Friday 16 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 64 - 66

ಯದಾ ಹಿ ಜಾತಃ ಸ ಕೃಪಸ್ತದೈವ ಬೃಹಸ್ಪತೇಃ ಸೂನುರಗಾಚ್ಚ ಗಙ್ಗಾಮ್ ।
ಸ್ನಾತುಂ ಘೃತಾಚೀಂ ಸ ದದರ್ಶ ತತ್ರ ಶ್ಲಥದ್ದುಕೂಲಾಂ 
ಸುರವರ್ಯ್ಯಕಾಮಿನೀಮ್    ॥೧೧.೬೪॥
ಯಾವಾಗ ಆಯಿತೋ ಕೃಪಾಚಾರ್ಯರ ಜನನ,
ಬೃಹಸ್ಪತಿಪುತ್ರ ಭರದ್ವಾಜ ಹೊರಟ ಮಾಡಲು ಗಂಗಾಸ್ನಾನ.
ಅಲ್ಲಿತ್ತು ದೇವತೆಗಳ ಅಪ್ಸರೆಯಾದ ಘೃತಾಚೀಯ ಉಪಸ್ಥಿತಿ,
ಭರದ್ವಾಜ ಘೃತಾಚೀಯ ಕಂಡಾಗವಳದು ಬಟ್ಟೆ ಜಾರಿದ ಸ್ಥಿತಿ.

ತದ್ದರ್ಶನಾತ್ ಸ್ಕನ್ನಮಥೇನ್ದ್ರಿಯಂ ಸ ದ್ರೋಣೇ ದಧಾರಾsಶು ತತೋsಭವತ್ ಸ್ವಯಮ್ ।
ಅಮ್ಭೋಜಜಾವೇಶಯುತೋ ಬೃಹಸ್ಪತಿಃ ಕರ್ತ್ತುಂ ಹರೇಃ ಕರ್ಮ್ಮ 
ಬುವೋ ಭರೋದ್ಧೃತೌ   ॥೧೧.೬೫॥

ಘೃತಾಚೀಯ ನೋಡಿದ್ದರಿಂದ ಜಾರಿದ ರೇತಸ್ಸನ್ನು ಭರದ್ವಾಜರು ಕೊಳಗದಲ್ಲಿ ಹಿಡಿದಿಡುವಿಕೆ,
ಅದಾಯಿತು ಬ್ರಹ್ಮನ ಆವೇಶದಿಂದ ಕೂಡಿದ ಬೃಹಸ್ಪತಿ ಹುಟ್ಟಿ ಬರುವ ಪ್ರಥಮ ವೇದಿಕೆ.
ಭೂಭಾರ ಹನನ ಕಾರ್ಯದಲ್ಲಿ ಭಗವತ್ ಸೇವೆಗಾಗಿ ಬೃಹಸ್ಪತಿ ತಾನೇ ಜನ್ಮ ತಾಳಿ ಬರುವಿಕೆ.

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ 
ಸೋsಚಿರೇಣ   ॥೧೧.೬೬॥

ಈರೀತಿ ಅವತರಿಸಿದ ಬೃಹಸ್ಪತಿಗೆ ಭರದ್ವಾಜರಿಟ್ಟ ಹೆಸರು ದ್ರೋಣ,
ಭರದ್ವಾಜ ತೊಡಿಸಿದರು ದ್ರೋಣಗೆ ಸರ್ವ ವೇದ ಶಾಸ್ತ್ರಗಳಾಭರಣ.
ಅತಿಶೀಘ್ರದಿ ಎಲ್ಲ ಕಲಿತ ದ್ರೋಣನಾದ ಸರ್ವ ವಿದ್ಯಾಪ್ರವೀಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula