Friday, 7 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 111 - 115

ಸ್ಥೂಣಾಕರ್ಣ್ಣಾಭಿಧೇಯಸ್ತಾಮಪಶ್ಯದ್ ದೃಢಕರ್ಣ್ಣತಃ ।
ಸ ತಸ್ಯಾ ಅಖಿಲಂ ಶ್ರುತ್ವಾ ಕೃಪಾಂ ಚಕ್ರೇ ಮಹಾಮನಾಃ  ॥೧೧.೧೧೧॥

ಗಟ್ಟಿ ಕಿವಿಯುಳ್ಳವನಾದ್ದರಿಂದ ಸ್ಥೂಣಾಕರ್ಣಾ ಎಂಬ್ಹೆಸರಿನ ಆ ತುಂಬುರು ಗಂಧರ್ವ,
ಶಿಖಂಡಿನೀ ಬರುವುದ ಕಂಡು ಎಲ್ಲ ಕೇಳಿ ತಿಳಿದು ತೋರಿದ ಅವಳಿಗೆಂದೇ ಕರುಣೆ ಔದಾರ್ಯ.

ಸ ತಸ್ಯೈ ಸ್ವಂ ವಪುಃ ಪ್ರಾದಾತ್ ತದೀಯಂ ಜಗೃಹೇ ತಥಾ ।
ಅಂಶೇನ ಪುಂಸ್ವಭಾವಾರ್ತ್ಥಂ ಪೂರ್ವದೇಹೇ ಸಮಾಸ್ಥಿತಃ  ॥೧೧.೧೧೨॥
ಪುಂಸಾಂ ಸ್ತ್ರೀತ್ವಂ ಭವೇತ್ ಕ್ವಾಪಿ ತಥಾsಪ್ಯನ್ತೇ ಪುಮಾನ್ ಭವೇತ್ ।
ಸ್ತ್ರೀಣಾಂ ನೈವ ಹಿ ಪುಂಸ್ತ್ವಂ ಸ್ಯಾದ್ ಬಲವತ್ಕಾರಣೈರಪಿ  ॥೧೧.೧೧೩॥
ಅತಃ ಶಿವವರೇsಪ್ಯೇಷಾ ಜಜ್ಞೇ ಯೋಷೈವ ನಾನ್ಯಥಾ ।
ಪಶ್ಚಾತ್ ಪುಂದೇಹಮಪಿ ಸಾ ಪ್ರವಿವೇಶೈವ ಪುಂಯುತಮ್ ॥೧೧.೧೧೪॥
ನಾಸ್ಯಾ ದೇಹಃ ಪುಂಸ್ತ್ವಮಾಪ ನಚ ಪುಂಸಾsನಧಿಷ್ಠಿತೇ ।
ಪುಂದೇಹೇ ನ್ಯವಸತ್ ಸಾsಥ ಗನ್ಧರ್ವೇಣ ತ್ವಧಿಷ್ಠಿತಮ್  ॥೧೧.೧೧೫॥

ತುಂಬುರು ಶಿಖಂಡಿನೀಗೆ ತನ್ನ ದೇಹ ಕೊಟ್ಟ,
ಶಿಖಂಡಿನೀಯ ದೇಹವನ್ನು ತಾನೇ ತೊಟ್ಟ.
ಆದೇಹದ ಪುಂಸ್ವಭಾವಕ್ಕೆ ಅಲ್ಲಿ ತನ್ನೊಂದಂಶ ಇಟ್ಟ.
ಏಕೆ ತುಂಬುರು ಆದೇಹದಿ ಅಧಿಷ್ಠಿತನಾದನೆಂಬುದಕ್ಕೆ ಆಚಾರ್ಯರಿಂದ ವಿವರಣೆ,
ಗಂಡಿಗೆ ಸ್ತ್ರೀತ್ವ ಬಂದೀತು;ಮುಕ್ತಿಕಾಲದಲ್ಲವ ಗಂಡೇ, ಇಲ್ಲ ಹೆಣ್ಣು ಗಂಡಾದುದಾಹರಣೆ.
ಹೀಗಾಗಿ ಶಿವನ ವರವಿದ್ದರೂ ಹೆಣ್ಣೇ ಆದಳವಳು  ಶಿಖಂಡಿನೀ,
ತುಂಬುರು ಒಂದಂಶದಿಂದ ಇದ್ದ ದೇಹವ ಹೊಕ್ಕಳು ಶಿಖಂಡಿನೀ.
ಅವಳ ದೇಹದಲ್ಲಿ ಆಗಲಿಲ್ಲ ಗಂಡಾಗುವ ಪರಿವರ್ತನೆ,
ಗಂಡು ಅಧಿಷ್ಠಿತವಿರದ ಗಂಡುದೇಹದಲ್ಲಿರಲು ನಿರ್ಬಂಧನೆ.
ಗಂಡುದೇಹದಿ ಗಂಡಧಿಷ್ಠಿತ ದೇಹವಾಯ್ತು ಅವಳಮನೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula