Saturday, 15 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 143 -146


ಯೋಗ್ಯಾನಿ ಕರ್ಮ್ಮಾಣಿ ತತಸ್ತು ತೇಷಾಂ ಚಕಾರ ಭೀಷ್ಮೋ ಮುನಿಭಿರ್ಯ್ಯಥಾವತ್ ।
ವಿದ್ಯಾಃ ಸಮಸ್ತಾ ಅದದಾಚ್ಚ ಕೃಷ್ಣಸ್ತೇಷಾಂ ಪಾಣ್ಡೋರಸ್ತ್ರಶಸ್ತ್ರಾಣಿ ಭೀಷ್ಮಃ ॥೧೧.೧೪೩॥

ಆನಂತರ ಮುನಿಗಳಿಂದ ಕೂಡಿಕೊಂಡ ಹಿರಿಯ  ಭೀಷ್ಮಾಚಾರ್ಯ,
ಮೂವರಿಗೂ ಮಾಡಿದ ಜಾತಕರ್ಮ ನಾಮಕರಣ ಇತ್ಯಾದಿ ಸಂಸ್ಕಾರ.
ವೇದವ್ಯಾಸರಿಂದ ಮೂವರಿಗೂ ಸಮಸ್ತ ವಿದ್ಯೆಗಳ ಉಪದೇಶ,
ಪಾಂಡುವಿಗೆ ಭೀಷ್ಮರೇ ಅಸ್ತ್ರಶಸ್ತ್ರ ವಿದ್ಯೆಯ ನೀಡಿದ್ದು ವಿಶೇಷ.

ತೇ ಸರ್ವವಿದ್ಯಾಪ್ರವರಾ ಬಭೂವುರ್ವಿಶೇಷತೋ ವಿದುರಃ ಸರ್ವವೇತ್ತಾ ।
ಪಾಣ್ಡುಃ ಸಮಸ್ತಾಸ್ತ್ರವಿದೇಕವೀರೋ ಜಿಗಾಯ ಪೃಥ್ವೀಮಖಿಲಾಂ ಧನುರ್ದ್ಧರಃ ॥೧೧.೧೪೪॥

ಅವರೆಲ್ಲರಾದರು ಅಸ್ತ್ರಶಸ್ತ್ರ ವೇದವಿದ್ಯೆಗಳಲ್ಲಿ ಶ್ರೇಷ್ಠ,
ವಿಶೇಷತಃ ವಿದುರ ಜ್ಞಾನಿಯಾಗಿ ಬೆಳೆದದ್ದು ವಿಶಿಷ್ಠ.
ಪಾಂಡುರಾಜ ಅಸ್ತ್ರಗಳಲ್ಲಿ ಶೂರನಾಗಿ ಖ್ಯಾತ,
ಧನುರ್ಧಾರಿಯಾಗಿ ಎಲ್ಲ ಭೂಭಾಗ ಗೆದ್ದನಾತ.

ಗವದ್ಗಣಾದಾಸ ತಥೈವ ಸೂತಾತ್ ಸಮಸ್ತಗನ್ಧರ್ವಪತಿಃ ಸ ತುಮ್ಬುರುಃ ।
ಯ ಉದ್ವಹೋ ನಾಮ ಮರುತ್ ತದಂಶಯುಕ್ತೋ ವಶೀ ಸಞ್ಜಯನಾಮಧೇಯಃ ॥೧೧.೧೪೫॥

ಅವರ ಗುಂಪಿಗೆ ಒಡೆಯನಾದವ ತುಂಬುರು ಗಂಧರ್ವ,
ಉದ್ವಹ ಮರುದಂಶನಾಗಿ ಜಿತೇಂದ್ರಿಯನಾದ ಕಾಲಪರ್ವ.
ಗವದ್ಗಣನೆಂಬುವ ವಿಚಿತ್ರವೀರ್ಯನ ಸಾರಥಿಯಾದ ಕಾಲ,
ಅವನಲ್ಲಿ ಗಾವದ್ಗಣ-ಸಂಜಯ ಹುಟ್ಟಿಬಂದ ದೈವೀ ಜಾಲ.

ವಿಚಿತ್ರವೀರ್ಯ್ಯಸ್ಯ ಸ ಸೂತಪುತ್ರಃ ಸಖಾ ಚ ತೇಷಾಮಭವತ್ ಪ್ರಿಯಶ್ಚ ।
ಸಮಸ್ತವಿನ್ಮತಿಮಾನ್ ವ್ಯಾಸಶಿಷ್ಯೋ ವಿಶೇಷತೋ ಧೃತರಾಷ್ಟ್ರಾನುವರ್ತ್ತೀ ॥೧೧.೧೪೬॥

ಸಂಜಯ ಎಲ್ಲವನ್ನು ಬಲ್ಲವನಾದ ಪ್ರಜ್ಞಾವಂತನಾಗಿದ್ದ,
ಧೃತರಾಷ್ಟ್ರ ಪಾಂಡು ವಿದುರ ಮೂವರಿಗೂ ಪ್ರಿಯಸಖನಾಗಿದ್ದ.
ವಿಶೇಷತಃ ಸಂಜಯ ಅಂಧ ಧೃತರಾಷ್ಟ್ರನ ಅನುಸಾರಿಯಾಗಿದ್ದ.

No comments:

Post a Comment

ಗೋ-ಕುಲ Go-Kula