ಅಧರ್ಮ್ಮವೃತ್ತಾಃ ಪ್ರತಿಯಾತ ಮಾನುಷೀಂ ಯೋನಿಂ ದ್ರುತಂ ಯತ್ಕೃತೇ ಸರ್ವ
ಏವ ।
ಧರ್ಮಾಚ್ಚ್ಯುತಾಃ ಸ ತಥಾsಷ್ಟಾಯುರಾಪ್ಯ ತಾಮನ್ಯೇ
ಪುನಃ ಕ್ಷಿಪ್ರಮತೋ ವಿಮೋಕ್ಷ್ಯಥ ॥೧೧.೨೫॥
ಪ್ರಚೋದಯಾಮಾಸ ಚ ಯಾ ಕುಮಾರ್ಗ್ಗೇ ಪತಿಂ ಹಿ ಸಾsಮ್ಬೇತಿ
ನರೇಷು ಜಾತಾ ।
ಅಭರ್ತ್ತೃಕಾ ಪುಂಸ್ತ್ವಸಮಾಶ್ರಯೇಣ ಪತ್ಯುರ್ಮ್ಮೃತೌ ಕಾರಣತ್ವಂ
ವ್ರಜೇತ ॥೧೧.೨೬॥
ಧೇನುವಿನ
ಬಂಧನಕಾರ್ಯದಲ್ಲಿ ಪ್ರವೃತ್ತರಾಗಿ ಮಾಡಿದ ಅಧರ್ಮ,
ಹಿಂಬಾಲಿಸಿ ಬಂತು
ಮಾನುಷಯೋನಿಯಲ್ಲಿ ಹುಟ್ಟಿ ಬರಬೇಕಾದ ಕರ್ಮ.
ಮುಖ್ಯನಾದ ದ್ಯು
ವಸುವಿಗೆ ಎಂಟೂ ಜನರ ಆಯುಷ್ಯ ಪ್ರಾಪ್ತ,
ಉಳಿದವರಾಗುತ್ತಾರೆ
ಕ್ಷಿಪ್ರವಾಗಿ ಮಾನುಷ ಯೋನಿಯಿಂದ ಮುಕ್ತ.
ಗಂಡನ ಕೆಟ್ಟ
ಮಾರ್ಗಕ್ಕೆಳೆದ ವರಾಂಗಿಗೆ ಅಂಬಾ ಹೆಸರಿಂದ ಮನುಷ್ಯರಲ್ಲಿ ಹುಟ್ಟು,
ಗಂಡನ ಹೊಂದದೇ
ಪುರುಷತ್ವ ಹೊಂದಿ ತನ್ನಪತಿಯ ಸಾವಿಗೆ ಕಾರಣಳಾದ
ಗುಟ್ಟು.
ಭವತ್ವಸೌ ಬ್ರಹ್ಮಚರ್ಯ್ಯೈಕನಿಷ್ಠೋ ಮಹಾನ್ ವಿರೋಧಶ್ಚ ತಯೋರ್ಭವೇತ ।
ಸ ಗರ್ಭವಾಸಾಷ್ಟಕದುಃಖಮೇವ ಸಮಾಪ್ನುತಾಂ ಶರತಲ್ಪೇ ಶಯಾನಃ ॥೧೧.೨೭॥
ಮೃತ್ಯಷ್ಟಕೋತ್ಥಾಮಪಿ ವೇದನಾಂ ಸಃ ಪ್ರಾಪ್ನೋತು ಶಸ್ತ್ರೈರ್ಬಹುಧಾ
ನಿಕೃತ್ತಃ ।
ಇತೀರಿತಾಸ್ತೇ ಕಮಲೋದ್ಭವಂ ತಂ ಜ್ಞಾತ್ವಾ ಸಮುತ್ಸೃಜ್ಯ ಚ ಗಾಂ
ಪ್ರಣೇಮುಃ॥೧೧.೨೮॥
ದ್ಯು ವಸು
ಬ್ರಹ್ಮಚರ್ಯದಲ್ಲಿ ನಿಷ್ಠನಾಗಿ ವಿಶೇಷ ಬದ್ಧ,
ವರಾಂಗಿ ಮತ್ತು
ದ್ಯು ವಸುವಿನ ಮಧ್ಯೆಯ ಮಹಾ ವಿರೋಧ.
ದ್ಯು ವಸುವಿಗೆ
ಶರಮಂಚದಲ್ಲಿ ಮಲಗಿ ಶಸ್ತ್ರಗಳಿಂದ ಛೇದಿಸಲ್ಪಟ್ಟು ಎಂಟುಗರ್ಭವಾಸದ ನೋವು,
ಈ ರೀತಿಯಾಗಿ
ಅಷ್ಟವಸುಗಳಿಗೆ ವಸಿಷ್ಠರ ಒಳಗಿದ್ದು ನೀಡಿದ ಬ್ರಹ್ಮದೇವರ ಶಾಪದ ತೀವ್ರ ಕಾವು.
ಅಷ್ಟವಸುಗಳಿಗಾಯ್ತು
ವಸಿಷ್ಠರ ಒಳಗಿದ್ದ ಬ್ರಹ್ಮದೇವರ ಜ್ಞಾನ,
ಕಟ್ಟಿದ ಧೇನುವ
ಬಿಚ್ಚಿ ಬ್ರಹ್ಮಗೆ ನಮಸ್ಕರಿಸಿ ಮಾಡಿದರು ವಿಜ್ಞಾಪನ.
ನ ಮಾನುಷೀಂ ಗರ್ಭಮವಾಪ್ನುಮೋ ವಯಂ ಭವತ್ವಯಂ ಸರ್ವವಿತ್
ಕೀರ್ತ್ತಿಮಾಂಶ್ಚ ।
ಮಹಾಸ್ತ್ರವೇತ್ತಾ ಭವದಂಶಯುಕ್ತಸ್ತಥಾ ಬಲಂ ನೋsಖಿಲಾನಾಮುಪೈತು ॥೧೧.೨೯ ॥
ನಾವು ಮಾನುಷ
ಸ್ತ್ರೀಗರ್ಭವನ್ನು ಪ್ರವೇಶಿಸದಂತಾಗಲಿ,
ದ್ಯು ವಸುವು ನಿನ್ನ
ಅಂಶಾಯುಕ್ತನಾಗಿ ಸರ್ವಜ್ಞನಾಗಲಿ.
ಕೀರ್ತಿಶಾಲಿಯಾಗಿ
ಅಸ್ತ್ರಜ್ಞನೆನಿಸಿ ನಮ್ಮೆಲ್ಲರ ಬಲ ಹೊಂದಲಿ,
ಹೀಗೆ ವಸುಗಳು ವಸಿಷ್ಠಾಂತರ್ಗತ ಬ್ರಹ್ಮನ ಬೇಡಿ ಕೇಳಿದರಲ್ಲಿ. [Contributed by Shri Govind Magal]
No comments:
Post a Comment
ಗೋ-ಕುಲ Go-Kula