ಮೀಮಾಂಸಮಾನಂ ತಮವಾಪ ಗಙ್ಗಾ ಸುತಂ ಸಮಾದಾಯ ಪತಿಂ ಜಗಾದ ಚ ।
ಅಯಂ ಸುತಸ್ತೇ ಪರಮಾಸ್ತ್ರವೇತ್ತಾ ಸಮರ್ಪ್ಪಿತೋ ವೀರ್ಯ್ಯಬಲೋಪಪನ್ನಃ
॥೧೧.೫೧॥
‘ಇವನು
ಯಾರಿರಬಹುದು’ ಎಂದು ಶಂತನು ಮಾಡುತ್ತಿರಲು ವಿಚಾರ,
ಗಂಗೆ ಮಗನನ್ನು
ಕರೆದುಕೊಂಡು ಬರುತ್ತಾಳೆ ಶಂತನುವಿನ ಹತ್ತಿರ.
ಅಸ್ತ್ರವೇತ್ತನಾದ
ನಿನ್ನ ಸುತನೀತ;ವೀರ್ಯ ಬಲದಿಂದ ಕೂಡಿರುವಾತ,
ಒಪ್ಪಿಸಿಕೋ
ಮಹಾರಾಜ-ನಿನಗೆ ಆಗುತ್ತಿದ್ದಾನೆ ಈಗ ಸಮರ್ಪಿತ.
ಅಸ್ಯಾಗ್ರಜಾಃ ಸ್ವಾಂ ಸ್ಥಿತಿಮೇವ ಯಾತಾ ಹರೇಃ ಪದಾಮ್ಭೋಜಸುಪಾವಿತೇ
ಜಲೇ ।
ತನೂರ್ಮ್ಮದೀಯೇ ಪ್ರಣಿಧಾಯ ತತ್ ತ್ವಂ ತಾನ್ ಮಾ ಶುಚೋsನೇನ ಚ ಮೋದಮಾನಃ ॥೧೧.೫೨॥
ಇತಿ ಪ್ರದಾಯಾಮುಮದೃಶ್ಯತಾಮಗಾದ್ ಗಙ್ಗಾ ತಮಾದಾಯ ಯಯೌ ಸ್ವಕಂ ಗೃಹಮ್ ।
ರಾಜಾsಭಿಷಿಚ್ಯಾಥ
ಚ ಯೌವರಾಜ್ಯೇ ಮುಮೋದ ತತ್ಸದ್ಗುಣತರ್ಪ್ಪಿತೋ ಭೃಶಮ್ ॥೧೧.೫೩॥
ಈ ದೇವವ್ರತನ
ಅಣ್ಣಂದಿರುಗಳೆಲ್ಲಾ,
ಹರಿಪಾದತೊಳೆದ
ನನ್ನಲ್ಲಿ ಶರೀರ ಬಿಟ್ಟವರೆಲ್ಲ.
ಅವರೆಲ್ಲ
ಹೊಂದಿದ್ದಾರಾಗಲೇ ತಮ್ಮ ಮೂಲರೂಪ,
ಇವನೊಂದಿಗೆ
ಸುಖಿಸು-ಅವರ ಬಗ್ಗೆ ಬೇಡ ಸಂತಾಪ.
ಹೀಗೆ
ದೇವವ್ರತನನ್ನು ಶಂತನುವಿಗೊಪ್ಪಿಸಿ ಅದೃಶ್ಯಳಾಗುತ್ತಾಳೆ ಗಂಗೆ,
ಶಂತನು
ದೇವವ್ರತನನ್ನು ಯುವರಾಜನನ್ನಾಗಿಸಿ ಬೀರುತ್ತಾನೆ ಸಂತುಷ್ಟ ನಗೆ.
ಪುನಃ ಸ ಪಿತ್ರಾsನುಮತೋ ಬೃಹಸ್ಪತೇರವಾಪ ವೇದಾನ್ ಪುರುಷಾಯುಷೋsರ್ದ್ಧತಃ ।
ರಾಮಾತ್ ತಥಾsಸ್ತ್ರಾಣಿ ಪುನಸ್ತ್ವವಾಪ ತಾವದ್ಭಿರಬ್ದೈಸ್ತ್ರಿಶತೈಶ್ಚ ತತ್ತ್ವಮ್
॥೧೧.೫೪॥
ಮತ್ತೆ ದೇವವ್ರತ
ತಂದೆಯಿಂದ ಪಡೆದುಕೊಂಡು ಅನುಮತಿ,
ಪಡೆದ
ಬೃಹಸ್ಪತ್ಯಾಚಾರ್ಯರಿಂದ ಐವತ್ತು ವರ್ಷ ವೇದ ಪರಿಣಿತಿ.
ಮತ್ತೆ ಐವತ್ತು
ವರ್ಷ ಪರಶುರಾಮನಲ್ಲಿ ಅಸ್ತ್ರವಿದ್ಯೆ,
ಪಡೆದುಕೊಂಡ
ಮುನ್ನೂರು ವರ್ಷತನಕ ತತ್ತ್ವ ವಿದ್ಯೆ.
ಸ ಸರ್ವವಿತ್ತ್ವಂ ಸಮವಾಪ್ಯ ರಾಮಾತ್
ಸಮಸ್ತವಿದ್ಯಾಧಿಪತೇರ್ಗ್ಗುಣಾರ್ಣ್ಣವಾತ್ ।
ಪಿತುಃ ಸಮೀಪಂ ಸಮವಾಪ್ಯ ತಂ ಚ ಶುಶ್ರೂಷಮಾಣಃ ಪ್ರಮುಮೋದ ವೀರಃ
॥೧೧.೫೫॥
ಹೀಗೆ ಯುವರಾಜ
ದೇವವ್ರತ ಎಲ್ಲಾ ವಿದ್ಯೆಗಳ ಒಡೆಯನಾದ,
ಗುಣಸಾಗರ ಪರಶುರಾಮನಿಂದ
ಸರ್ವಜ್ಞತೆ ಹೊಂದಿದ.
ತಂದೆಯ ಬಳಿಯಿದ್ದು ಸೇವೆಮಾಡುತ್ತಾ ತಾನೂ ಸಂತಸದಿಂದಿದ್ದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula