Thursday 1 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 61 - 68

ಅಥೋ ಮನುಷ್ಯೇಷು ತಥಾsಸುರೇಷು ರೂಪಾನ್ತರೈಃ ಕಲಿರೇವಾವಶಿಷ್ಟಃ ।
ತತೋ ಮನುಷ್ಯೇಷು ಚ ಸತ್ಸು ಸಂಸ್ಥಿತೋ ವಿನಾಶ್ಯ ಇತ್ಯೇಷ 
ಹರಿರ್ವ್ಯಚಿನ್ತಯತ್ ॥೧೦.೬೧ ॥

ದೇವತೆಗಳ ಮನಸ್ಸಿನಿಂದಂತೂ  ಕಲಿ ಹೊರಬಿದ್ದ,
ಮನುಷ್ಯ ಅಸುರರಲ್ಲಿ ಬೇರೆ ರೀತಿಗಳಿಂದ ಇದ್ದೇಇದ್ದ.
ಆಗಬೇಕು ಮನುಷ್ಯೋತ್ತಮರಲ್ಲಿ ಇರುವ ಕಲಿಯ ನಾಶ,
ಹೀಗೆಂದು ಯೋಚಿಸಿದರಂತೆ ವೇದವ್ಯಾಸ ರೂಪದ ಈಶ.

ತತೋ ನೃಣಾಂ ಕಾಲಬಲಾತ್ ಸುಮನ್ದಮಾಯುರ್ಮ್ಮತಿಂ ಕರ್ಮ್ಮ ಚ ವೀಕ್ಷ್ಯ ಕೃಷ್ಣಃ ।
ವಿವ್ಯಾಸ ವೇದಾನ್ ಸ ವಿಭುಶ್ಚತುರ್ದ್ಧಾ  ಚಕ್ರೇ ತಥಾ ಭಾಗವತಂ ಪುರಾಣಮ್ ॥೧೦.೬೨॥

ಮನುಷ್ಯರಿಗಿರುವ ಆಯುಷ್ಯ ಬುದ್ಧಿ ಆಚರಣೆ ಎಲ್ಲವೂ ಕಡಿಮೆ -ಸೀಮಿತ,
ವೇದಗಳ ನಾಕುಭಾಗ ಮಾಡಿ ಹದಿನೆಂಟು ಪುರಾಣಗಳ ಕೊಟ್ಟ ವೇದವ್ಯಾಸನೀತ.
ಅದರಲ್ಲೇ ಪುರಾಣಗಳ ರಾಜನೆನಿಸಿದ ಶ್ರೀಮದ್ಭಾಗವತ,
ಅದರಲ್ಲಿ ತೆರೆದಿಟ್ಟರು ವೈಷ್ಣವ ತತ್ವದ ಅನನ್ಯ  ನವನೀತ.

ಯೇಯೇ ಚ ಸನ್ತಸ್ತಮಸಾsನುವಿಷ್ಟಾಸ್ತಾಂಸ್ತಾನ್ ಸುವಾಕ್ಯೈಸ್ತಮಸೋ ವಿಮುಞ್ಚನ್ ।
ಚಚಾರ ಲೋಕಾನ್ ಸ ಪಥಿ ಪ್ರಯಾನ್ತಂ ಕೀಟಂ ವ್ಯಪಶ್ಯತ್ ತಮುವಾಚ 
ಕೃಷ್ಣಃ  ॥೧೦.೬೩॥

ಭವಸ್ವ ರಾಜಾ ಕುಶರೀರಮೇತತ್ ತ್ಯಕ್ತ್ವೇತಿ ನೈಚ್ಛತ್ ತದಸೌ ತತಸ್ತಮ್ ।
ಅತ್ಯಕ್ತದೇಹಂ ನೃಪತಿಂ ಚಕಾರ ಪುರಾ ಸ್ವಭಕ್ತಂ ವೃಷಲಂ 
ಸುಲುಬ್ಧಮ್  ॥೧೦.೬೪॥

ಲೋಭಾತ್ ಸ ಕೀಟತ್ವಮುಪೇತ್ಯ ಕೃಷ್ಣಪ್ರಸಾದತಶ್ಚಾsಶು ಬಭೂವ ರಾಜಾ ।
ತದೈವ ತಂ ಸರ್ವನೃಪಾಃ ಪ್ರಣೇಮುರ್ದ್ಧದುಃ ಕರಂ ಚಾಸ್ಯ ಯಥೈವ 
ವೈಶ್ಯಾಃ  ॥೧೦.೬೫॥

ಯಾವಯಾವ ಸಜ್ಜನರಿಗಿತ್ತೋ ಅಜ್ಞಾನದ ಸಂಪರ್ಕ,
ಅವರನ್ನೆಲ್ಲ ಉದ್ಧರಿಸಿದರು ನೀಡಿ ಜ್ಞಾನಮಧುಪರ್ಕ.
ಕೈಗೊಂಡರು ಅವರು ಲೋಕಸಂಚಾರ,
ಮಾರ್ಗದಿ ಕಂಡರೊಂದು ಕೀಟ ಶರೀರ.
ಕೀಟಶರೀರ ಬಿಟ್ಟು ರಾಜನಾಗಲು ಹೇಳಿದ ಪ್ರಸಂಗ,
ಒಪ್ಪದಿರಲು ; ಆ ಕೀಟವನ್ನೇ ರಾಜನಾಗಿಸಿದರಾಗ.
ಕೀಟವಾಗಿತ್ತು ಹಿಂದಿನ ಜನ್ಮದಲ್ಲಿ ಒಂದು ಶೂದ್ರ ಭಕ್ತ,
ಆದರೆ ಅವನಾಗಿದ್ದ ಜಿಪುಣತನದಿಂದ ದೋಷಯುಕ್ತ.
ಕೀಟ ದೇಹವಾದರೂ ಭಕ್ತಿಯದು ಇದ್ದೇ ಇತ್ತು,
ಹಾಗಾಗಿ ಅದು ವ್ಯಾಸರನುಗ್ರಹಕ್ಕೆ ಪಾತ್ರವಾಗಿತ್ತು.
ವ್ಯಾಸರನುಗ್ರಹದಿಂದ ಕೀಟ ದೇಹದಲ್ಲೇ ರಾಜನಾದ,
ಬೇರೆ ರಾಜರಿಂದ ಕಪ್ಪ ನಮನಗಳ ಸ್ವೀಕರಿಸಿ ಮೆರೆದ.

(ಇದನ್ನೇ ವಾದಿರಾಜರು 'ಮಧ್ವಾಂತರ್ಗತ ವೇದವ್ಯಾಸ ಕಾಯೋ ಶುದ್ಧ 
ಮೂರುತಿಯೇ ಸರ್ವೇಶ'
'ಕ್ರಿಮಿಯಿಂದ ರಾಜ್ಯವಾಳಿಸಿದ ಜಗತ್ಸ್ವಾಮಿ ನೀನೆಂದು ತೋರಿದ' -ಸಂದೇಶ )

ಉವಾಚ ತಂ ಭಗವಾನ್ ಮುಕ್ತಿಮಸ್ಮಿಂಸ್ತವ ಕ್ಷಣೇ ದಾತುಮಹಂ ಸಮರ್ತ್ಥಃ ।
ತಥಾsಪಿ ಸೀಮಾರ್ತ್ಥಮವಾಪ್ಯ ವಿಪ್ರತನುಂ ವಿಮುಕ್ತೋ ಭವ ಮತ್ 
ಪ್ರಸಾದಾತ್  ॥೧೦.೬೬ ॥

ಈ ಕ್ಷಣವೇ ನಿನಗೆ ಮೋಕ್ಷ ಕರುಣಿಸಲು ನಾನೇನೋ ಸಿದ್ಧ,
ಕರ್ಮಾನುಸಾರ ಇನ್ನೊಂದು ಬ್ರಾಹ್ಮಣಜನ್ಮಕೆ ನೀನು  ಬದ್ಧ.
ಮುಕ್ತನಾಗುವೆ ಆಗಲೇ ನೀನು ನನ್ನ ಅನುಗ್ರಹದಿಂದ.

ಜ್ಞಾನಂ ಚ ತಸ್ಮೈ ವಿಮಲಂ ದದೌ ಸ ಮಹೀಂ ಚ ಸರ್ವಾಂ ಬುಭುಜೇ ತದನ್ತೇ ।
ತ್ಯಕ್ತ್ವಾ ತನುಂ ವಿಪ್ರವರತ್ವಮೇತ್ಯ ಪದಂ ಹರೇರಾಪ ಸುತತ್ತ್ವವೇದೀ  ॥೧೦.೬೭॥

ವೇದವ್ಯಾಸರಿಂದ ಕೀಟದಲ್ಲಿದ್ದ ಸುಜೀವಿಗೆ ಜ್ಞಾನಪ್ರದಾನ,
ಅವರನುಗ್ರಹದಿಂದಲೇ ರಾಜನಾಗಿ ಮಾಡಿದ ಭೂಪಾಲನ.
ಕಡೆಗೆ ಕೀಟದೇಹ ಬಿಟ್ಟು ಬ್ರಾಹ್ಮಣ ಜನ್ಮ ಹೊಂದಿದ ಜೀವ,
ತತ್ವಜ್ಞಾನ ಸಾಕಾರವಾಗಿ ಮೋಕ್ಷ ಪಡೆದ ಆ ಮಹಾನುಭಾವ.

ಏವಂ ಬಹೂನ್ ಸಂಸೃತಿಬನ್ಧತಃ ಸ ವ್ಯಮೋಚಯದ್ ವ್ಯಾಸತನುರ್ಜ್ಜನಾರ್ದ್ದನಃ ।
ಬಹೂನ್ಯಚಿನ್ತ್ಯಾನಿ ಚ ತಸ್ಯ ಕರ್ಮ್ಮಾಣ್ಯಶೇಷದೇವೇಶಸದೋದಿತಾನಿ  ॥೧೦.೬೮॥.

ಹೀಗೆ ವ್ಯಾಸರೂಪದಿಂದ ಕಾಣಿಸಿಕೊಂಡ ನಾರಾಯಣ,
ಅನೇಕ ಸುಜೀವಿಗಳಿಗೆ ಜ್ಞಾನವಿತ್ತು ಬಿಡುಗಡೆಗಾದ ಕಾರಣ.
ವ್ಯಾಸಾವತಾರದಲಿ ತೋರಿದ ದಿವ್ಯ ಕರ್ಮಗಳ ಕರುಣೆ,
ಮಾಡುತ್ತಿರುತ್ತಾರೆ ದೇವತಾಶ್ರೇಷ್ಠರು ಸತತವಾದ ಸ್ಮರಣೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula