Thursday, 15 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 56 - 63

ಯದೈವ ಗಙ್ಗಾ ಸುಷುವೇsಷ್ಟಮಂ ಸುತಂ ತದೈವ ಯಾತೋ ಮೃಗಯಾಂ ಸ ಶನ್ತನುಃ ।
ಶರದ್ವತೋ ಜಾತಮಪಶ್ಯದುತ್ತಮಂ ವನೇ ವಿಸೃಷ್ಟಂ ಮಿಥುನಂ 
ತ್ವಯೋನಿಜಮ್ ॥೧೧.೫೬॥

ಗಂಗೆಯು ಎಂಟನೆಯ ಮಗನನ್ನು ಹೆತ್ತಾಗಲೆ,
ಶಂತನು ಬೇಟೆಗೆಂದು ಕಾಡಿಗೆ ಹೋಗಿದ್ದಾಗಲೇ.
ಶರದ್ವಾನ್ ಋಷಿಯಿಂದ ಹುಟ್ಟಿದ ಅಯೋನಿಜ ಮಕ್ಕಳ ಜೋಡಿ,
ಪರಿತ್ಯಕ್ತ ಗಂಡುಹೆಣ್ಣು ಮಕ್ಕಳ ಶಂತನು ನೋಡಿದ್ದು ದೈವೀ ಮೋಡಿ.

ಶರದ್ವಾಂಸ್ತು ತಪಃ ಕುರ್ವನ್ ದದರ್ಶ ಸಹಸೋರ್ವಶೀಮ್ ।
ಚಸ್ಕನ್ದ ರೇತಸ್ತಸ್ಯಾಥ ಶರಸ್ತಮ್ಭೇ ತತೋSಭವತ್ ॥೧೧.೫೭॥
ವಿಷ್ಕಮ್ಭೋ ನಾಮ ರುದ್ರಾಣಾಂ ಭೂಭಾರಹರಣೇsಙ್ಗತಾಮ್ ।
ಹರೇಃ ಪ್ರಾಪ್ತುಂ ತಥಾ ತಾರಾ ಭಾರ್ಯ್ಯಾ ಯಾ ಹಿ ಬೃಹಸ್ಪತೇಃ ॥೧೧.೫೮॥

ಶರದ್ವಾನ್ ಋಷಿ ತಪೋನಿರತನಾಗಿದ್ದಾಗ,
ಆಕಸ್ಮಿಕವಾಗಿ ಊರ್ವಶಿಯ ಕಾಣುತ್ತಾನಾಗ.
ಆಗವನ ರೇತಸ್ಸು ಹುಲ್ಲಿನ ಮೆದೆಗೆ ಜಾರಿಬಿದ್ದ ಕಾರಣ,
ಹಾಗಾಯಿತು ರುದ್ರರಲ್ಲೊಬ್ಬನಾದ ವಿಷ್ಕಂಭನ ಜನನ.
ಅವ ಸೇವಕನಾಗಿ ಸಹಕರಿಸಿದ ಹರಿಯಜ್ಞವದು ಭೂಭಾರಹರಣ,
ಬೃಹಸ್ಪತಿಪತ್ನಿ ತಾರೆಯೂ ಒಟ್ಟಿಗೇ ಹುಟ್ಟಿ ಬಂದ ಕಾರ್ಯಕಾರಣ.

ತಾವುಭೌ ಶನ್ತನುರ್ದ್ದೃಷ್ಟ್ವಾ ಕೃಪಾವಿಷ್ಟಃ ಸ್ವಕಂ ಗೃಹಮ್ ।
ನಿನಾಯ ನಾಮ ಚಕ್ರೇ ಚ ಕೃಪಾಯಾ ವಿಷಯೌ ಯತಃ ॥೧೧.೫೯॥
ಕೃಪಃ ಕೃಪೀತಿ ಸ ಕೃಪಸ್ತಪೋ ವಿಷ್ಣೋಶ್ಚಕಾರ ಹ ।
ತಸ್ಯ ಪ್ರೀತಸ್ತದಾ ವಿಷ್ಣುಃ ಸರ್ವಲೋಕೇಶ್ವರೇಶ್ವರಃ ॥೧೧.೬೦॥

ಶಂತನು ಆ ಇಬ್ಬರು ಮಕ್ಕಳನ್ನು ನೋಡಿ ಆಗುತ್ತಾನೆ ಕೃಪಾವಿಷ್ಟ,
ಕೃಪ ಕೃಪಿ ಎಂದು ಹೆಸರಿಟ್ಟು ತನ್ನ ಅರಮನೆಯಲ್ಲೇ ತಂದು ಇಟ್ಟ.
ಕೃಪನಿಂದ ಮುಂದೆ ವಿಷ್ಣುಸಂಬಂಧಿಯಾದ ತಪಸ್ಸು ಆಚರಣೆ,
ಸಮಸ್ತ ಲೋಕದೊಡೆಯ ವಿಷ್ಣು ಅವನಿಗೆ ಪ್ರೀತನಾಗುತ್ತಾನೆ.




ಪ್ರಾದಾದೇಷ್ಯತ್ಸಪ್ತರ್ಷಿತ್ವಮಾಯುಃ ಕಲ್ಪಾನ್ತಮೇವ ಚ ।
ಸ ಶನ್ತನುಗೃಹೇ ತಿಷ್ಠನ್ ದೇವವ್ರತಸಖಾsಭವತ್ ॥೧೧.೬೧॥

ಕೃಪಗೆ ಪ್ರಸನ್ನನಾದ ವಿಷ್ಣು ಅವ ಪರಮ ಕರುಣಾಸಾಗರ,
ಕೊಟ್ಟವನಿಗೆ ಮುಂಬರುವ ಸಪ್ತರ್ಷಿಗಳಲ್ಲಿ ಒಂದಾಗುವ ವರ.
ಕರುಣಿಸಿದನವಗೆ ಕಲ್ಪಾಂತ್ಯದವರೆಗೂ ಆಯುಷ್ಯ ಪ್ರದಾನ,
ಕೃಪ ಶಂತನು ಮನೆಯಲಿದ್ದು ಗಳಿಸಿದ ದೇವವ್ರತನ ಗೆಳೆತನ.

ಪುತ್ರವಚ್ಛನ್ತನೋಶ್ಚಾsಸೀತ್ ಸ ಚ ಪುತ್ರವದೇವ ತತ್ ।
ಮಿಥುನಂ ಪಾಲಯಾಮಾಸ ಸ ಕೃಪೋsಸ್ತ್ರಾಣ್ಯವಾಪ ಚ ॥೧೧.೬೨॥
ಸರ್ವವೇದಾನಧಿಜಗೌ ಸರ್ವಶಾಸ್ತ್ರಾಣಿ ಕೌಶಿಕಾತ್ ।
ತತ್ವಜ್ಞಾನಂ ತಥಾ ವ್ಯಾಸಾದಾಪ್ಯ ಸರ್ವಜ್ಞತಾಂ ಗತಃ ॥೧೧.೬೩॥

ಕೃಪ ಶಂತನುರಾಜಗೆ ಮಗನಂತೆಯೇ ಆಗಿ ಹೋದ,
ಶಂತನು ಎರಡೂ ಮಕ್ಕಳನ್ನು ತನ್ನವೆಂದೇ ಪಾಲಿಸಿದ.
ಆ ಕೃಪ ಪಡೆದುಕೊಂಡ ಕೌಶಿಕನಿಂದ ಅಸ್ತ್ರಜ್ಞಾನ,
ಹಾಗೇ ಆಯಿತು ಸರ್ವ ವೇದ ಶಾಸ್ತ್ರಗಳ ಅಧ್ಯಯನ.
ವೇದವ್ಯಾಸರಿಂದ ತತ್ವಜ್ಞಾನ ಹೊಂದಿ ಆದ ಸರ್ವಜ್ಞ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula