ವಿಚಿತ್ರವೀರ್ಯ್ಯಂ ರಾಜಾನಂ ಕೃತ್ವಾ ಭೀಷ್ಮೋsನ್ವಪಾಲಯತ್ ।
ಅಥ ಕಾಶಿಸುತಾಸ್ತಿಸ್ರಸ್ತದರ್ತ್ಥಂ ಭೀಷ್ಮ ಆಹರತ್ ॥೧೧.೮೭॥
ಮಹಾರಾಜ
ಚಿತ್ರಾಂಗದನಿಗೆ ಮದುವೆಗೆ ಮುಂಚೆ ಬಂದ ಮರಣ,
ಯುವರಾಜ
ವಿಚಿತ್ರವೀರ್ಯನ ಭೀಷ್ಮರು ರಾಜನ ಮಾಡಿದ ಕಾರಣ.
ಅವನ ಪರವಾಗಿ
ಭೀಷ್ಮರೇ ಹೊತ್ತರು ರಾಜ್ಯಭಾರದ ಜವಾಬ್ದಾರಿ,
ವಿಚಿತ್ರವೀರ್ಯನಿಗಾಗಿ
ಕಾಳೀರಾಜನ ಮೂರು ಮಕ್ಕಳ ತಂದ ಪರಿ.
ಅಮ್ಬಾಮಪ್ಯಮ್ಭಿಕಾನಾಮ್ನೀಂ ತಥೈವಾಮ್ಬಾಲಿಕಾಂ ಪರಾಮ್ ।
ಪಾಣಿಗ್ರಹಣಕಾಲೇ ತು ಬ್ರಹ್ಮದತ್ತಸ್ಯ ವೀರ್ಯ್ಯವಾನ್ ॥೧೧.೮೮॥
ಸಾಲ್ವ ರಾಜ ಬ್ರಹ್ಮದತ್ತ
ಮದುವೆಯಾಗಬೇಕಿದ್ದ ಸಮಯ,
ಬಲಿಷ್ಠ ಭೀಷ್ಮರು
ಸಾಧಿಸಿದರು ಕ್ಷತ್ರಿಯರ ಮೇಲೆ ವಿಜಯ.
ಕಾಶೀರಾಜನ ಮೂರು
ಮಕ್ಕಳು ಅಂಬೆ ಅಂಬಿಕೆ ಅಂಬಾಲಿಕೆ,
ಭೀಷ್ಮ ಗೆದ್ದು
ತಂದರವರ ವಿಚಿತ್ರವೀರ್ಯನಿಗಾಗಿ ವಧುಕಾಣಿಕೆ.
ವಿಜಿತ್ಯ ತಂ ಸಾಲ್ವರಾಜಂ ಸಮೇತಾನ್ ಕ್ಷತ್ರಿಯಾನಪಿ ।
ಅಮ್ಬಿಕಾಮ್ಬಾಲಿಕೇ ತತ್ರ ಸಂವಾದಂ ಚಕ್ರತುಃ ಶುಭೇ ॥೧೧.೮೯॥
ಅಮ್ಬಾ ಸಾ ಭೀಷ್ಮಭಾರ್ಯ್ಯೈವ ಪೂರ್ವದೇಹೇ ತು ನೈಚ್ಛತ ।
ಶಾಪಾದ್ಧಿರಣ್ಯಗರ್ಭಸ್ಯ ಸಾಲ್ವಕಾಮಾsಹಮಿತ್ಯಪಿ ॥೧೧.೯೦॥
ಬ್ರಹ್ಮದತ್ತನ
ಗೆದ್ದು ನೆರೆದ ರಾಜರನ್ನೂ ಗೆದ್ದು ಭೀಷ್ಮರು
ತಂದ ಕನ್ಯೆಯರು
ಮೂವರು,
ಉತ್ತಮರಾದ ಅಂಬಿಕೆ
ಅಂಬಾಲಿಕೆಯರು ವಿಚಿತ್ರವೀರ್ಯನ ವರಿಸಲು
ಒಪ್ಪಿದರು.
ಆದರೆ ಅಂಬೆ ಹಿಂದಿನ
ಜನ್ಮದಲ್ಲಿ ಭೀಷ್ಮರ ಹೆಂಡತಿ,
ಕೊಡಲಿಲ್ಲವಳು
ವಿಚಿತ್ರವೀರ್ಯನ ವರಿಸಲು ಸಮ್ಮತಿ.
ಬ್ರಹ್ಮದೇವನ ಶಾಪದ
ಫಲದ ಪ್ರಭೆ,
ಸಾಲ್ವನ
ಬಯಸುವೆನೆಂದಳು ಅಂಬೆ.
ಉವಾಚ ತಾಂ ಸ ತತ್ಯಾಜ ಸಾsಗಮತ್ ಸಾಲ್ವಮೇವ ಚ ।
ತೇನಾಪಿ ಸಮ್ಪರಿತ್ಯಕ್ತಾ ಪರಾಮೃಷ್ಟೇತಿ ಸಾ ಪುನಃ ॥೧೧.೯೧॥
ಸಾಲ್ವನ ಬಯಸಿದ
ಅಂಬೆಗೆ ಭೀಷ್ಮರು ಕೊಟ್ಟರು ಬಿಡುಗಡೆ,
ಅಂಬೆ ಹೊರಟು
ಬರುತ್ತಾಳಾಗ ಸಾಲ್ವರಾಜನಿರುವ ಕಡೆ.
ಅಪಹರಿಸಿ
ಬಿಟ್ಟವಳಾದ್ದಕ್ಕೆ ಸಾಲ್ವನಿಂದ ತಿರಸ್ಕೃತ ನಡೆ.
ಭೀಷ್ಮಮಾಪ ಸ ನಾಗೃಹ್ಣಾತ್ ಪ್ರಯಯೌ ಸಾsಪಿ ಭಾರ್ಗ್ಗವಮ್।
ಭ್ರಾತುರ್ವಿವಾಹಯಾಮಾಸ ಸೋsಮ್ಬಿಕಾಮ್ಬಾಲಿಕೇ ತತಃ ॥೧೧.೯೨ ॥
ಆಗ ಆಕೆ ಮತ್ತೆ
ಭೀಷ್ಮರ ಬಳಿ ಬರುವಿಕೆ,
ಅವರೂ ಆಕೆಯನ್ನು
ಸ್ವೀಕರಿಸದಿರುವಿಕೆ.
ಕೊನೆಗೆ ಆದದ್ದು
ಅಂಬೆ ಪರಶುರಾಮರ ಬಳಿ ಹೋಗುವ ಕಾರ್ಯ,
ಭೀಷ್ಮರಿಚ್ಛೆಯಂತೆ ಅಂಬಿಕೆ ಅಂಬಾಲಿಕೆಯರ ವರಿಸಿದ
ವಿಚಿತ್ರವೀರ್ಯ.[Contributed by Shri Govind Magal]
No comments:
Post a Comment
ಗೋ-ಕುಲ Go-Kula