Monday, 12 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 39 - 45

ತಾಂ ಪುತ್ರನಿಧನೋದ್ಯುಕ್ತಾಂ ನ್ಯವಾರಯತ್ ಶನ್ತನುಃ ।
ಕಾsಸಿ ತ್ವಂ ಹೇತುನಾ ಕೇನ ಹನ್ಸಿ ಪುತ್ರಾನ್ ನೃಶಂಸವತ್ ॥೧೧.೩೯॥
ರೂಪಂ ಸುರವರಸ್ತ್ರೀಣಾಂ ತವ ತೇನ ನ ಪಾಪಕಮ್  ।
ಭವೇತ್ ಕರ್ಮ್ಮ ತ್ವದೀಯಂ ತನ್ಮಹತ್ ಕಾರಣಮತ್ರ ಹಿ  ॥೧೧.೪೦॥
ತತ್ ಕಾರಣಂ ವದ ಶುಭೇ ಯದಿ ಮಚ್ಛ್ರೋತ್ರಮರ್ಹತಿ ।
ಇತೀರಿತಾsವದತ್ ಸರ್ವಂ ಪ್ರಯಯೌ ಚ ಸುರಾಪಗಾ ॥೧೧.೪೧॥

ಏಳು ಮಕ್ಕಳನ್ನು ಕಳೆದುಕೊಂಡ ಶಂತನುವಿನ ಗತಿ,
ಎಂಟನೇದೂ ಹೋಗುತ್ತದೇನೋ ಎಂಬಂಥ ಸ್ಥಿತಿ.
ಶಂತನುವಿನಿಂದ ಗಂಗೆಯ ತಡೆದು ಕೇಳುವಿಕೆ,
ಯಾರು ನೀನು ಮಕ್ಕಳನ್ನು ಕೊಲ್ಲುತ್ತಿರುವೆ ಏಕೆ.
ಹೊಂದಿದಂತೆ ತೋರುತೀ ನೀ ದೇವತಾ ರೂಪ,
ನೀ ಮಾಡುತಿರುವ ಕರ್ಮದ್ಹಿಂದೆ ಇರಲಾರದು ಪಾಪ.
ನನಗಿದ್ದರೆ ಕೇಳುವ ಯೋಗ್ಯತೆಯ ಹೂರಣ,
ಹೇಳುವೆಯಾ ಎಲ್ಲ ಆದ್ಯಂತವಾದ ಕಾರಣ.
ಗಂಗೆ ಎಲ್ಲವನ್ನೂ ವಿವರಿಸಿ ಹೇಳುತ್ತಾಳೆ,
ನಿಯೋಜಿತವಾದಂತೆ ದೇವಲೋಕಕ್ಕೆ ತೆರಳುತ್ತಾಳೆ.

ನ ಧರ್ಮ್ಮೋ ದೇವತಾನಾಂ ಹಿ ಜ್ಞಾತವಾಸಶ್ಚಿರಂ ನೃಷು ।
ಕಾರಣಾದೇವ ಹಿ ಸುರಾ ನೃಷು ವಾಸಂ ಪ್ರಕುರ್ವತೇ  ॥೧೧.೪೨॥
ಕಾರಣಾಪಗಮೇ ಯಾನ್ತಿ ಧರ್ಮ್ಮೋsಪ್ಯೇಷಾಂ ತಥಾವಿಧಃ ।
ಅದೃಶ್ಯತ್ವಮಸಂಸ್ಪರ್ಶೋ ಹ್ಯಸಮ್ಭಾಷಣಮೇವ ಚ   ॥೧೧.೪೩॥
ಸುರೈರಪಿ ನೃಜಾತೈಸ್ತು ಗುಹ್ಯಧರ್ಮ್ಮೋ ದಿವೌಕಸಾಮ್ ।
ಅತಃ ಸಾ ವರುಣಂ ದೇವಂ ಪೂರ್ವಭರ್ತ್ತಾರಮಪ್ಯಮುಮ್  ॥೧೧.೪೪॥
ನೃಜಾತಂ ಶನ್ತನುಂ ತ್ಯಕ್ತ್ವಾ ಪ್ರಯಯೌ ವರುಣಾಲಯಮ್ ।
ಸುತಮಷ್ಟಮಮಾದಾಯ ಭರ್ತ್ತುರೇವಾಪ್ಯನುಜ್ಞಯಾ ।
ವಧೋದ್ಯೋಗಾನ್ನಿವೃತ್ತಾ ಸಾ ದದೌ ಪುತ್ರಂ ಬೃಹಸ್ಪತೌ  ॥೧೧.೪೫॥

ಗಂಗೆ ತನ್ನ ಪತಿಯ ಬಿಟ್ಟು ತೆರಳಿದ ಕಾರಣ,
ಶ್ರೀಮದಾಚಾರ್ಯರಿಂದ ಇಲ್ಲಿ ವಿವರಣ.
ದೇವತೆಗಳು ಮನುಷ್ಯರಲ್ಲಿ ಪ್ರತ್ಯಕ್ಷವಾಗಿದ್ದಾಗ,
ಅವರಿಗೆ ತಮ್ಮ ಮೂಲ ಸ್ವರೂಪ ತಿಳಿಯಲ್ಪಟ್ಟಾಗ.
ಬಹುಕಾಲ ಅಲ್ಲಿ ದೇವತೆಗಳಿರುವುದು ಧರ್ಮವಲ್ಲ,
ಅವರು ಬಂದ ಕೆಲಸವಾದನಂತರ ತೆರಳಲೇಬೇಕಲ್ಲ.
ಕಾಣದಿರುವುದು, ಮುಟ್ಟದಿರುವುದು, ಮಾತಾಡದಿರುವುದು;
ಇವೆಲ್ಲ ಮನುಷ್ಯರಾಗಿ ಹುಟ್ಟಿದ ದೇವತೆಗಳ ಧರ್ಮವಾಗಿರುವುದು.
ಇದು ದೇವತೆಗಳ ಗುಹ್ಯ ಧರ್ಮದ ವಿಚಾರ,
ಗಂಡನ ಬಿಟ್ಟ ಗಂಗೆ ವರುಣಲೋಕಕ್ಕೆ ಹೊರಟ ತೆರ.
ಹೊರಡುವಾಗ ಪಾಲಿಸುತ್ತಾ ಗಂಡ ಶಂತನುವಿನ ವಚನ,
ಎಂಟನೇಯ ಮಗುವ ಮಾಡುತ್ತಾಳೆ ಬೃಹಸ್ಪತಿ ಅಧೀನ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula