Saturday 10 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 31 - 33

ಇತೀರಿತಾ ಸಾ ವರಮಾಶು ವವ್ರೇ ತೋಭ್ಯೋsಪ್ಯಪಾಪತ್ವಮಥ ಪ್ರಿಯತ್ವಮ್ ।
ತೇಷಾಂ ಸದೈವಾsತ್ಮನ ಏಕಮೇಷಾಂ ದೀರ್ಘಾಯುಷಂ ತಾನ್ ಸುಷುವೇsಥ 
ಶನ್ತನೋಃ  ॥೧೧.೩೧॥

ಈ ರೀತಿಯಾಗಿ ಅಷ್ಟವಸುಗಳಿಂದ ಹೇಳಲ್ಪಟ್ಟ ಗಂಗೆ,
ಆ ಕರ್ಮ ಲೇಪವಾಗದಂತೆ ವರ ಕೇಳುತ್ತಾಳೆ ತನಗೆ.
ಆ ಕರ್ಮದಿಂದ ಭ್ರೂಣಹತ್ಯಾಪಾಪ ಬಾರದಿರಲೆನಗೆ,
ನಾ ಕೊಂದರೂ ಅವರೆಡೆಗೆ ಪ್ರೀತಿ ಕುಂದದಿರಲೆನಗೆ.
ಅವರಲ್ಲೊಬ್ಬನಿಗೆ ದೀರ್ಘಾಯುಸ್ಸು ಇರಬೇಕೆಂದು ಬೇಡಿಕೆ,
ಅದರಂತೇ ವ್ಯವಸ್ಥೆಯಾಗಿದೆ ಎಂದು ಅಷ್ಟವಸುಗಳ ಹೇಳಿಕೆ.
ಮುಂದೆ ಗಂಗೆ ಶಂತನು ದಾಂಪತ್ಯದ ಕಾರಣ,
ಎಂಟು ಮಕ್ಕಳಲ್ಲೊಬ್ಬ ದೀರ್ಘಾಯುಷಿಯ ಜನನ.

ಅವಿಘ್ನತಸ್ತಾನ್ ವಿನಿಹನ್ತುಮೇವ ಪುರಾ ಪ್ರತೀಪಸ್ಯ ಹಿ ದಕ್ಷಿಣೋರುಮ್  ।
ಸಮಾಶ್ರಿತಾ ಕಾಮಿನೀವ ತ್ವಕಾಮಾ ತತ್ಪುತ್ರಭಾರ್ಯ್ಯಾ ಭವಿತುಂ 
ವಿಡಮ್ಬಾತ್  ॥೧೧.೩೨॥

ಆಗಲು ಮುಂದೆ ಮಾನುಷಯೋನಿಯಲ್ಲಿ ಹುಟ್ಟುವ ಅಷ್ಟವಸುಗಳ ಕೊಲೆ,
ಶಂತನು ಹುಟ್ಟಿಗೂ ಮೊದಲು ಗಂಗೆ ಪ್ರತೀಪನ ಬಲ ತೊಡೆಯೇರಿದ ಕಲೆ.
ಕಾಮನೆ ಇರದಿದ್ದರೂ ಕಾಮಿಯಂತೆ ರಾಜ ತೊಡೆಯ ಆಶ್ರಯಿಸಿದ ಆಟ,
ಕಟ್ಟಳೆ ಪಾಲಿಸುತ್ತ ಮುಂದೆ ಸೊಸೆಯಾಗಲೆಂದು ನಡೆಸಿದ ಪರಿಪಾಠ.

ತೇನೈವ ಚೋಕ್ತಾ ಭವ ಮೇ ಸುತಸ್ಯ ಭಾರ್ಯ್ಯಾ ಯತೋ ದಕ್ಷಿಣೋರುಸ್ಥಿತಾsಸಿ ।
ಭಾಗೋ ಹಿ ದಕ್ಷೋ ದುಹಿತುಃ ಸ್ನುಷಾಯಾ ಭಾರ್ಯ್ಯಾಭಾಗೋ ವಾಮ ಇತಿ 
ಪ್ರಸಿದ್ಧಃ  ॥೧೧.೩೩॥

ಪ್ರತೀಪನ ಬಲತೊಡೆಯ ಮೇಲೆ ಕುಳಿತ ಗಂಗೆಗೆ ರಾಜ ಹೇಳುತ್ತಾನೆ,
ನನ್ನ ಬಲತೊಡೆ ಏರಿದ ಕಾರಣ ನನ್ನ ಮಗನ ಹೆಂಡತಿಯಾಗು ನೀನೇ.
ಗಂಡಸಿನ ಬಲತೊಡೆ ಮಗಳಿಗೆ ಅಥವಾ ಸೊಸೆಗೆ ಮೀಸಲಂತೆ,
ಹೆಂಡತಿಗೆಡತೊಡೆ, ಅದರಂತೇ ಪ್ರತೀಪ ರಾಜ ಅನುಸರಿಸಿದನಂತೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula