Thursday 29 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:93 - 96

ಭೀಷ್ಮಾಯ ತು ಯಶೋ ದಾತುಂ ಯುಯುಧೇ ತೇನ ಭಾರ್ಗ್ಗವಃ ।
ಅನನ್ತಶಕ್ತಿತರಪಿ ಸ ನ ಭೀಷ್ಮಂ ನಿಜಘಾನ ಹ ।
ನಚಾಮ್ಬಾಂ ಗ್ರಾಹಯಾಮಾಸ ಭೀಷ್ಮಕಾರುಣ್ಯಯನ್ತ್ರಿತಃ ॥೧೧.೯೩॥

ಭೀಷ್ಮಗೆ ಯಶಸ್ಸು ಕೊಡಲೆಂದೇ ಪರಶುರಾಮ ಅವನೊಂದಿಗೆ ಮಾಡಿದ ಯುದ್ಧ,
ಎಣೆಯಿರದ ಶಕ್ತಿಯುಳ್ಳವನಾದರೂ ಪರಶುರಾಮ ಭೀಷ್ಮನ ಕೊಲ್ಲದೇ ಬಿಟ್ಟು ಬಿಟ್ಟಿದ್ದ.
ಭೀಷ್ಮನ ಮೇಲಿನ ಕಾರುಣ್ಯದಿಂದ ಪರಶುರಾಮ,
ಅಂಬೆಯೊಂದಿಗೆ ನಡೆಸುವುದಿಲ್ಲ ಮದುವೆ ನೇಮ.

ಅನನ್ತಶಕ್ತಿಃ ಸಕಲಾನ್ತರಾತ್ಮಾ ಯಃ ಸರ್ವವಿತ್ ಸರ್ವವಶೀ ಚ ಸರ್ವಜಿತ್ ।
ನ ಯತ್ಸಮೋsನ್ಯೋsಸ್ತಿ ಕಥಞ್ಚ ಕುತ್ರಚಿತ್ ಕಥಂ ಹ್ಯಶಕ್ತಿಃ ಪರಮಸ್ಯ ತಸ್ಯ’॥೧೧.೯೪॥

ಭೀಷ್ಮಂ ಸ್ವಭಕ್ತಂ ಯಶಸಾsಭಿಪೂರಯನ್ ವಿಮೋಹಯನ್ನಾಸುರಾಂಶ್ಚೈವ ರಾಮಃ ।
ಜಿತ್ವೈವ ಭೀಷ್ಮಂ ನ ಜಘಾನ ದೇವೋ ವಾಚಂ ಚ ಸತ್ಯಾಮಕರೋತ್ ಸ ತಸ್ಯ’ ॥೧೧.೯೫॥

ವಿದ್ಧವನ್ಮುಗ್ಧವಚ್ಛೈವ ಕೇಶವೋ ವೇದನಾರ್ತ್ತವತ್ ।
ದರ್ಶಯನ್ನಪಿ ಮೋಹಾಯ ನೈವ ವಿಷ್ಣುಸ್ತಥಾ ಭವೇತ್’ ।
ಏವಮಾದಿಪುರಾಣೋತ್ಥವಾಕ್ಯಾದ್ ರಾಮಃ ಸದಾ ಜಯೀ ॥೧೧.೯೬॥

ಯಾರು ಎಣೆಯಿರದ ಶಕ್ತಿ ಇರುವಾತ,
ಎಲ್ಲರ ಒಳಗೂ ತುಂಬಿ ಇರುವಾತ.
ಎಲ್ಲರ ಎಲ್ಲವನ್ನೂ ಬಲ್ಲವನಾತ,
ಎಲ್ಲವನ್ನು ವಶದಲ್ಲಿಟ್ಟುಕೊಂಡಾತ.
ಅವನಿಗೆಣೆಯಾದವರೇ ಇರದಂಥಾತ,
ಅಂಥ ಪರಶುರಾಮ ಶಕ್ತ್ಯಾಭಾವರಹಿತ.
ಪರಶುರಾಮ ತನ್ನ ಭಕ್ತ ಭೀಷ್ಮನ ಕೀರ್ತಿಯಿಂದ ಮೆರೆಸಲು,
ಅಸುರರನ್ನು ಅಸುರಸಂಬಂಧಿಗಳನ್ನು ಮೋಹಕ್ಕೆ ಒಳಗಾಗಿಸಲು,
ತಾನು ಭೀಷ್ಮನ ಗೆದ್ದಿದ್ದರೂ ಬಯಸಲಿಲ್ಲ ಅವನ ಕೊಲ್ಲಲು.
ಭೀಷ್ಮರ ಪ್ರತಿಜ್ಞೆಯಿತ್ತು ಮದುವೆಯಾಗಲಾರೆನೆಂದು,
ಆ ಪ್ರತಿಜ್ಞೆಯ ಸತ್ಯ ಮಾಡಿಸಿದ ತಾನು ಭಕ್ತಬಂಧು.
ಕೇಶವ ಕಾಣಿಸಿಕೊಂಡ ಗಾಯಗೊಂಡವನಂತೆ,
ಮೂರ್ಛೆ ಹೋದವನಂತೆ --ನೊಂದವನಂತೆ.
ಹಾಗೆ ತೋರಿಸಿಕೊಂಡರೂ ಮೂಲತಃ ಹಾಗಾಗಲಾರ,
ಪುರಾಣೋಕ್ತಿಯಂತೆ ಅವ ಸೋಲಿಲ್ಲದ  ಸರದಾರ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula