Wednesday 7 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 05 - 09

ಚಂದ್ರವಂಶದ ವಂಶವೃಕ್ಷದ ವಿವರಣೆ,
ಮುಂದುವರೆದ ಭಾಗದ ನಿರೂಪಣೆ.
ಭರತನಿಂದ ಶಂತನು ತನಕ,
ಶಂತನು ಅಣ್ಣನಾದ ಬಾಹ್ಲೀಕ,
ಮೂಲತಃ ಹಿರಣ್ಯಕಶಿಪುವಿನ ಮಗನಾಗಿದ್ದವನು ಪ್ರಹ್ಲಾದ,
ಬಾಹ್ಲೀಕ ಪುತ್ರಿಕಾಪುತ್ರತ್ವದಂತೆ ತಾಯಿ ತಂದೆಯ ದೇಶಾಧಿಪತಿಯಾದ.

ತದ್ವಂಶಜಃ ಕುರುರ್ನ್ನಾಮ ಪ್ರತೀಪೋsಭೂತ್ ತದನ್ವಯೇ ।
ಪ್ರತೀಪಸ್ಯಾಭವನ್ ಪುತ್ರಾಸ್ತ್ರಯಸ್ತ್ರೇತಾಗ್ನಿವರ್ಚ್ಚಸಃ ॥೧೧.೦೫॥
ದೇವಾಪಿರಥ ಬಾಹ್ಲೀಕೋ ಗುಣಜ್ಯೇಷ್ಠಶ್ಚ ಶನ್ತನುಃ ।
ತ್ವಗ್ದೋಷಯುಕ್ತೋ ದೇವಾಪಿರ್ಜ್ಜಗಾಮ ತಪಸೇ ವನಮ್ ॥೧೧.೦೬॥

ಭರತನ ವಂಶದಲ್ಲಿ ಕುರು ಎಂದು ಪ್ರಸಿದ್ಧನಾದ ರಾಜನ ಜನನ,
ಅವನ ವಂಶದಲ್ಲೇ ಆಯಿತು ಪ್ರತೀಪ ರಾಜನ ಆಗಮನ.
ಪ್ರತೀಪಗೆ ಅಗ್ನಿಕಾಂತಿಯುಳ್ಳ ಮಕ್ಕಳು ಮೂರು,
ದೇವಾಪಿ ಬಾಹ್ಲೀಕ ಮತ್ತು ಶಂತನು ಎಂಬುವವರು.
ತೊನ್ನುರೋಗದ ದೇವಾಪಿ ಕಾಡು ಸೇರಿದ ಬಿಟ್ಟು ತನ್ನೂರು.

ವಿಷ್ಣೋಃ ಪ್ರಸಾದಾತ್ ಸ ಕೃತೇ ಯುಗೇ ರಾಜಾ ಭವಿಷ್ಯತಿ ।
ಪುತ್ರಿಕಾಪುತ್ರತಾಂ ಯಾತೋ ಬಾಹ್ಲೀಕೋ ರಾಜಸತ್ತಮಃ ॥೧೧.೦೭॥

ಚರ್ಮರೋಗವಿದ್ದ ಕಾರಣ ಕಾಡಿಗೆ ಹೋದ ಪ್ರತೀಪನ ಹಿರಿಮಗ,
ಹೊಂದಿದ್ದ ವಿಷ್ಣು ಅನುಗ್ರಹದಿಂದ ಮುಂದೆ ರಾಜನಾಗೋ ಯೋಗ.
ಎರಡನೇ ಮಗ ಬಾಹ್ಲೀಕ ಪುತ್ರಿಕಾಪುತ್ರತ್ವ ಹೊಂದಿದ ರಾಜನಾದನಾಗ.


ಹಿರಣ್ಯಕಶಿಪೋಃ ಪುತ್ರಃ ಪ್ರಹ್ಲಾದೋ ಭಗವತ್ಪರಃ ।
ವಾಯುನಾ ಚ ಸಮಾವಿಷ್ಟೋ ಮಹಾಬಲಸಮನ್ವಿತಃ  ॥೧೧.೦೮॥
ಯೇನೈವ ಜಾಯಮಾನೇನ ತರಸಾ ಭೂರ್ವಿದಾರಿತಾ ।
ಭೂಭಾರಕ್ಷಪಣೇ ವಿಷ್ಣೋರಙ್ಗತಾಮಾಪ್ತುಮೇವ ಸಃ    ॥೧೧.೦೯॥

ಪೂರ್ವದಲ್ಲಿ ಹಿರಣ್ಯಕಶಿಪುವಿನ ಮಗನಾಗಿದ್ದ ಪ್ರಹ್ಲಾದ,
ಬಾಹ್ಲೀಕ ರಾಜನಾಗಿ ಭಗವದ್ ಭಕ್ತನಾಗಿ ಹುಟ್ಟಿ ಬಂದಿದ್ದ.
ಮುಖ್ಯಪ್ರಾಣನಿಂದಲೂ ಕೂಡಾ ಆವಿಷ್ಟನಾದವ ಆಗಿದ್ದ.
ಭೂ ಭಾರನಾಶ ಕಾರ್ಯದಲ್ಲಿ ಭಗವತ್ ಸೇವೆಗಾಗಿ ಕಟಿಬದ್ಧ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula