Thursday, 13 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:139 -142

ಅಯೋಗ್ಯಸಮ್ಪ್ರಾಪ್ತಿಕೃತಪ್ರಯತ್ನದೋಷಾತ್ ಸಮಾರೋಪಿತಮೇವ ಶೂಲೇ ।
ಚೋರೈರ್ಹೃತೆsರ್ತ್ಥೇsಪಿತು ಚೋರಬುದ್ಧ್ಯಾ ಮಕ್ಷೀವಧಾದಿತ್ಯವದದ್ 
ಯಮಸ್ತಮ್ ॥ ೧೧.೧೩೯ ॥

ಯಾರೋ ಕಳ್ಳರಿಂದ ಆಗುತ್ತದೆ ಹಣದ ಕಳವು,
ಮಾಂಡವ್ಯಗಾಗುತ್ತದೆ ಶೂಲಕ್ಕೇರಿಸಲ್ಪಟ್ಟ ನೋವು.
ಯೋಗ್ಯತೆಗೆ ಮೀರಿದ ವಸಿಷ್ಠಸ್ಥಾನಕ್ಕಾಗಿ ಮಾಂಡವ್ಯನ ತಪದ ದೋಷ,
ಯಮನೆಂದ-ಹಿಂದೆ ನೊಣವ ಚುಚ್ಚಿ ಕೊಂದದ್ದರಿಂದ ನಿನಗೀ ಶಿಕ್ಷಾಪಾಶ.

ನಾಸತ್ಯತಾ ತಸ್ಯ ಚ ತತ್ರ ಹೇತುತಃ ಶಾಪಂ ಗೃಹೀತುಂ ಸ ತಥೈವ ಚೋಕ್ತ್ವಾ ।
ಅವಾಪ ಶೂದ್ರತ್ವಮಥಾಸ್ಯ ನಾಮ ಚಕ್ರೇ ಕೃಷ್ಣಃ ಸರ್ವವಿತ್ತ್ವಂ 
ತಥಾsದಾತ್ ॥ ೧೧.೧೪೦ ॥

ನೊಣಕ್ಕೆ ಚುಚ್ಚಿದ್ದ ಪಾಪವೂ ಆ ಶಿಕ್ಷೆಗಾಯಿತು ಒಂದು ಕಾರಣ,
ಬರಲಿಲ್ಲ ಯಮಧರ್ಮನ ಮಾತಿಗೆ ಅಸತ್ಯತ್ವದ ಯಾವ ಆವರಣ.
ಚಿಕ್ಕ ಕಾರಣ ಕೇಳಿದ ಮಾಂಡವ್ಯಮುನಿಗೆ ಬಂತು ಬಲು ಕೋಪ,
ತಿಳಿದೇ ಯಮ ಸ್ವೀಕರಿಸಿದ ಮಾಂಡವ್ಯನಿಂದ ಶೂದ್ರತ್ವದ ಶಾಪ.
ಶೂದ್ರನಾಗಿ ಹುಟ್ಟಿದ ಈತಗೆ ವ್ಯಾಸರಿಂದ ಸರ್ವಜ್ಞತ್ವ ವರದ ಲೇಪ.


ವಿದ್ಯಾರತೇರ್ವಿದುರೋ ನಾಮಾ ಚಾಯಂ ಭವಿಷ್ಯತಿ ಜ್ಞಾನಬಲೋಪಪನ್ನಃ ।
ಮಹಾಧನುರ್ಬಾಹುಬಲಾಧಿಕಶ್ಚ ಸುನೀತಿಮಾನಿತ್ಯವದತ್ ಸ 
ಕೃಷ್ಣಃ ॥೧೧.೧೪೧॥

ಹೀಗೆ ದಾಸಿಯಲ್ಲಿ ವೇದವ್ಯಾಸರಿಂದ ಹುಟ್ಟಿದ ಯಮಧರ್ಮ,
ವಿದ್ಯೆಯಲ್ಲೇ ರತನಾಗಿ ವಿದುರನಾಗಿ ಬೆಳಗಿದ ದೈವೀಮರ್ಮ.
ಈತನಾಗುತ್ತಾನೆ ಒಳ್ಳೇ ಧನುರ್ಧಾರಿ ಬಾಹುಬಲಾಧಿಕ,
ವ್ಯಾಸರ ವರ ಪಡೆದ ಒಳ್ಳೆಯ ನೀತಿಶಾಸ್ತ್ರ ಪ್ರವರ್ತಕ.

ಜ್ಞಾತ್ವಾsಸ್ಯ ಶೂದ್ರತ್ವಮಥಾಸ್ಯ ಮಾತಾ ಪುನಶ್ಚ ಕೃಷ್ಣಂ ಪ್ರಣತಾ ಯಯಾಚೇ ।
ಅಮ್ಬಾಲಿಕಾಯಾಂ ಜನಯಾನ್ಯಮಿತ್ಯಥೋ ನೈಚ್ಛತ್ ಸ 
ಕೃಷ್ಣೋsಭವದಪ್ಯದೃಶ್ಯಃ ॥೧೧.೧೪೨॥

ವಿದುರನ ಶೂದ್ರ ಹುಟ್ಟಿನ ವಿಷಯ ತಿಳಿದವಳಾದ  ಸತ್ಯವತಿ,
ಮತ್ತೆ ಇಡುತ್ತಾಳೆ ವ್ಯಾಸರಲ್ಲಿ ಇನ್ನೊಂದು ಮಗನಿಗಾಗಿ ವಿನಂತಿ.
ಆದರೆ ವೇದವ್ಯಾಸರಿಗಿರಲಿಲ್ಲ ಅದರಲ್ಲಿ ಮನ,
ಹಾಗೇ ಅವರಾಗುತ್ತಾರೆ ಅಲ್ಲಿಂದ ಅಂತರ್ಧಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula