Thursday 22 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 81 - 86

ಸ್ವಚ್ಛನ್ದಮೃತ್ಯುತ್ವವರಂ ಪ್ರದಾಯ ತಥಾsಪ್ಯಜೇಯತ್ವಮಧೃಷ್ಯತಾಂ ಚ ।
ಯುದ್ಧೇಷು ಭೀಷ್ಮಸ್ಯ ನೃಪೋತ್ತಮಃ ಸ ರೇಮೇ ತಯೈವಾಬ್ದಗಣಾನ್ ಬಹೂಂಶ್ಚ  ॥೧೧.೮೧॥

ಸಂತುಷ್ಟನಾದ ಶಂತನು ಭೀಷ್ಮಾಚಾರ್ಯರಿಗೆ ಕೊಟ್ಟ ವರ ಇಚ್ಛಾಮರಣ,
ಯುದ್ಧದಲ್ಲಿ ಇತರರಿಂದ ಗೆಲ್ಲಲಾಗದಂಥ ಯಾರಿಗೂ ಸೋಲದಂಥ ತ್ರಾಣ.
ಮುಂದೆ ಪತ್ನಿ ಸತ್ಯವತಿಯೊಂದಿಗೆ ನಡೆಸಿದ ಸುಖದ ದಾಂಪತ್ಯ ಜೀವನ.

ಲೇಭೇ ಸ ಚಿತ್ರಾಙ್ಗದಮತ್ರ ಪುತ್ರಂ ತಥಾ ದ್ವಿತೀಯಂ ಚ ವಿಚಿತ್ರವೀರ್ಯ್ಯಮ್ ।
ತಯೋಶ್ಚ ಬಾಲ್ಯೇ ವ್ಯಧುನೋಚ್ಛರೀರಂ ಜೀರ್ಣ್ಣೇನ ದೇಹೇನ ಹಿ ಕಿಂ ಮಮೇತಿ ॥೧೧.೮೨॥

ಶಂತನು ಸತ್ಯವತಿಯಲ್ಲಿ ಆದ ಇಬ್ಬರು ಮಕ್ಕಳು ಚಿತ್ರಾಂಗದ-ವಿಚಿತ್ರವೀರ್ಯ,
ಮಕ್ಕಳು ಚಿಕ್ಕವರಿರುವಾಗಲೇ ಅವ ಮಾಡಿದ ತನ್ನ ಜೀರ್ಣದೇಹ ತ್ಯಾಗ ಕಾರ್ಯ.

ಸ್ವೇಚ್ಛಯಾ ವರುಣತ್ವಂ ಸ ಪ್ರಾಪ ನಾನಿಚ್ಛಯಾ ತನುಃ ।
ತಸ್ಮಿನ್ ಕಾಲೇ ತ್ಯಜ್ಯತೇ ಹಿ ಬಲವದ್ಭಿರ್ವಧಂ ವಿನಾ ॥೧೧.೮೩॥

ಅತಿಸಕ್ತಾಸ್ತಪೋಹೀನಾಃ ಕಥಞ್ಚಿನ್ಮೃತಿಮಾಪ್ನುಯುಃ ।
ಅನಿಚ್ಛಯಾsಪಿ ಹಿ ಯಥಾ ಮೃತಶ್ಚಿತ್ರಾಙ್ಗದಾನುಜಃ ॥೧೧.೮೪॥

ಶಂತನು ಸ್ವೇಚ್ಛೆಯಿಂದ ದೇಹತ್ಯಾಗ ಮಾಡಿ ವರುಣತ್ವ ಪಡೆದ ಕಾಲ,
ಅಂಥ ಕಾಲದಲ್ಲಿ ಇಚ್ಛೆ ಇಲ್ಲದೇ ದೇಹ ಬಿಡುವವರೇ ಬಲು ವಿರಳ.
ಒಂದೋ ತಮಗಿಂತ ತಪೋಬಲ ಶ್ರೇಷ್ಠರಿಂದ ಸಾವು,
ಅಥವಾ ವಿಷಯಾಸಕ್ತ ತಪೋಹೀನರಾಗಿ ಸಾವಿನ ನೋವು.

ಅಥೌರ್ಧ್ವದೈಹಿಕಂ ಕೃತ್ವಾ ಪಿತುರ್ಭೀಷ್ಮೋsಭ್ಯಷೇಚಯತ್।
ರಾಜ್ಯೇ ಚಿತ್ರಾಙ್ಗದಂ ವೀರಂ ಯೌವರಾಜ್ಯೇsಸ್ಯ ಚಾನುಜಮ್ ॥೧೧.೮೫॥

ಶಂತನುವಿನ ಮರಣಾನಂತರ ಭೀಷ್ಮಾಚಾಚಾರ್ಯ,
ಪೂರೈಸಿದರೆಲ್ಲ ಔರ್ಧ್ವದೈಹಿಕ ಶಾಸ್ತ್ರೋಕ್ತ ಕಾರ್ಯ.
ಮಾಡಿದರು ಬಲಿಷ್ಠ ಚಿತ್ರಾಂಗದನ ರಾಜ,
ವಿಚಿತ್ರವೀರ್ಯನನ್ನಾಗಿಸಿದರು ಯುವರಾಜ.

ಚಿತ್ರಾಙ್ಗದೇನೇ ನಿಹತೋ ನಾಮ ಸ್ವಂ ತ್ವಪರಿತ್ಯಜನ್ ।
ಚಿತ್ರಾಙ್ಗದೋsಕೃತೋದ್ವಾಹೋ ಗನ್ಧರ್ವೇಣ ಮಹಾರಣೇ ॥೧೧.೮೬॥

ಎಚ್ಚರಿಸಿದರೂ ಚಿತ್ರಾಂಗದ ತನ್ನ ಹೆಸರನ್ನು ಪರಿತ್ಯಾಗ ಮಾಡದ ಕಾರಣ,
ಅದೇ ಹೆಸರಿನ ಗಂಧರ್ವನಿಂದ ಮಹಾಯುದ್ಧಲ್ಲಿ ಆಯಿತವನ ಮರಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula