ಏತಸ್ಮಿನ್ನೇವ ಕಾಲೇ ತು ಸುತಾರ್ತ್ಥಂ ದ್ರುಪದಸ್ತಪಃ ।
ಚಕಾರ ಶಮ್ಭವೇ ಚೈನಂ ಸೋsಬ್ರವೀತ್ ಕನ್ಯಕಾ
ತವ ॥೧೧.೧೦೩॥
ಭೂತ್ವಾ ಭವಿಷ್ಯತಿ ಪುಮಾನಿತಿ ಸಾsಮ್ಬಾ ತತೋsಜನಿ ।
ನಾಮ್ನಾ ಶಿಖಣ್ಡಿನೀ ತಸ್ಯಾಃ ಪುಂವತ್ ಕರ್ಮ್ಮಾಣಿ ಚಾಕರೋತ್ ॥೧೧.೧೦೪॥
ದ್ರುಪದರಾಜ ಮಕ್ಕಳ
ಬಯಸಿ ರುದ್ರದೇವನ ಕುರಿತು ತಪೋನಿರತನಾಗಿದ್ದ,
ರುದ್ರ-ದ್ರುಪದಗೆ
ಹೆಣ್ಣಾಗಿ ಹುಟ್ಟಿ ಗಂಡಾಗುತ್ತಾಳೆಂದು ವರವ ತಾನು ನೀಡಿದ್ದ.
ಶಿವನ ವರದಂತೆ
ಅಂಬೆಯೇ ಶಿಖಂಡಿನೀಯಾಗಿ ದ್ರುಪದನಲ್ಲಿ ಹುಟ್ಟು,
ಪಾಂಚಾಲರಾಜ ಆಕೆಗೆ
ಗಂಡುಮಗುವಿನಂತೆ ಸಂಸ್ಕಾರವಿತ್ತು ಸಾಕಿದ ಗುಟ್ಟು.
ತಸ್ಯೈ ಪಾಞ್ಚಾಲರಾಜಃ ಸ ದಶಾರ್ಣ್ಣಾಧಿಪತೇಃ ಸುತಾಮ್ ।
ಉದ್ವಾಹಯಾಮಾಸ ಸಾ ತಾಂ ಪುಂವೇಷೇಣೈವ ಗೂಹಿತಾಮ್ ॥೧೧.೧೦೫॥
ಗಂಡಿನವೇಷದಿಂದ
ಮುಚ್ಚಲ್ಪಟ್ಟ ಶಿಖಂಡಿನೀಗೆ ರಾಜ ದ್ರುಪದ,
ದಶಾರ್ಣರಾಜ
ಹಿರಣ್ಯವರ್ಮನ ಮಗಳೊಂದಿಗೆ ಮದುವೆ ಮಾಡಿದ.
ಅನ್ಯತ್ರ ಮಾತಾಪಿತ್ರೋಸ್ತು ನ ವಿಜ್ಞಾತಾಂ ಬುಬೋಧ ಹ ।
ಧಾತ್ರ್ಯೈನ್ಯವೇದಯತ್ ಸಾsಥ ತತ್ಪಿತ್ರೇ ಸಾ
ನ್ಯವೇದಯತ್ ॥೧೧.೧೦೬॥
ತಂದೆ ತಾಯಿಯರಿಗೆ
ಮಾತ್ರ ತಿಳಿದಿತ್ತು ಶಿಖಂಡಿನೀ ಹೆಣ್ಣೆಂಬ ಗುಟ್ಟು,
ಮದುವೆನಂತರ
ದಶಾರ್ಣರಾಜನ ಮಗಳಿಗಾಗುತ್ತದೆ ವಿಷಯ ರಟ್ಟು.
ಅವಳಿಂದ ತನ್ನ
ಸಾಕುತಾಯಿಗೆ ಆಗುತ್ತದೆ ವಿಷಯ ರವಾನೆ,
ಸ್ವಲ್ಪಕಾಲಾನಂತರ
ಸಾಕುತಾಯಿಂದ ರಾಜಗಾಗುತ್ತದೆ ಸ್ಪಷ್ಟನೆ.
ಸ ಕ್ರುದ್ಧಃ ಪ್ರೇಷಯಾಮಾಸ ನಿಹನ್ಮಿ ತ್ವಾಂ ಸಬಾನ್ಧವಮ್ ।
ಇತಿ ಪಾಞ್ಚಾಲರಾಜಾಯ ನಿರ್ಜ್ಜಗಾಮ ಚ ಸೇನಯಾ ॥೧೧.೧೦೭॥
ವಿಷಯ ತಿಳಿದ
ಹಿರಣ್ಯವರ್ಮರಾಜ ತಾನು ಕೋಪದಿಂದ,
ನಿನ್ನ ಬಂಧುಗಳ
ಸಹಿತ ಕೊಲ್ಲುವೆನೆಂಬ ಸಂದೇಶ ಕಳಿಸಿದ.
ಸೇನೆಯೊಡಗೂಡಿ
ಯುದ್ಧಕ್ಕೆ ಸಿದ್ಧನಾಗಿ ಹೊರಡುವವನಾದ.
ವಿಶ್ವಸ್ಯ ವಾಕ್ಯಂ ರುದ್ರಸ್ಯ ಪುಮಾನೇವೇತಿ ಪಾರ್ಷತಃ ।
ಪ್ರೇಷಯಾಮಾಸ ಧಿಗ್ ಬುದ್ಧಿರ್ಭಿನ್ನಾ ತೇ ಬಾಲವಾಕ್ಯತಃ ॥೧೧.೧೦೮॥
ಅಪರೀಕ್ಷಕಸ್ಯ ತೇ ರಾಷ್ಟ್ರಂ ಕಥಮಿತ್ಯೇವ ನರ್ಮ್ಮಕೃತ್ ।
ಅಥ ಭಾರ್ಯ್ಯಾಸಮೇತಂ ತಂ ಪಿತರಂ ಚಿನ್ತಯಾssಕುಲಮ್ ॥೧೧.೧೦೯॥
ದೃಷ್ಟ್ವಾ ಶಿಖಣ್ಡಿನೀ ದುಃಖಾನ್ಮನ್ನಿಮಿತ್ತಾನ್ನ ನಶ್ಯತು ।
ಇತಿ ಮತ್ವಾ ವನಾಯೈವ ಯಯೌ ತತ್ರ ಚ ತುಮ್ಬುರುಃ ॥೧೧.೧೧೦॥
ನಿನ್ನ ಮಗಳು
ಗಂಡಾಗುತ್ತಾಳೆಂದ ಶಿವನ ಮಾತನ್ನು ಪೂರ್ಣ ನಂಬಿದ್ದ ದ್ರುಪದ,
ದೂತನನ್ನು ಹಿಂದೆ
ಕಳಿಸಿಕೊಡುತ್ತಾ ಮಾಡಿದ್ದ ಶಿಖಂಡಿನೀ ಗಂಡೇ ಎಂಬ ವಾದ.
ನಿನ್ನ ಬುದ್ಧಿ
ಅಪ್ರಬುದ್ಧರ ಮಾತಿನಿಂದ ಹಿಡಿದಿದೆ ತಪ್ಪುದಾರಿ,
ಸರಿವಿಷಯ ಗ್ರಹಿಕೆ
ಮಾಡದೇ ಎಂಥದದು ರಾಜ್ಯಭಾರದ ಪರಿ.
ಇತ್ಯಾದಿ ಹಾಸ್ಯ
ಮಾತುಗಳಿಂದ ದೂತನನ್ನೇನೊ ಕಳಿಸಿದ,
ನಂತರ ಪತ್ನೀಸಮೇತನಾಗಿ ತೀವ್ರವಾದ ಚಿಂತೆಗೆ ಒಳಗಾದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula