Friday, 9 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 16 - 21


ಪೂರ್ವೋದಧೇಸ್ತೀರಗತೇsಬ್ಜಸಮ್ಭವೇ ಗಙ್ಗಾಯುತಃ ಪರ್ವಣಿ ಘೂರ್ಣ್ಣಿತೋsಬ್ಧಿಃ  
ಅವಾಕ್ಷಿಪತ್ ತಸ್ಯ ತನೌ ನಿಜೋದಬಿನ್ದುಂ ಶಶಾಪೈನಮಥಾಬ್ಜಯೋನಿಃ ॥೧೧.೧೬॥

ಒಮ್ಮೆ ಬ್ರಹ್ಮದೇವರು ಪೂರ್ವದಿಕ್ಕಿನ ಸಮುದ್ರತೀರದಲ್ಲಿ ಇರುತ್ತಿರಲು,
ಹುಣ್ಣಿಮೆ ಕಾಲದಿ ವರುಣ ಗಂಗೆಯಿಂದ ಕೂಡಿ ಮೇಲೆ ಉಕ್ಕಿ ಬರುತ್ತಿರಲು,
ಹೀಗೆ ಉಕ್ಕಿದಾತನಿಂದ ಬ್ರಹ್ಮ ಶರೀರದ ಮೇಲಾಯ್ತು ನೀರ ಹನಿಗಳ ಸಿಂಚನ.
ಬ್ರಹ್ಮದೇವರು ಶಪಿಸುತ್ತಾರೆ ಆಗ ವರುಣ ನಿರ್ಲಕ್ಷ್ಯದಿ ಕಾರ್ಯವೆಸಗಿದ ಕಾರಣ.

ಮಹಾಭಿಷಙ್   ನಾಮ ನರೇಶ್ವರಸ್ತ್ವಂ ಭೂತ್ವಾ ಪುನಃ ಶನ್ತನುನಾಮಧೇಯಃ ।
ಜನಿಷ್ಯಸೇ ವಿಷ್ಣುಪದೀ ತಥೈಷಾ ತತ್ರಾಪಿ ಭಾರ್ಯ್ಯಾ ಭವತೋ 
ಭವಿಷ್ಯತಿ ॥೧೧.೧೭॥

'ನೀನು ಮೊದಲು ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುವೆ,
ಆ ಜನ್ಮಾನಂತರ ಮತ್ತೆ ಹುಟ್ಟಿ ಬಂದು ಶಂತನು ನಾಮ ಧರಿಸುವೆ.
ಅಲ್ಲಿಯೂ ನಿನ್ನ ಪತ್ನಿಯಾಗಿ ಗಂಗೆಯನ್ನೇ ಹೊಂದಿ ವರಿಸುವೆ.

ಶಾನ್ತೋ ಭವೇತ್ಯೇವ ಮಯೋದಿತಸ್ತ್ವಂ ತನುತ್ವಮಾಪ್ತೋsಸಿ ತತಶ್ಚ ಶನ್ತನುಃ   
ಇತೀರಿತಃ ಸೋsಥ ನೃಪೋ ಬಭೂವ ಮಹಾಭಿಷಙ್ ನಾಮ ಹರೇಃ 
ಪದಾಶ್ರಯಃ ॥೧೧.೧೮॥

  ಶಾಂತನಾಗು’ ಎಂದು ನಿನಗೆ ನನ್ನಿಂದ ಆದ ಶಾಪ,
ಪ್ರವಾಹ ಕಡಿಮೆಮಾಡಿ 'ಶಂತನು'ವಾದ ನಾಮರೂಪ.
ಮಹಾಭಿಷಕ್ ಹುಟ್ಟಿ ನಂತರ ಹರಿಭಕ್ತನಾದ ಆ ನೆಪ.

ಸ ತತ್ರ ಭುಕ್ತ್ವಾ ಚಿರಕಾಲಮುರ್ವೀಂ ತನುಂ ವಿಹಾಯಾsಪ ಸದೋ ವಿಧಾತುಃ 
ತತ್ರಾಪಿ ತಿಷ್ಠನ್ ಸುರವೃನ್ದಸನ್ನಿಧೌ ದದರ್ಶ ಗಙ್ಗಾಂ ಶ್ಲಥಿತಾಮ್ಬರಾಂ 
ಸ್ವಕಾಮ್ ॥೧೧.೧೯॥
ಮಹಾಭಿಷಕ್ ರಾಜ ಬಹಳಕಾಲ ಭೂಮಿಯ ಆಳಿದ,
ಆನಂತರ ಶರೀರ ಬಿಟ್ಟು ಬ್ರಹ್ಮಲೋಕವನ್ನು ಹೊಂದಿದ.
ಬ್ರಹ್ಮಲೋಕದಲ್ಲಿ ದೇವತೆಗಳ ಸನ್ನಿಧಿಯಲ್ಲಿ ಇರುವಾಗ,
ತನ್ನವಳಾದ ಗಂಗೆಯ ನೋಡಿದ ಅಸ್ತವ್ಯಸ್ತ ಉಡುಪಲ್ಲಿದ್ದಾಗ.

ಅವಾಙ್ಮುಖೇಷು ಧ್ಯುಸದಸ್ಸು ರಾಗಾನ್ನಿರೀಕ್ಷಮಾಣಂ ಪುನರಾತ್ಮಸಮ್ಭವಃ ।
ಉವಾಚ ಭೂಮೌ ನೃಪತಿರ್ಭವಾsಶು ಶಪ್ತೋ ಯಥಾ ತ್ವಂ ಹಿ ಪುರಾ 
ಮಯೈವ ॥೧೧.೨೦॥

ಗಂಗಾದೇವಿಯ ಬಟ್ಟೆ ಅಸ್ತವ್ಯಸ್ತವಾದ ಆ ಕ್ಷಣ,
ದೇವತೆಗಳಿಗಾಗುತ್ತದೆ ತಲೆ ತಗ್ಗಿಸಿ ನಿಲ್ಲಲು ಕಾರಣ.
ಮಹಾಭಿಷಕ್ ರಾಜನದು ಮಾತ್ರ ಗಂಗೆಯತ್ತ ಅತ್ಯಂತ ಬಯಕೆಯ ನೋಟ,
ಹಿಂದಾದಂತೆ ಮತ್ತೆ ನೀ ಭುವಿಯಲ್ಲಿ ರಾಜನಾಗಿ ಹುಟ್ಟು ಎಂದ ಬ್ರಹ್ಮನ ಆಟ.

ಇತೀರಿತಸ್ತತ್ಕ್ಷಣತಃ ಪ್ರತೀಪಾದ್ ಬಭೂವ ನಾಮ್ನಾ ನೃಪತಿಃ ಸ ಶನ್ತನುಃ।
ಅವಾಪ್ಯ ಗಙ್ಗಾಂ ದಯಿತಾಂ ಸ್ವಕೀಯಾಂ ತಯಾ ಮುಮೋದಾಬ್ದಗಣಾನ್ 
ಬಹೂಂಶ್ಚ ॥೧೧.೨೧॥

ಈ ರೀತಿ ಹೇಳಿಸಿಕೊಳ್ಳಲ್ಪಟ್ಟ ಆ ಕ್ಷಣದಲ್ಲೇ ಮಹಾಭಿಷಕ್ ತಾನು,
ಪ್ರತೀಪ ರಾಜನ ಮಗನಾಗಿ ಭುವಿಯಲ್ಲಿ ಹುಟ್ಟಿದ ಆಗಿ ಶಂತನು.
ಅಲ್ಲಿಯೂ ತನ್ನವಳೇ ಆದ ಗಂಗೆಯನ್ನ ಪತ್ನಿಯಾಗಿ ಹೊಂದಿದ,
ಅವಳ ಜೊತೆಯಾಗಿ ಭುವಿಯಲ್ಲಿ ವರ್ಷಗಳ ಕಾಲ ಕ್ರೀಡಿಸಿದ.

No comments:

Post a Comment

ಗೋ-ಕುಲ Go-Kula