Wednesday, 7 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 01 - 04


।। ಓಂ ।।
ಶಶಾಙ್ಕಪುತ್ರಾದಭವತ್ ಪುರೂರವಾಸ್ತಸ್ಯಾSಯುರಾಯೋರ್ನ್ನಹುಷೋ ಯಯಾತಿಃ ।
ತಸ್ಯಾSಸ ಪತ್ನೀಯುಗಳಂ ಸುತಾಶ್ಚ ಪಞ್ಚಾಭವನ್ ವಿಷ್ಣುಪದೈಕಭಕ್ತಾಃ       ॥೧೧.೦೧॥

(ಆಚಾರ್ಯರಿಂದ ಮಹಾಭಾರತ ಕಥಾಭಾಗದ ವಿವರಣೆ,
ವಿಶಾಲ ವಂಶವೃಕ್ಷದ ಮೂಲಕ ವಿಸ್ತೃತವಾದ ನಿರೂಪಣೆ).

ಚಂದ್ರನ ಮಗನಾದ ಬುಧನಿಂದ ಪುರೂರವ ರಾಜನ ಜನನ,
ಪುರೂರವಗೆ ಆಯು ಆಯುವಿನಿಂದ ನಹುಷನ ಆಗಮನ,
ನಹುಷರಾಜನಲ್ಲಿ ಯಯಾತಿಯದು ಆಯಿತು ಜನನ.
ಯಯಾತಿ ರಾಜಗೆ ಇಬ್ಬರು ಪತ್ನಿಯರಿದ್ದರು,
ಹರಿಪಾದದಲ್ಲಿ ಭಕ್ತಿಯುಳ್ಳ ಐದು ಮಕ್ಕಳಿದ್ದರು.

ಯದುಂ ಚ ತುರ್ವಶುಂ ಚೈವ ದೇವಯಾನೀ ವ್ಯಜಾಯತ ।
ದ್ರುಹ್ಯುಂ ಚಾನುಂ ತಥಾ ಪೂರುಂ ಶರ್ಮ್ಮಿಷ್ಠಾ ವಾರ್ಷಪರ್ವಣಿ ॥೧೧.೦೨॥

ದೇವಯಾನಿ ಮತ್ತು ಶರ್ಮಿಷ್ಠೆ ಯಯಾತಿಯ ಹೆಂಡಂದಿರು,
ದೇವಯಾನಿಯಲ್ಲಿ ಯಯಾತಿಗೆ ಯದು ತುರ್ವಶು ಮಕ್ಕಳಿಬ್ಬರು.
ವೃಷಪರ್ವನ ಮಗಳು ಶರ್ಮಿಷ್ಠೆಯಲ್ಲಿ ದ್ರುಹ್ಯ, ಅನು ಮತ್ತು ಪೂರು.


ಯದೋರ್ವಂಶೇ ಚಕ್ರವರ್ತ್ತೀ ಕಾರ್ತ್ತವೀರ್ಯ್ಯಾರ್ಜ್ಜುನೋsಭವತ್ ।
ವಿಷ್ಣೋರ್ದ್ದತ್ತಾತ್ರೇಯನಾಮ್ನಃ ಪ್ರಸಾದಾದ್ ಯೋಗವೀರ್ಯ್ಯವಾನ್ ॥೧೧.೦೩॥

ಯದುವಂಶದಲ್ಲಿ ಯಾರೂ ಚಕ್ರವರ್ತಿ ಆಗಬಾರದೆಂದು ಇತ್ತು ಯಯಾತಿಯ ಶಾಪ,
ಆ ವಂಶದ ಕೃತವೀರ್ಯಪುತ್ರ ಅರ್ಜುನ ದತ್ತಾತ್ರೇಯ ದಯದಿಂದ ಚಕ್ರವರ್ತಿಯಾದ ಭೂಪ.
ಆತನಾಗಿದ್ದ ಭಗವದನುಗ್ರಹದಿಂದ ಕರ್ಮಯೋಗ ಪರಾಕ್ರಮ ಹೊಂದಿದ ವಿಶೇಷ ನೃಪ.

ತಸ್ಯಾನ್ವವಾಯೇ ಯದವೋ ಬಭೂವುರ್ವಿಷ್ಣುಸಂಶ್ರಯಾಃ ।
ಪುರೋರ್ವಂಶೇ ತು ಭರತಶ್ಚಕ್ರವರ್ತ್ತೀ ಹರಿಪ್ರಿಯಃ ॥೧೧.೦೪॥

ಯದುವಿನ ವಂಶದಲ್ಲಿ ವಿಷ್ಣುಭಕ್ತರಾದ ಯಾದವರದಾಯಿತು ಜನನ,
ಪೂರುವಿನ ವಂಶದಲ್ಲಿ ನಾರಾಯಣಪ್ರಿಯ ಭರತ ಚಕ್ರವರ್ತಿ ಆಗಮನ.

No comments:

Post a Comment

ಗೋ-ಕುಲ Go-Kula