಿನೀ ನಿರ್ಗಮನ,
ವಿಧಿಯಂತಾಸಮಯದಲ್ಲೇ ಆಯಿತು ಅದೇ ಕಾಡಿಗೆ ಕುಬೇರನ ಆಗಮನ.
ತನ್ನ ನೋಡಿಯೂ ಗೌರವಿಸದೆ ನಾಚಿಕೊಂಡ ತುಂಬುರುವಿನ ಮೇಲೆ ಕುಬೇರನ ಕೋಪ,
ಬಹುಕಾಲ ಹೀಗೆಯೇ ಸ್ತ್ರೀದೇಹಿಯಾಗಿರು ಎಂದು ತುಂಬುರುವಿಗೆ ಕೊಟ್ಟ ಶಾಪ.

ಯದಾ ಯುದ್ಧೇ ಮೃತಿಂ ಯಾತಿ ಸಾ ಕನ್ಯಾ ಪುನ್ತನುಸ್ಥಿತಾ ।
ತದಾ ಪುಂಸ್ತ್ವಂ ಪುನರ್ಯ್ಯಾಸಿ ಚಪಲತ್ವಾದಿತೀರಿತಃ ॥೧೧.೧೨೦॥

ಕೋಪದಿಂದ ಶಾಪ ಕೊಟ್ಟಿದ್ದ ಕುಬೇರ,
ಸೂಚಿಸಿದ ತಾನೇ ತನ್ನ ಶಾಪಕ್ಕೆ ಪರಿಹಾರ.
ಎಂದು ಯುದ್ಧದಿ ನಿನ್ನ ಗಂಡುದೇಹದಲ್ಲಿರುವ ಹೆಣ್ಣಿಗೆ
ಆಗುತ್ತದೋ ಸಾವು,
ಆಗ ನಿನಗೆ ಒದಗಿಬರುತ್ತದೆ ಗಂಡಾಗಿ ಬದಲಾಗುವ ಹೊಸದಾದ ನಲಿವು.
ಚಪಲದಿಂದಾಗಿದೆ ನಿನ್ನ ಈ ದೇಹ ಬದಲಿಸುವ ಕಾರ್ಯ,
ಅಲ್ಲೀತನಕ ನೀನೀ ಶಾಪ ಅನುಭವಿಸುವುದು ಅನಿವಾರ್ಯ.

ತಥಾsವಸತ್ ಸ ಗನ್ಧರ್ವಃ ಕನ್ಯಾ ಪಿತ್ರೋರಶೇಷತಃ ।
ಕಥಯಾಮಾಸಾನುಭೂತಂ ತೌ ಭೃಶಂ ಮುದಮಾಪತುಃ   ॥೧೧.೧೨೧॥

ಕುಬೇರನ ಶಾಪದಂತೆ ಗಂಧರ್ವನದು ಆ ದೇಹದಿಂದಲೇ ಕಾಡಲ್ಲಿ ವಾಸ,
ಗಂಡುದೇಹದ ಶಿಖಂಡಿನೀಯಿಂದ ತಂದೆತಾಯಿಗೆ ಘಟನೆಯ ಅರಿವಾಯ್ತು ನಿಸ್ಸೇಶ.
ಆಗ ಹೊಂದುತ್ತಾರೆ ದ್ರುಪದ ದಂಪತಿಗಳು ಸಹಜವಾಗೇ ಸಂತೋಷ.

ಪರೀಕ್ಷ್ಯ ತಾಮುಪಾಯೈಶ್ಚ ಶ್ವಶುರೋ ಲಜ್ಜಿತೋ ಯಯೌ ।
ಶ್ವೋಭೂತೇ ಸಾ ತು ಗನ್ಧರ್ವಂ ಪ್ರಾಪ್ಯ ತದ್ವಚನಾತ್ ಪುನಃ   ॥೧೧.೧೨೨॥

ನಂತರ ಹಿರಣ್ಯವರ್ಮನಿಂದ ಶಿಖಂಡಿನೀಯ ಪೌರುಷ ಪರೀಕ್ಷಾ ಪ್ರಸಂಗ,
ಎಲ್ಲಾ ಉಪಾಯಗಳಿಂದ ಪರೀಕ್ಷಿಸಿ ಸೋತು ನಾಚಿಕೊಂಡು ಹಿಂದಿರುಗುತ್ತಾನಾಗ.
ಮರುದಿನ ಶಿಖಂಡಿನೀ ತುಂಬುರುವಿದ್ದಲ್ಲಿಗೆ ಹೋಗುವಿಕೆ,
ಅವನಿಂದ ಪಡೆದ ದೇಹವ ಹಿಂದಿರುಗಿಸಲು ತೆರಳುವಿಕೆ.

ಯಯೌ ತೇನೈವ ದೇಹೇನ ಪುಂಸ್ತ್ವಮೇವ ಸಮಾಶ್ರಿತಾ ।
ಸ ಶಿಖಣ್ಡೀ ನಾಮತೋsಭೂದಸ್ತ್ರಶಸ್ತ್ರಪ್ರತಾಪವಾನ್ ॥೧೧.೧೨೩॥

ಹೀಗೆ ವಾಪಸಾದ ಶಿಖಂಡಿನೀಗೆ ತುಂಬುರು ಹೇಳುತ್ತಾನೆ,
ನಾನಿನಗೆ ನನ್ನ ದೇಹವ ಔದಾರ್ಯದಿಂದ ಕೊಟ್ಟಿದ್ದೇನೆ.
ನೀನು ಬದುಕಿರುವವರೆಗೂ ಈ ದೇಹ ನಿನ್ನಲ್ಲಿರುತ್ತದೆ ಎಂದು,
ಪುರುಷನಾದ ಶಿಖಂಡಿನೀ ಶಿಖಂಡೀಯಾಗಿ ಪ್ರವೀಣನಾದ ಮುಂದು.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula