ದೇವಮೀಮಾಂಸಿಕಾದ್ಯನ್ತಂ ಕೃತ್ವಾ ಪೈಲಮಥಾsದಿಶತ್ ।
ಶೇಷಂ ಚ ಮದ್ಧ್ಯಕರಣೇ ಪುರಾಣಾನ್ಯಥ ಚಾಕರೋತ್ ॥೧೦.೮೩॥
ವೇದವ್ಯಾಸರಿಂದ
ದೈವೀಮೀಮಾಂಸದ ಆದಿ -ಅಂತ್ಯ ಭಾಗದ ರಚನೆ,
ಪೈಲಮುನಿಗೆ ಇತ್ತರು ಉಳಿದ ಮಧ್ಯಭಾಗವ ರಚಿಸಲು ಆಜ್ಞೆ.
ತದನಂತರ
ವೇದವ್ಯಾಸರೇ ಮಾಡಿದರು ಪುರಾಣಗಳ ರಚನೆ
ಶೈವಾನ್ ಪಾಶುಪತಾಚ್ಚಕ್ರೇ ಸಂಶಯಾರ್ತ್ಥಂ ಸುರದ್ವಿಷಾಮ್ ।
ವೈಷ್ಣವಾನ್ ಪಞ್ಚರಾತ್ರಾಚ್ಚ ಯಥಾರ್ತ್ಥಜ್ಞಾನಸಿದ್ಧಯೇ ॥೧೦.೮೪॥
ದೈತ್ಯರ ಸಮೂಹಕ್ಕೆ
ಸಂಶಯ ಮತ್ತು ಮೋಹನಾರ್ಥ,
ಪಾಶುಪತಾಗಮ ಆಧರಿಸಿ
ಮಾಡಿದರು ಶೈವಗ್ರಂಥ.
ಅರ್ಹ
ಯಥಾರ್ಥಜ್ಞಾನಕ್ಕಾಗಿ ಪಂಚರಾತ್ರಾಗಮನ,
ಸಂಗ್ರಹಿಸಿ
ಮಾಡಿದರು ವೈಷ್ಣವಪುರಾಣಗಳ ರಚನ.
ಬ್ರಾಹ್ಮಾಂಶ್ಚ ವೇದತಶ್ಚಕ್ರೇ ಪುರಾಣಗ್ರನ್ಥಸಙ್ಗ್ರಹಾನ್ ।
ಏವಂ ಜ್ಞಾನಂ ಪುನಃ ಪ್ರಾಪುರ್ದ್ದೇವಾಶ್ಚ ಋಷಯಸ್ತಥಾ ॥೧೦.೮೫॥
ಸನತ್ಕುಮಾರಪ್ರಮುಖಾ ಯೋಗಿನೋ ಮಾನುಷಾಸ್ತಥಾ ।
ಕೃಷ್ಣ ದ್ವೈಪಾಯನಾತ್ ಪ್ರಾಪ್ಯ ಜ್ಞಾನಂ ತೇ ಮುಮುದುಃ ಸುರಾಃ ॥೧೦.೮೬ ॥
ದುರ್ಜನ ಮೋಹಕ್ಕಾಗಿ
ಬ್ರಹ್ಮನನ್ನೇ ಪ್ರತಿಪಾದಿಸುವ ಪುರಾಣ,
ವೇದದ ಅಪಾತವಾದ
ಅರ್ಥಗಳ ಆಧರಿಸಿ ಗ್ರಂಥ ಸಂಗ್ರಹಣ.
ವ್ಯಾಸಾವತಾರದಿಂದ
ದೇವತೆ ಋಷಿಗಳು ಮೊದಲಾದವರಿಗೆ ಆಯಿತು ಜ್ಞಾನ,
ಸನತ್ಕುಮಾರ ಮೊದಲಾದ
ಯೋಗಿಗಳಿಗೂ ಮನುಷ್ಯರಿಗೂ ಅರಿವಿನ ಪಾನ.
ಸಮಸ್ತವಿಜ್ಞಾನಗಭಸ್ತಿಚಕ್ರಂ ವಿತಾಯವಿಜ್ಞಾನಮಹಾದಿವಾಕರಃ ।
ನಿಪೀಯ ಚಾಜ್ಞಾನತಮೋ ಜಗತ್ತತಂ ಪ್ರಭಾಸತೇ ಭಾನುರಿವಾವಭಾಸಯನ್ ॥೧೦.೮೭॥
ಜ್ಞಾನಮಯ
ಮಹಾಸೂರ್ಯರಾದ ವೇದವ್ಯಾಸ,
ಹರಡಿದರೆಲ್ಲೆಡೆ
ತಮ್ಮ ಜ್ಞಾನಕಿರಣಗಳ ಪ್ರಕಾಶ.
ಅಜ್ಞಾನವೆಂಬ ಕತ್ತಲ
ಕಡಿದು ಕುಡಿದ ಧೀರ,
ಜಗವ ಬೆಳಗಿಸಿ
ಹೊಳೆಸಿದ ಅರಿವಿನ ಸೂರ್ಯ.
ಚತುರ್ಮ್ಮುಖೇಶಾನಸುರೇನ್ದ್ರಪೂರ್ವಕೈಃ ಸದಾ ಸುರೈಃ ಸೇವಿತಪಾದಪಲ್ಲವಃ
।
ಪ್ರಕಾಶಯಂಸ್ತೇಷು ಸದಾತ್ಮಗುಹ್ಯಂ ಮುಮೋದ ಮೇರೌ ಚ ತಥಾ
ಬದರ್ಯ್ಯಾಮ್ ॥೧೦.೮೮ ॥
ಬ್ರಹ್ಮ ರುದ್ರ
ದೇವೇಂದ್ರ ಮುಂತಾದ ದೇವತೆಗಳಿಂದ,
ಸೇವಿತವಾದ
ಚಿಗುರೆಲೆ ಕಮಲದಂಥ ವ್ಯಾಸಪಾದ.
ಪ್ರಕಟಿಸಿದರು
ಸಮೀಚೀನ ಗುಣಾದಿ ರಹಸ್ಯ ಜ್ಞಾನ,
ಮಾಡಿದರು ಮೇರು
ಬದರೀಕ್ಷೇತ್ರದಲ್ಲಿ ಸುಖಯಾನ.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ
ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ವ್ಯಾಸಾವತಾರಾನುವರ್ಣ್ಣನಂ ನಾಮ ದಶಮೋsಧ್ಯಾಯಃ ॥
ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತ ತಾತ್ಪರ್ಯನಿರ್ಣಯ ವಾದ,
ವ್ಯಾಸಾವತಾರ ವರ್ಣನೆ ಎಂಬ ಹತ್ತನೇ ಅಧ್ಯಾಯ,
ಹದಿನೆಂಟರ ಬಂಟಗೆ ಅರ್ಪಿಸಿದ ಧನ್ಯತಾ ಭಾವ.
॥ಶ್ರೀಕೃಷ್ಣಾರ್ಪಣಮಸ್ತು॥
[Contributed by Shri Govind Magal]
No comments:
Post a Comment
ಗೋ-ಕುಲ Go-Kula