Wednesday, 12 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 131 - 138

ಇತೀರಿತೇsಸ್ತ್ವಿತ್ಯುದಿತಸ್ತಯಾsಗಮತ್ ಕೃಷ್ಣೋsಮ್ಬಿಕಾಂ ಸಾ ತು ಭಿಯಾ ನ್ಯಮೀಲಯತ್ ।
ಅಭೂಚ್ಚ ತಸ್ಯಾಂ ಧೃತರಾಷ್ಟ್ರನಾಮಕೋ ಗನ್ಧರ್ವರಾಟ್ 
ಪವನಾವೇಶಯುಕ್ತಃ   ॥ ೧೧.೧೩೧ ॥

ಈ ರೀತಿ ಹೇಳಿ ತಾಯಿಯಿಂದ ಒಪ್ಪಿಗೆ ಪಡೆದ ಕೃಷ್ಣದ್ವೈಪಾಯನ,
ಅಂಬಿಕೆಯಲ್ಲಿಗೆ ಹೋಗಿ ಆಯಿತವರಿಬ್ಬರ ದೇಹಗಳಮಿಲನ.
ನೋಡಿ ವ್ಯಾಸರ ಅತಿಭಯಂಕರವಾದ ರೂಪ,
ಭಯದಿಂದ ಅಂಬಿಕೆ ಕಣ್ಮುಚ್ಚಿಕೊಂಡಳು ಪಾಪ.
ಇದರಿಂದಾಯಿತು ಗಂಧರ್ವ ಧೃತರಾಷ್ಟ್ರನ ಜನನ.
ಅಲ್ಲಿ ವಾಯುದೇವರ ಆವೇಶವುಳ್ಳವನ ಆಗಮನ.


ಸ ಮಾರುತಾವೇಶಬಲಾದ್ ಬಲಾಧಿಕೋ ಬಭೂವ ರಾಜಾ ಧೃತರಾಷ್ಟ್ರನಾಮಾ।
ಅದಾದ್ ವರಂ ಚಾಸ್ಯ ಬಲಾಧಿಕತ್ವಂ ಕೃಷ್ಣೋsನ್ಧ ಆಸೀತ್ ಸ ತು 
ಮಾತೃದೋಷತಃ ॥ ೧೧.೧೩೨ ॥

ಈ ರೀತಿ ಹುಟ್ಟಿದವನದು ಧೃತರಾಷ್ಟ್ರ ಎಂದು ಹೆಸರು,
ಬಲಾಢ್ಯ ಈತನಲ್ಲಿ ಮುಖ್ಯಪ್ರಾಣಾವೇಷವು ಉಸಿರು.
ವೇದವ್ಯಾಸರಿಂದವನಿಗೆ ಬಲಾಧಿಕತ್ವವಾದ ರೂಪ,
ತಾಯಿ ತಪ್ಪಿನಿಂದ ಕುರುಡನಾಗಿ ಹುಟ್ಟಿದ್ದ  ಪಾಪ.

ಜ್ಞಾತ್ವಾ ತಮನ್ಧಂ ಪುನರೇವ ಕೃಷ್ಣಂ ಮಾತಾsಬ್ರವೀಜ್ಜನಯಾನ್ಯಂ ಗುಣಾಢ್ಯಮ್ ।
ಅಮ್ಬಾಲಿಕಾಯಾಮಿತಿ ತತ್ ತಥಾsಕರೋತ್ ಭಯಾತ್ತು 
ಸಾ ಪಾಣ್ಡುರಭೂನ್ಮೃಷಾದೃಕ್ ॥ ೧೧.೧೩೩ ॥
ಪರಾವಹೋ ನಾಮ ಮರುತ್ ತತೋsಭವದ್ ವರ್ಣ್ಣೇನ ಪಾಣ್ಡುಃ ಸ ಹಿ ನಾಮತಶ್ಚ ।
ಸ ಚಾsಸ ವೀರ್ಯ್ಯಾಧಿಕ ಏವ ವಾಯೋರಾವೇಶತಃ 
ಸರ್ವಶಸ್ತ್ರಾಸ್ತ್ರವೇತ್ತಾ    ॥ ೧೧.೧೩೪ ॥

ಸತ್ಯವತಿಗೆ ಅರಿವಾಯಿತು ಕುರುಡಗೆ ಜನ್ಮವಿತ್ತಿದ್ದಾಳೆ ಅಂಬಿಕೆ,
ಅಂಬಾಲಿಕೆಯಲ್ಲಿ ಇನ್ನೊಂದು ಮಗನ ಕೊಡಲು ವ್ಯಾಸರಲ್ಲಿ ಬೇಡಿಕೆ.
ಘಟನೆ ತಿಳಿದ ಅಂಬಾಲಿಕೆ ಕಣ್ಮುಚ್ಚದಿದ್ದರೂ ಭಯದಿಂದ ಅತಿಯಾಗಿ ಬಿಳಿಚಿಕೊಂಡಳು,
ಅವಳಂತೇ ಬಿಳಿಚಿದ ಪರಾವಹಮರುದ್ದೇವತೆಯ ಮುಖ್ಯಪ್ರಾಣಾವೇಷದ ಪಾಂಡುವಾಗಿ ಪಡೆದಳು.

ತಸ್ಮೈ ತಥಾ ಬಲವೀರ್ಯ್ಯಾಧಿಕತ್ವವರಂ ಪ್ರಾದಾತ್ ಕೃಷ್ಣ ಏವಾಥ ಪಾಣ್ಡುಮ್  ।
ವಿಜ್ಞಾಯ ತಂ ಪ್ರಾಹ ಪುನಶ್ಚ ಮಾತಾ ನಿರ್ದ್ದೋಷಮನ್ಯಂ ಜನಯೋತ್ತಮಂ 
ಸುತಮ್॥ ೧೧.೧೩೫ ॥

ಈ ರೀತಿ ಹುಟ್ಟಿದ ಪಾಂಡುವಿಗೆ ವ್ಯಾಸರಿಂದ ವರ,
ಅಧಿಕವಾಗಿರಲೆಂದು ಅವನಲ್ಲಿ ಬಲ ಮತ್ತು ವೀರ್ಯ.
ಇವನು ಬಿಳಿಚಿದವ ಎಂದು ಅರಿವಾದ ಸತ್ಯವತಿ,
ಮಾಡಿದಳು ದೋಷವಿರದ ಮಗನಿಗಾಗಿ ವಿನಂತಿ.

ಉಕ್ತ್ವೇತಿ ಕೃಷ್ಣಂ ಪುನರೇವ ಚ ಸ್ನುಷಾಮಾಹ ತ್ವಯಾsಕ್ಷ್ಣೋರ್ಹಿ ನಿಮೀಲನಂ ಪುರಾ ।
ಕೃತಂ ತತಸ್ತೇ ಸುತ ಆಸ ಚಾನ್ಧಸ್ತತಃ ಪುನಃ ಕೃಷ್ಣಮುಪಾಸ್ವ ಭಕ್ತಿತಃ ॥ ೧೧.೧೩೬ ॥

ಹೀಗೆ ವ್ಯಾಸರ ಪ್ರಾರ್ಥಿಸಿಕೊಂಡು ಸೊಸೆಗ್ಹೇಳುತ್ತಾಳೆ ಸತ್ಯವತಿ,
ನಿನ್ನ ಕಣ್ಮುಚ್ಚುವಿಕೆಯಿಂದಾಗಿ ಮಗ ಕುರುಡಾಗಿ ಹುಟ್ಟಿದ ಗತಿ.
ಮತ್ತೊಮ್ಮೆ ವೇದವ್ಯಾಸರ ಕೂಡು,
ಭಕ್ತಿಯಿಂದ ಉಪಾಸನೆಯ ಮಾಡು.

ಇತೀರಿತಾsಪ್ಯಸ್ಯ ಹಿ ಮಾಯಯಾ ಸಾ ಭೀತಾ ಭುಜಿಷ್ಯಾಂ ಕುಮತಿರ್ನ್ನ್ಯಯೋಜಯತ್ ।
ಸಾ ತಂ ಪರಾನನ್ದತನುಂ ಗುಣಾರ್ಣ್ಣವಂ ಸಮ್ಪ್ರಾಪ್ಯ ಭಕ್ತ್ಯಾ ಪರಯೈವ 
ರೇಮೇ ॥ ೧೧.೧೩೭ ॥
ತಸ್ಯಾಂ ಸ ದೇವೋsಜನಿ ಧರ್ಮ್ಮರಾಜೋ ಮಾಣ್ಡವ್ಯಶಾಪಾದ್ ಯ ಉವಾಹ ಶೂದ್ರತಾಮ್ ।
ವಸಿಷ್ಠಸಾಮ್ಯಂ ಸಮಭೀಪ್ಸಮಾನಂ ಪ್ರಚ್ಯಾವಯನ್ನಿಚ್ಛಯಾ ಶಾಪಮಾಪ   ॥೧೧.೧೩೮ ॥

ಈ ರೀತಿ ಸತ್ಯವತಿಯಿಂದ ಹೇಳಲ್ಪಟ್ಟ ಅಂಬಿಕೆ,
ಭಯ, ಭಗವದಿಚ್ಛೆಯಂತೆ ದಾಸಿಯ ಕಳಿಸುವಿಕೆ.
ಆನಂದ ಮೈದಾಳಿಬಂದ ಗುಣಸಾಗರನೊಂದಿಗೆ ಅವಳ ಮಿಲನ,
ಭಕ್ತಿಯಿಂದ ಅರ್ಪಿಸಿಕೊಂಡವಳಿಗೆ ಯಮನೇ ಮಗನಾಗಿ ಜನನ.
ಆ ದಾಸಿಯಲ್ಲಿ ಯಮದೇವನ ಅವತರಣ,
ಮಾಂಡವ್ಯ ಶಾಪಪ್ರಯುಕ್ತ ಶೂದ್ರತ್ವದಾವರಣ.
ವಸಿಷ್ಠ ಸಾಮ್ಯ ಬಯಸಿ ತಪಸ್ಸು ಮಾಡುತ್ತಿದ್ದ,
ಮಾಂಡವ್ಯನ ತಪೋಭಂಗಕ್ಕೆ ಇಚ್ಛಾಶಾಪ ಪಡೆದಿದ್ದ.

No comments:

Post a Comment

ಗೋ-ಕುಲ Go-Kula