Tuesday 13 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 46 - 50

ದೇವವ್ರತೋsಸಾವನುಶಾಸನಾಯ ಮಾತ್ರಾ ದತ್ತೋ ದೇವಗುರೌ ಶತಾರ್ದ್ಧಮ್ ।
ಸಂವತ್ಸರಾಣಾಮಖಿಲಾಂಶ್ಚ ವೇದಾನ್ ಸಮಭ್ಯಸತ್ ತದ್ವಶಗಾನ್ತರಾತ್ಮಾ ॥೧೧.೪೬॥

ತಾಯಿ ಗಂಗೆಯಿಂದ ವಿದ್ಯಾಭ್ಯಾಸಕ್ಕಾಗಿ ಬಿಡಲ್ಪಟ್ಟ ಶಂತನುಪುತ್ರ ದೇವವ್ರತ,
ಬೃಹಸ್ಪತಿ ಬಳಿ ವೇದಾಭ್ಯಾಸವಾಯಿತು ಐವತ್ತು ವರ್ಷಗಳು ಅನವರತ.

ತತಶ್ಚ ಮಾತ್ರಾ ಜಗತಾಂ ಗರೀಯಸ್ಯನನ್ತಪಾರೇsಖಿಲಸದ್ಗುಣಾರ್ಣ್ಣವೇ ।
ರಾಮೇ ಭೃಗೂಣಾಮಧಿಪೇ ಪ್ರದತ್ತಃ ಶುಶ್ರಾವ ತತ್ತ್ವಂ ಚ ಶತಾರ್ದ್ಧವರ್ಷಮ್ ॥೧೧.೪೭॥

ಬೃಹಸ್ಪತಿಯಲ್ಲಿದ್ದು ದೇವವ್ರತ ದೀರ್ಘ ವೇದಾಭ್ಯಾಸ ಮುಗಿಸಿದ ನಂತರ,
ಸೇರಲ್ಪಟ್ಟ ಅಮಿತಜ್ಞಾನಿ ಗುಣಸಾಗರ ಭೃಗುಕುಲದ ಪರಶುರಾಮನ ಹತ್ತಿರ.
ಅಲ್ಲಿಯೂ ಐವತ್ತು ವರ್ಷಕಾಲ ಅಭ್ಯಸಿಸಿದ ಭಗವತ್ ತತ್ವಶಾಸ್ತ್ರ ಸಾರ.

ಸ ಪಞ್ಚವಿಂಶತ್ ಪುನರಬ್ದಕಾನಾಮಸ್ತ್ರಾಣಿ ಚಾಭ್ಯಸ್ಯ ಪತೇರ್ಭೃಗೂಣಾಮ್ ।
ಮಾತ್ರಾ ಸಮಾನೀಯ ತಟೇ ನಿಜೇ ತು ಸಂಸ್ಥಾಪಿತಃ ಪ್ರಾರ್ಪ್ಪಯಿತುಂ ಸ್ವಪಿತ್ರೇ ॥೧೧.೪೮॥

ಮತ್ತವನದು ಭಾರ್ಗವರಾಮನ ಬಳಿ ಇಪ್ಪತ್ತೈದು ವರ್ಷ ವಾಸ,
ಆಗ ಕಲಿತ ಪರಶುರಾಮರಿಂದ ವಿಶೇಷ ಅಸ್ತ್ರಗಳ ಬಳಕೆ ಅಭ್ಯಾಸ.
ಬಳಿಕ ಅವನು ತಾಯಿ ಗಂಗೆಯಿಂದ ತಲುಪಿಸಲ್ಪಟ್ಟ  ಗಂಗಾತೀರ,
ಅವನನ್ನು ಮತ್ತೆ ತಂದೆ ಶಂತನುವಿಗೆ ಒಪ್ಪಿಸುವ ದೈವೀವ್ಯಾಪಾರ.

ಸ ತತ್ರ ಬಧ್ವಾ ಶರಪಞ್ಜರೇಣ ಗಙ್ಗಾಂ ವಿಜಹ್ರೇsಸ್ಯ ಪಿತಾ ತದೈವ ।
ವ್ರಜನ್ ಮೃಗಾರ್ತ್ಥೀ ತೃಷಿತೋ ವಿಲೋಕಯನ್ ಗಙ್ಗಾಮತೋಯಾಮಭವತ್ ಸುವಿಸ್ಮಿತಃ ॥೧೧.೪೯॥

ದೇವವ್ರತ ಬಾಣಪಂಜರದಿಂದ ಗಂಗಾಪ್ರವಾಹ ಬಂಧಿಸಿ ಆಟವಾಡಿದ,
ಬೇಟೆಗೆ ಬಂದ ಶಂತನು ಗಂಗೆ ಬತ್ತಿರುವುದ ಕಂಡು ಆಶ್ಚರ್ಯಚಕಿತನಾದ.

ಸ ಮಾರ್ಗ್ಗಯಾಮಾಸ ತತೋsಸ್ಯ ಹೇತುಜ್ಞಪ್ತ್ಯೈ ತದಾ ಸ್ವಂ ಚ ದದರ್ಶ ಸೂನುಮ್
ಕ್ರೀಡನ್ತಮಸ್ತ್ರೇಣ ಬಭೂವ ಸೋsಪಿ ಕ್ಷಣಾದದೃಶ್ಯಃ ಪಿತೃದರ್ಶನಾದನು ॥೧೧.೫೦॥

ನದಿಯಲ್ಲಿ ನೀರಿಲ್ಲದ ಕಾರಣ ಹುಡುಕುತ್ತಿದ್ದ ಶಂತನು,
ಅಸ್ತ್ರದೊಂದಿಗೆ ಆಟವಾಡುತ್ತಿದ್ದ ತನ್ನ ಮಗನ ಕಂಡನು.
ತಂದೆ ಕಂಡೊಡನೆ ದೇವವ್ರತ ಕ್ಷಣಕಾಲ ಅದೃಶ್ಯ ಆದನು.

No comments:

Post a Comment

ಗೋ-ಕುಲ Go-Kula