Sunday, 11 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 34 - 38

ಉವಾಚ ಸ ತಂ ನತು ಮಾಂ ಸುತಸ್ತೇ ಕಾsಸೀತಿ ಪೃಚ್ಛೇನ್ನತು ಮಾಂ ನಿವಾರಯೇತ್  ।
ಅಯೋಗ್ಯಕರ್ತ್ತ್ರೀಮಪಿ ಕಾರಣಂ ಚ ಮತ್ಕರ್ಮ್ಮಣೋ ನೈವ ಪೃಚ್ಛೇತ್ 
ಕದಾಚಿತ್  ॥೧೧.೩೪ ॥
ಯದಾ ತ್ರಯಾಣಾಮಪಿ ಚೈಕಮೇಷ ಕರೋತಿ ಗಚ್ಛೇಯಮಹಂ ವಿಸೃಜ್ಯ ।
ತದಾ ತ್ವದೀಯಂ ಸುತಮಿತ್ಯುದೀರಿತೇ ತಥೇತಿ ರಾಜಾsಪ್ಯವದತ್ ಪ್ರತೀಪಃ ॥೧೧.೩೫॥

ಪ್ರತೀಪನಿಂದ ನನ್ನ ಮಗನಿಗೆ ಹೆಂಡತಿಯಾಗು ಎಂದು ಹೇಳಿಸಿಕೊಂಡ ಗಂಗೆ,
ಆತನಲ್ಲಿ ತನ್ನ ಕೆಲವು ಷರತ್ತುಗಳನ್ನು ವರಗಳನ್ನಾಗಿ ಕೇಳಿಕೊಂಡ ಬಗೆ.
ನಿನ್ನ ಮಗ ನನ್ನನ್ಯಾರೆಂದು ಕೇಳಬಾರದು,
ನಾನೇನೇ ಅಯುಕ್ತವೆಸಗಿದರೂ ತಡೆಯಬಾರದು.
ನನ್ನ ಕೆಲಸದ ಕಾರಣವನ್ನೂ ಕೂಡ ಕೇಳಬಾರದು,
ಇದರಲ್ಲಿ ಒಂದು ಮುರಿದರೂ ನಾನವನ ಬಿಡುವುದು.
ಪ್ರತೀಪ ತನ್ನೊಪ್ಪಿಗೆ ಕೊಡುತ್ತಾನೆ ಹಾಗೇ ಆಗಲೆಂದು.

ತಥೈವ ಪುತ್ರಾಯ ಚ ತೇನ ತದ್ ವಚೋ ವಧೂಕ್ತಮುಕ್ತಂ ವಚನಾದ್ ದ್ಯುನದ್ಯಾಃ  ।
ಕನೀಯಸೇ ಸಾ ಹ್ಯವದತ್ ಸುತಸ್ತೇ ನಾನ್ಯಃ ಪತಿಃ ಶನ್ತನುರೇವ ಮೇ ವೃತಃ  ॥೧೧.೩೬॥

ಇವೆಲ್ಲಾ ಮಾತುಗಳು ವಧುವಿನಿಂದ ಹೇಳಲ್ಪಟ್ಟಿದ್ದೆಂದು,
ಮೂರನೇ ಮಗನಾದ ಶಂತನುವಿಗೆ ತಿಳಿ  ಹೇಳಬೇಕೆಂದು,
ತಪ್ಪದೇ ಕಿರಿಮಗನಾದ ಶಂತನುವಿಗೇ ಇದ ಹೇಳಬೇಕೆಂದು,
ಗಂಗೆ ತಾನು ಪ್ರತೀಪರಾಜಗೆ ವಿವರಿಸಿ ಹೇಳಿದ ಮಾತುಗಳಂದು.

ತತಸ್ತು ಸಾ ಶನ್ತನುತೋsಷ್ಟ ಪುತ್ರಾನವಾಪ್ಯ ಸಪ್ತ ನ್ಯಹನತ್ ತಥಾsಷ್ಟಮಮ್  ।
ಗನ್ತುಂ ತತೋ ಮತಿಮಾಧಾಯ ಹನ್ತುಮಿವೋದ್ಯೋಗಂ ಸಾ ಹಿ ಮೃಷಾ 
ಚಕಾರ  ॥೧೧.೩೭ ॥

ನಂತರ ಅವಳು ಶಂತನುವನ್ನು ಮದುವೆಯಾದದ್ದು,
ಎಂಟು ಮಕ್ಕಳ ಹೊಂದಿ ಏಳು ಮಕ್ಕಳ ಕೊಂದದ್ದು.
ಎಂಟನೇಯದನ್ನ ಕೊಲ್ಲುವ ಸಿದ್ಧತೆಯ ತೋರಿದ್ದು.

ಅವಸ್ಥಿತಿರ್ನ್ನಾತಿಸುಖಾಯ ಮಾನುಷೇ ಯತಃ ಸುರಾಣಾಮತ ಏವ ಗನ್ತುಮ್  ।
ಐಚ್ಛನ್ನ ತಸ್ಯಾ ಹಿ ಬಭೂವ ಮಾನುಷೋ ದೇಹೋ ನರೋತ್ಥೋ ಹಿ ತದಾssಸ 
ಶನ್ತನೋಃ॥೧೧.೩೮॥

ಗಂಗೆ ಮಾಡಿದಳು ಶಂತನುವಿನೊಂದಿಗೆ ಇರದೇ ದೇವಲೋಕಕ್ಕೆ ಹಿಂತಿರುಗುವ ಸಿದ್ಧತೆ,
ಕಾರಣವದು ಮನುಷ್ಯದೇಹ ಸಂಪರ್ಕದಲ್ಲಿ ದೀರ್ಘ ಕಾಲ ಸುಖದಲ್ಲಿರಲಾಗದ ದೇವತೆ.
ಗಂಗೆಯದಲ್ಲ ಮಾನುಷ ದೇಹ,
ಶಂತನುವಿನದು ಮಾನವ ಕಾಯ.
ಶಂತನುವಿಗಿರಲಿಲ್ಲ ಯಾವ ಪೂರ್ವಜನ್ಮದ ಸ್ಮರಣೆ,
ಗಂಗೆಗಿತ್ತು ಎಲ್ಲ ಜ್ಞಾನ ಮತ್ತು ಪೂರ್ವಜನ್ಮ ಸ್ಮರಣೆ.
ಹೀಗಾಗಿ ಶಂತನುವಿನೊಂದಿಗೆ ಬದುಕಾಯಿತು ಕಷ್ಟ,
ಹಾಗೆಯೇ ಅವಳಿಗೆ ಆಯಿತು ದೇವಲೋಕವು ಇಷ್ಟ.
 [Contributed by Shri Govind Magal]

No comments:

Post a Comment

ಗೋ-ಕುಲ Go-Kula