Monday 5 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 74 - 82

ಶೇಷೋsಥ ಪೈಲಂ ಮುನಿಮಾವಿಶತ್ ತದಾ ವೀಶಃ ಸುಮನ್ತುಮಪಿ ವಾರುಣಿಂ ಮುನಿಮ್ ।
ಬ್ರಹ್ಮಾsವಿಶತ್ ತಮುತ ವೈಶಮ್ಪಾಯನಂ ಶಕ್ರಶ್ಚ ಜೈಮಿನಿಮಥಾsವಿಶದ್ ವಿಭುಃ  ॥೧೦.೭೪॥

ಕೃಷ್ಣಸ್ಯ ಪಾದಪರಿಸೇವನೋತ್ಸುಕಾಃ ಸುರೇಶ್ವರಾ ವಿವಿಶುರಾಶು ತಾನ್ ಮುನೀನ್ ।
ಸಮಸ್ತವಿದ್ಯಾಃ ಪ್ರತಿಪಾದ್ಯ ತೇಷ್ವಸೌ ಪ್ರವರ್ತ್ತಕಾಂಸ್ತಾನ್ ವಿದಧೇ ಹರಿಃ ಪುನಃ  ॥೧೦.೭೫॥

ವೇದವ್ಯಾಸರಿಂದ ಪಡೆಯಲೆಂದು ಜ್ಞಾನೋಪದೇಶ,
ಶೇಷದೇವ ಮಾಡಿದ ಪೈಲ ಮುನಿಯಲ್ಲಿ ಪ್ರವೇಶ.
ಗರುಡ -ವರುಣಪುತ್ರ ಸುಮಂತುವಿನಲ್ಲಿ,
ಬ್ರಹ್ಮ ಒಂದು ರೂಪದಿಂದ ವೈಶಂಪಾಯನರಲ್ಲಿ,
ಇಂದ್ರದೇವ ತಾನು  ಜೈಮಿನಿ ಮುನಿಯಲ್ಲಿ,
ಪ್ರವೇಶಿಸಿ ನಿಂತರು ಜ್ಞಾನಕ್ಕಾಗಿ ವ್ಯಾಸಪೂಜೆಯಲ್ಲಿ.
ಹೀಗೆ ದೇವೋತ್ತಮರಿಂದ ವ್ಯಾಸಪಾದಸೇವೆ ಜ್ಞಾನಾರ್ಜನೆಯ ಉದ್ದೇಶ,
ಅವರಿಗೆಲ್ಲಾ ವಿದ್ಯೆಯಿತ್ತು ಜ್ಞಾನಪ್ರವರ್ತಕರನ್ನಾಗಿ ಮಾಡಿದರು ವೇದವ್ಯಾಸ.

ಋಚಾಂ ಪ್ರವರ್ತ್ತಕಂ ಪೈಲಂ ಯಜುಷಾಂ ಚ ಪ್ರವರ್ತ್ತಕಮ್ ।
ವೈಶಮ್ಪಾಯನಮೇವೈಕಂ ದ್ವಿತೀಯಂ ಸೂರ್ಯ್ಯಮೇವ ಚ  ॥೧೦.೭೬॥

ವೇದವ್ಯಾಸರು ಆಗ ಮಾಡಿದರು ಹೀಗೆ ನೇಮಕ,
ಪೈಲಮುನಿಯನ್ನು ಋಗ್ವೇದಕ್ಕೆ ಪ್ರವರ್ತಕ,
ವೈಶಂಪಾಯನ ಕೃಷ್ಣಯಜುರ್ವೇದಕ್ಕೆ ಪ್ರವರ್ತಕ,
ಶುಕ್ಲಯಜುರ್ವೇದ ಕೊಟ್ಟರು ಸೂರ್ಯನ ಮೂಲಕ.

ಚಕ್ರೇsಥ ಜೈಮಿನಿಂ ಸಾಮ್ನಾಮಥರ್ವಾಙ್ಗಿರಸಾಮಪಿ ।
ಸುಮನ್ತುಂ ಭಾರತಸ್ಯಾಪಿ ವೈಶಮ್ಪಾಯನಮಾದಿಶತ್  ॥೧೦.೭೭॥

ಪ್ರವರ್ತ್ತನೇ ಮಾನುಷೇಷು ಗನ್ಧರ್ವಾದಿಷು ಚಾsತ್ಮಜಮ್ ।
ನಾರದಂ ಪಾಠಯಿತ್ವಾ ಚ ದೇವಲೋಕಪ್ರವೃತ್ತಯೇ   ॥೧೦.೭೮ ॥

ಜೈಮುನಿ ಋಷಿಗಳಿಗೆ ಸಾಮವೇದ,
ಸುಮಂತು ಋಷಿಗಳಿಗೆ ಅಥರ್ವವೇದ.
ಮಾನುಷಲೋಕದಲ್ಲಿ ಭಾರತಪ್ರಸಾರಕ್ಕೆ ವೈಶಂಪಾಯನ,
ಶುಕಾಚಾರ್ಯರಿಗೆ ಗಂಧರ್ವರಲ್ಲಿ ಹರಡಲು ಭಾರತಜ್ಞಾನ.
ನಾರದರಿಗೆ ದೇವಲೋಕದಲ್ಲಿ ಮಹಾಭಾರತದ ಪ್ರಸಾರಗಾನ.
ಮೇಲಿನಂತೆ ವೇದವ್ಯಾಸರಿಂದ ಜ್ಞಾನಪ್ರಸಾರಕ್ಕೆ ನಿಯಮನ.

ಆದಿಶತ್ ಸಸೃಜೋ ಸೋsಥ ರೋಮಾಞ್ಚಾದ್ ರೋಮಹರ್ಷಣಮ್ ।
ತಂ ಭಾರತಪುರಾಣಾನಾಂ ಮಾಹಾರಾಮಾಯಣಸ್ಯ ಚ  ॥೧೦.೭೯ ॥

ಪಞ್ಚರಾತ್ರಸ್ಯ ಕೃತ್ಸ್ನಸ್ಯ ಪ್ರವೃತ್ತ್ಯರ್ತ್ಥಮಥಾsದಿಶತ್ ।
ತಮಾವಿಶತ್ ಕಾಮದೇವಃ ಕೃಷ್ಣಸೇವಾಸಮುತ್ಸುಕಃ  ॥೧೦.೮೦॥

ಸ ತಸ್ಮೈ ಜ್ಞಾನಮಖಿಲಂ ದದೌ ದ್ವೈಪಾಯನಃ ಪ್ರಭುಃ ।
ಸನತ್ಕುಮಾರಪ್ರಮುಖಾಂಶ್ಚಕ್ರೇ ಯೋಗಪ್ರವರ್ತ್ತಕಾನ್  ॥೧೦.೮೧॥

ವ್ಯಾಸರ ರೋಮಾಂಚನದಿಂದ ರೋಮಕೂಪದಲ್ಲಿ ಸೃಷ್ಟಿಯಾದರು ರೋಮಹರ್ಷಣ,
ಅವರಿಗಿತ್ತರು ಭಾರತ ಪುರಾಣ ರಾಮಾಯಣ ಪಂಚರಾತ್ರಗಳ ಪ್ರಸಾರದ  ನಿರ್ವಹಣ.
ವೇದವ್ಯಾಸರ ಸೇವೆಗಾಗಿ ಮನ್ಮಥ ಮಾಡಿದ ರೋಮಹರ್ಷಣರಲ್ಲಿ ಪ್ರವೇಶ,
ದ್ವೈಪಾಯನರಿಂದ ಕಾಮಸಂಪರ್ಕದ ರೋಮಹರ್ಷಣರಿಗೆ ಜ್ಞಾನೋಪದೇಶ.
ಸನತ್ಕುಮಾರ ಮುಂತಾದವರನ್ನು ಯೋಗಪ್ರವರ್ತಕರಾಗಿಸಿದರು ವೇದವ್ಯಾಸ.

ಭೃಗ್ವಾದೀನ್ ಕರ್ಮ್ಮಯೋಗಸ್ಯ ಜ್ಞಾನಂ ದತ್ವಾsಮಲಂ ಶುಭಮ್ ।
ಜೈಮಿನಿಂ ಕರ್ಮ್ಮಮೀಮಾಂಸಾಕರ್ತ್ತಾರಮಕರೋತ್ ಪ್ರಭುಃ  ॥೧೦.೮೨ ॥

ಭೃಗು ಮೊದಲಾದವರಿಗೆ ಕರ್ಮಯೋಗದ ಜ್ಞಾನ ಕೊಟ್ಟ ವೇದವ್ಯಾಸ,
ಆ ಕರ್ಮಯೋಗವನ್ನು ಪ್ರವರ್ತನೆ ಮಾಡುವಂತೆ ಇತ್ತರು ಆದೇಶ.
ವೇದವ್ಯಾಸರ ಆಜ್ಞೆಯಂತೆ ಜೈಮಿನಿ ರಚಿಸಿದರು ಕರ್ಮಮೀಮಾಂಸ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula