ಯಶೋ ಭೀಷ್ಮಸ್ಯ ದತ್ವಾ ತು ಸೋsಮ್ಬಾಂ ಚ ಶರಣಾಗತಾಮ್ ।
ಉನ್ಮುಚ್ಯ ಭರ್ತ್ತೃದ್ವೇಷೋತ್ಥಾತ್ ಪಾಪಾತ್ ತೇನಾsಶ್ವಯೋಜಯತ್
॥೧೧.೯೭॥
ಅನನ್ತರಂ ಶಿಖಣ್ಡಿತ್ವಾತ್ ತದಾ ಸಾ ಶಾಙ್ಕರಂ ತಪಃ ।
ಭೀಷ್ಮಸ್ಯ ನಿಧನಾರ್ತ್ಥಾಯ ಪುಂಸ್ತ್ವಾರ್ತ್ಥಂ ಚ ಚಕಾರ ಹ ॥೧೧.೯೮॥
ಭೀಷ್ಮೋ ಯಥಾ ತ್ವಾಂ ಗೃಹ್ಣೀಯಾತ್ ತಥಾ ಕುರ್ಯ್ಯಾಮಿತೀರಿತಮ್ ।
ರಾಮೇಣ ಸತ್ಯಂ ತಚ್ಚಕ್ರೇ ಭೀಷ್ಮೇ ದೇಹಾನ್ತರಂ ಗತೇ ॥೧೧.೯೯॥
ಪರಶುರಾಮ ದೇವರು
ಮಾಡಿದರು ಭೀಷ್ಮನಿಗೆ ಯಶಸ್ಸು ಪ್ರದಾನ,
ಶರಣಾದ ಅಂಬೆಗೆ
ಗಂಡನ ದ್ವೇಷ ಮಾಡಿದ ಪಾಪ ವಿಮೋಚನ.
ಭೀಷ್ಮ ನಿನ್ನನ್ನು
ಪರಿಗ್ರಹಿಸುವಂತೆ ಮಾಡುತ್ತೇನೆಂದಿದ್ದ ಕೊಡಲಿ ರಾಮ,
ಅದರಂತೆಯೇ ಕೊನೆಗೆ
ನಡೆಸಿಕೊಟ್ಟದ್ದು ಸತ್ಯಸಂಕಲ್ಪನ ನೇಮ.
ಅಂಬೆ ಭೀಷ್ಮರ
ಸೇರಲಾಗದ್ದು ಅವಳು ಗಂಡನ ದ್ವೇಷ ಮಾಡಿದ ಪಾಪ,
ಆನಂತರ ಭೀಷ್ಮರ
ಹೊಂದಲಾಗದ್ದು ಅವಳು ಶಿಖಂಡಿಯಾದ ರೂಪ.
ಮುಂದೆ ಭೀಷ್ಮರು
ತನ್ನ ದೇಹ ಬಿಟ್ಟು ತಮ್ಮ ಮೂಲರೂಪ ಹೊಂದಿದ ಸಮಯ,
ತನ್ನನುಗ್ರಹದಿಂದ
ಅಂಬೆಯ ಪಾಪ ಕಳಚಿ ಮೂಲ ರೂಪದಿ ಗಂಡನ ಸೇರಿಸಿದ ಕರುಣಾಮಯ.
ಅಂಬೆ ಭೀಷ್ಮರಿಂದ
ವಂಚಿತಳಾದಾಗ,
ಶಂಕರನ ಕುರಿತು
ತಪಸ್ಸಾಚರಿಸುತ್ತಾಳಾಗ.
ಭೀಷ್ಮಾಚಾರ್ಯರಿಗೆ
ಬರಬೇಕು ಮರಣ,
ಗಂಡಾಗಿ ತಾ
ಹುಟ್ಟಬೇಕೆಂದವಳ ತಪದ ಕಾರಣ.
ರುದ್ರಸ್ತು ತಸ್ಯಾಸ್ತಪಸಾ ತುಷ್ಟಃ ಪ್ರಾದಾದ್ ವರಂ ತದಾ ।
ಭೀಷ್ಮಸ್ಯ ಮೃತಿಹೇತುತ್ವಂ ಕಾಲಾತ್ ಪುಂದೇಹಸಮ್ಭವಮ್ ॥೧೧.೧೦೦॥
ಮಾಲಾಂ ಚ ಯ ಇಮಾಂ ಮಾಲಾಂ ಗೃಹ್ಣೀಯಾತ್ ಸ ಹನಿಷ್ಯತಿ ।
ಭೀಷ್ಮಮಿತ್ಯೇವ ತಾಂ ಮಾಲಾಂ ಗೃಹೀತ್ವಾ ಸಾ ನೃಪಾನ್ ಯಯೌ ॥೧೧.೧೦೧॥
ತಾಂ ನ ಭೀಷ್ಮಭಯಾತ್ ಕೇsಪಿ ಜಗೃಹುಸ್ತಾಂ ಹಿ ಸಾ
ತತಃ ।
ದ್ರುಪದಸ್ಯ ಗೃಹದ್ವಾರಿ ನ್ಯಸ್ಯ ಯೋಗಾತ್ ತನುಂ ಜಹೌ ॥೧೧.೧೦೨॥
ಅಂಬೆಯ
ತಪಸ್ಸಿಗೊಲಿದ ರುದ್ರನಿಂದ ಅವಳಿಗೆ ವರಪ್ರದಾನ,
ಭೀಷ್ಮನ
ಸಾವಿಗಾಗುವೆ ನೀ ಕಾರಣ ಗಂಡುದೇಹ ಪ್ರಾಪ್ತಿ ಕಾಲಕ್ರಮೇಣ.
ರುದ್ರದೇವ
ವರದೊಂದಿಗೆ ಕೊಡುತ್ತಾನೆ ಆಕೆಗೆ ಒಂದು ಮಾಲೆ,
ಮಾಲೆ
ಸ್ವೀಕರಿಸಿದವನೇ ಭೀಷ್ಮರ ಕೊಲ್ಲುವ ಎಂದ್ಹೇಳಿದ ಲೀಲೆ.
ನಂತರ ಅಂಬೆ ಆ
ಮಾಲೆಯೊಂದಿಗೆ ರಾಜರುಗಳ ಬಳಿ ಹೋಗುವಿಕೆ,
ಭೀಷ್ಮರ ಮೇಲಿನ
ಭಯದಿಂದ ಯಾರೂ ಅದನ್ನ ಸ್ವೀಕರಿಸದಿರುವಿಕೆ.
ಆನಂತರ ಅಂಬೆ ಆ
ಮಾಲೆಯ ದ್ರುಪದನ ಮನೆಯ ಬಾಗಿಲಲ್ಲಿಟ್ಟು,
ಯೋಗಶಕ್ತಿಯಿಂದ ಏರುತ್ತಾಳೆ ಮೇಲೆ ತನ್ನ ದೇಹವ ಭುವಿಯಲಿ
ಬಿಟ್ಟು.[Contributed by Shri Govind Magal]
No comments:
Post a Comment
ಗೋ-ಕುಲ Go-Kula