Thursday 1 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 56 - 60

ಸ ಲೋಕಧರ್ಮ್ಮಾಭಿರಿರಕ್ಷಯಾ ಪಿತುರ್ದ್ದ್ವಿಜತ್ವಮಾಪ್ಯಾsಶು ಪಿತುರ್ದ್ದದೌ ನಿಜಮ್ ।
ಜ್ಞಾನಂ ತಯೋಃ ಸಂಸ್ಮೃತಿಮಾತ್ರತಃ ಸದಾ ಪ್ರತ್ಯಕ್ಷಭಾವಂ ಪರಮಾತ್ಮನೋ 
ದದೌ ॥೧೦.೫೬॥

ಲೋಕಧರ್ಮ ಕಾಪಾಡುವ ಭಗವತ್ವ್ಯಾಪಾರ,
ಪ್ರಾದುರ್ಭವಿಸಿ ವೇದವ್ಯಾಸರಾಗಿ ಕಂಡರು ಶೀಘ್ರ.
ತಂದೆಯಿಂದ ಪಡೆದು ಉಪನಯನ ಸಂಸ್ಕಾರ,
ತಂದೆಗೇ ಉಪದೇಶಿಸಿದರು ತತ್ವಜ್ಞಾನದ ಸಾರ.
ಹೆತ್ತವರಿಗಿತ್ತರು ಸ್ಮರಣೆಮಾತ್ರದಿ ತಾ ಕಾಣುವ ವರ.

ದ್ವೈಪಾಯನಃ ಸೋsಥ ಜಗಾಮ ಮೇರುಂ ಚತುರ್ಮ್ಮುಖಾದ್ಯೈರನುಗಮ್ಯಮಾನಃ ।
ಉದ್ಧೃತ್ಯ ವೇದಾನಖಿಲಾನ್ ಸುರೇಭ್ಯೋ ದದೌ ಮುನಿಭ್ಯಶ್ಚ 
ಯಥಾssದಿಸೃಷ್ಟೌ  ॥೧೦.೫೭॥

ದ್ವೀಪದಲ್ಲಿ ನಡೆದಮೇಲೆ ವೇದವ್ಯಾಸರ ಆ ಅವತಾರದ ಆಟ,
ಬ್ರಹ್ಮಾದಿ ದೇವತೆಗಳಿಂದನುಸರಿಸಿದವರಾಗಿ ಮೇರು ತಲುಪಿದ ನೋಟ.
ಹೇಗೆ ಆದಿಸೃಷ್ಟಿಯಲ್ಲಿ ಆಗಿತ್ತೋ ವೇದಾದಿಗಳ ಉಪದೇಶ,
ದೇವತೆ ಮುನಿಗಳಿಗೆ ಮತ್ತೆ ಉಪದೇಶಿಸಿದರು ವೇದವ್ಯಾಸ.

ಸರ್ವಾಣಿ ಶಾಸ್ತ್ರಾಣಿ ತಥೈವ ಕೃತ್ವಾ ವಿನಿರ್ಣ್ಣಯಂ ಬ್ರಹ್ಮಸೂತ್ರಂ ಚಕಾರ ।
ತಚ್ಛುಶ್ರುವುರ್ಬ್ರಹ್ಮಗಿರೀಶಮುಖ್ಯಾಃ ಸುರಾ ಮುನೀನಾಂ ಪ್ರವರಾಶ್ಚ 
ತಸ್ಮಾತ್  ॥೧೦.೫೮॥

ಹಾಗೆಯೇ ಆಯಿತು ಸಕಲ ಶಾಸ್ತ್ರಗಳ (ನಿರ್ಮಾಣ) ಸಂಪಾದನ,
ಸಕಲ ಶಾಸ್ತ್ರದ ನಿರ್ಣಾಯಕವಾದ ಬ್ರಹ್ಮಸೂತ್ರದ ಅನಾವರಣ.
ಬ್ರಹ್ಮರುದ್ರಾದಿ ದೇವತೆಗಳಿಗಿತ್ತರು ಬ್ರಹ್ಮಸೂತ್ರದ  ಹೂರಣ.

ಸಮಸ್ತಶಾಸ್ತ್ರಾರ್ತ್ಥನಿದರ್ಶನಾತ್ಮಕಂ ಚಕ್ರೇ ಮಹಾಭಾರತನಾಮಧೇಯಮ್ ।
ವೇದೋತ್ತಮಂ ತಚ್ಚ ವಿಧಾತೃಶಙ್ಕರಪ್ರಧಾನಕೈಸ್ತನ್ಮುಖತಃ ಸುರೈಃ 
ಶ್ರುತಮ್  ॥೧೦.೫೯॥

ವೇದ ಶಾಸ್ತ್ರಗಳೆಲ್ಲಾ  ಹೇಳಿರುವ ಅಂತರಂಗದ ಆ ಸತ್ವ,
ಅದರ ಕನ್ನಡಿಯಂತೆ ತೋರುವ ಮಹಾಭಾರತದ ತತ್ವ.
ಬ್ರಹ್ಮರುದ್ರಾದಿ ದೇವತೆಗಳಿಗೆ ಅದರ ಮಕರಂದ,
ಮಹಾಭಾರತದ ಉಪದೇಶ ವೇದವ್ಯಾಸರಿಂದ.

ಅಥೋ ಗಿರೀಶಾದಿಮನೋನುಶಾಯೀ ಕಲಿರ್ಮ್ಮಮಾರಾsಶು ಸುವಾಙ್ಮಯೈಃ ಶರೈಃ ।
ನಿಕೃತ್ತಶೀರ್ಷೋ ಭಗವನ್ಮುಖೇರಿತೈಃ ಸುರಾಶ್ಚ ಸಜ್ಜ್ಞಾನಸುಧಾರಸಂ 
ಪಪುಃ  ॥೧೦.೬೦॥

ರುದ್ರ ಮೊದಲಾದವವರಲ್ಲಿ ನೆಲೆಸಿದ ಕಲಿಯ ತಲೆ,
ಜ್ಞಾನಬಾಣದಿಂದ ಕತ್ತರಿಸಿ ನಿವಾರಣೆ ಮಾಡಿದ ಕಲೆ.
ಆಗಾಯಿತು ದೇವತೆಗಳಲ್ಲಿದ್ದ ಕಲಿಯ ಮರಣ,
ದೇವತೆಗಳು ಪಡೆದರು ನಿರ್ಮಲವಾದ ಜ್ಞಾನ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula