Thursday, 8 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:11 - 15

ಪ್ರತೀಪಪುತ್ರತಾಮಾಪ್ಯ[1]ಬಾಹೀಕೇಷ್ವಭವತ್ ಪತಿಃ ।
ರುದ್ರೇಷು ಪತ್ರತಾಪಾಖ್ಯಃ ಸೋಮದತ್ತೋsಸ್ಯ ಚಾsತ್ಮಜಃ      ॥೧೧.೧೦॥

ಪ್ರತೀಪನ ಮಗನಾಗಿ ಹುಟ್ಟಿ ಬಂದನವ ಪ್ರಹ್ಲಾದ,
ಪುತ್ರಿಕಾಪುತ್ರತ್ವನಿಯಮದಂತೆ ಬಾಹ್ಲೀಕ ರಾಜನಾದ.
ಬಾಹ್ಲೀಕಪುತ್ರ ಸೋಮದತ್ತ ಮೂಲತಃ ಏಕಾದಶರುದ್ರರಲ್ಲಿ ಒಬ್ಬ,
ಅವನೇ ಪತ್ರತಾಪ ; ಇತ್ಯಾದಿ ಹೆಸರುಗಳುಂಟು ಮೃಗವ್ಯಾಧ ವಾಮದೇವನೆಂಬ.

ಅಜೈಕಪಾದಹಿರ್ಬುಧ್ನಿರ್ವಿರೂಪಾಕ್ಷ ಇತಿ ತ್ರಯಃ ।
ರುದ್ರಾಣಾಂ ಸೋಮದತ್ತಸ್ಯ ಬಭೂವುಃ ಪ್ರಥಿತಾ ಸುತಾಃ ॥೧೧.೧೧॥
ವಿಷ್ಣೋರೇವಾಙ್ಗದಾಮಾಪ್ತುಂ ಭೂರಿರ್ಭೂರಿಶ್ರವಾಃ ಶಲಃ ।
ಶಿವಾದಿಸರ್ವರುದ್ರಾಣಾಮಾವೇಶಾದ್ ವರತಸ್ತಥಾ         ॥ ೧೧.೧೨ ॥
ಭೂರಿಶ್ರವಾ ಅತಿಬಲಸ್ತತ್ರಾsಸೀತ್ ಪರಮಾಸ್ತ್ರವಿತ್ ।
ತದರ್ಥಂ ಹಿ ತಪಶ್ಚೀರ್ಣ್ಣಂ ಸೋಮದತ್ತೇನ ಶಮ್ಭವೇ   ॥೧೧.೧೩॥

ಏಕಾದಶ ರುದ್ರರಲ್ಲಿ ಮೂವರಾದ ಅಜೈಕಪಾತ್ ಅಹಿರ್ಬುದ್ನಿ ವಿರೂಪಾಕ್ಷ,
ಸೋಮದತ್ತನ ಮಕ್ಕಳಾಗಿ ಹುಟ್ಟಿ ಅತ್ಯಂತ ಪ್ರಖ್ಯಾತಿ ಹೊಂದಿದ ವಂಶ ವೃಕ್ಷ.
ಭಗವತ್ ಸೇವೆಗಾಗಿ ಭೂರಿ ಭೂರಿಶ್ರವಸ್ಸು ಮತ್ತು ಶಲ ನಾಮಕರಾಗಿ ಅವತಾರ,
ಈ ಮೂವರಲ್ಲಿ ಭೂರಿಶ್ರವಸ್ಸಿನ ಘನತೆ ಕೀರ್ತಿ ಶ್ರೇಷ್ಠತೆಗಳಾಗಿದ್ದವು ಅಪಾರ.
ಭೂರಿಶ್ರವಸ್ಸಿಗಿತ್ತು ಶಿವ ಸೇರಿದಂತೆ ಸಮಸ್ತ ರುದ್ರರ ಆವೇಶ,
ಸಾಮರ್ಥ್ಯದ ಉತ್ಕೃಷ್ಟವಾದ ಅಸ್ತ್ರವಿದ್ಯೆಯಾಗಿತ್ತು ಅವನ ವಶ.
ಅಂಥ ಮಗನಿಗಾಗಿ ಸೋಮದತ್ತನದಾಗಿತ್ತು ತಪಸ್ಸು ವಿಶೇಷ.

ದತ್ತೋ ವರಶ್ಚ ತೇನಾಸ್ಯ ತ್ವತ್ ಪ್ರತೀಪಾಭಿಭೂತಿಕೃತ್ ।
ಬಲವೀರ್ಯ್ಯಗುಣೋಪೇತೋ ನಾಮ್ನಾ ಭೂರಿಶ್ರವಾಃ ಸುತಃ     ॥೧೧.೧

ತಪಸ್ಸಿಗೆ ಮೆಚ್ಚಿದ ರುದ್ರನಿಂದ ವರ ಪಡೆದನಾತ  ಸೋಮದತ್ತ ,
ಶತ್ರುಗಳ ಸೋಲಿಸುವ ಬಲ ವೀರ್ಯಾದಿಗಳಿಂದ  ಗುಣಪೂರಿತ,
ಉದ್ದೇಶ, ಖ್ಯಾತಿ ಗಳಿಸಿ ಬೆಳೆಸುವ ಭೂರಿಶ್ರವಾ ಹುಟ್ಟುವ ವರ ಪ್ರಾಪ್ತ.


ಭವಿಷ್ಯತಿ ಮಯಾssವಿಷ್ಟೋ ಯಜ್ಞಶೀಲ ಇತಿ ಸ್ಮ ಹ ।
ತೇನ ಭೂರಿಶ್ರವಾ ಜಾತಃ ಸೋಮದತ್ತಸುತೋ ಬಲೀ ॥೧೧.೧೫॥

ನನ್ನ ಆವೇಶ ಉಳ್ಳವನಾಗಿ ನಿನ್ನ ಮಗ ನಿರಂತರ ಯಜ್ಞ ಮಾಡುವ,
ಈ ರುದ್ರ ವರದಂತೆ ಸೋಮದತ್ತಗೆ ಭೂರಿಶ್ರವಸ್ ಎಂಬ ಮಗ ಹುಟ್ಟುವ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula