ಇತೀರಿತಸ್ತತ್ಕ್ಷಣತಃ ಪ್ರತೀಪಾದ್ ಬಭೂವ ನಾಮ್ನಾ ನೃಪತಿಃ ಸ ಶನ್ತನುಃ
।
ಅವಾಪ್ಯ ಗಙ್ಗಾಂ ದಯಿತಾಂ ಸ್ವಕೀಯಾಂ ತಯಾ ಮುಮೋದಾಬ್ದಗಣಾನ್
ಬಹೂಂಶ್ಚ
॥೧೧.೨೧॥
ಈ ರೀತಿ ಹೇಳಿಸಿಕೊಳ್ಳಲ್ಪಟ್ಟ
ಆ ಕ್ಷಣದಲ್ಲೇ ಮಹಾಭಿಷಕ್ ತಾನು,
ಪ್ರತೀಪ ರಾಜನ
ಮಗನಾಗಿ ಭುವಿಯಲ್ಲಿ ಹುಟ್ಟಿದ ಆಗಿ ಶಂತನು.
ಅಲ್ಲಿಯೂ ತನ್ನವಳೇ
ಆದ ಗಂಗೆಯನ್ನ ಪತ್ನಿಯಾಗಿ ಹೊಂದಿದ,
ಅವಳ ಜೊತೆಯಾಗಿ
ಭುವಿಯಲ್ಲಿ ವರ್ಷಗಳ ಕಾಲ ಕ್ರೀಡಿಸಿದ.
ಅಥಾಷ್ಟಮೋ ವಸುರಾಸೀದ್ ದ್ಯುನಾಮಾ ವರಾಙ್ಗಿನಾಮ್ನ್ಯಸ್ಯ ಬಭೂವ
ಭಾರ್ಯ್ಯಾ ।
ಬಭೂವ ತಸ್ಯಾಶ್ಚ ಸಖೀ ನೃಪಸ್ಯ ಸುವಿನ್ದನಾಮ್ನೋ ದಯಿತಾ
ಸನಾಮ್ನೀ ॥೧೧.೨೨॥
ಕಥಾಂತರದಲ್ಲಿ
ಭೀಷ್ಮ ಕಥೆ ಹೇಳಿದ್ದಾರೆ ಶ್ರೀಮದಾಚಾರ್ಯ,
ದ್ಯು ನಾಮಕ ವಸು
ಭೀಷ್ಮನಾದ ಕಥೆಯ ಹಿಂದಿರುವ ವ್ಯಾಪಾರ.
ಅಷ್ಟವಸುಗಳಲ್ಲಿ 'ದ್ಯು' ಎಂಬ ಹೆಸರಿನ
ವಸುವಿದ್ದ,
ಅವನು ವರಾಂಗಿ
ಎಂಬ್ಹೆಸರಿನ ಹೆಂಡತಿ ಹೊಂದಿದ್ದ.
ವರಾಂಗಿಗೆ
ಸಖಿಯಾಗಿದ್ದವಳು ಸುವಿಂದರಾಜನ ಹೆಂಡತಿ,
ಅವಳ ಹೆಸರೂ
ವರಾಂಗಿಯಾಗಿತ್ತು ಎಂಬುದಂದಿನ ಸಂಗತಿ.
ತಸ್ಯಾ ಜರಾಮೃತಿವಿಧ್ವಂಸಹೇತೋರ್ವಸಿಷ್ಠಧೇನುಂ ಸ್ವಮೃತಂ ಕ್ಷರನ್ತೀಮ್
।
ಜರಾಪಹಾಂ ನನ್ದಿನಿನಾಮಧೇಯಾಂ ಬದ್ಧುಂ ಪತಿಂ ಚೋದಯಾಮಾಸ
ದೇವೀ ॥೧೧.೨೩॥
ದ್ಯು ವಸುವಿನ
ಪತ್ನಿಯಾದ ವರಾಂಗಿಯ ಉದ್ದೇಶ,
ಸಖಿ ವರಾಂಗಿಯ
ಮುದಿತನ ಮರಣಗಳ ನಾಶ.
ವಸಿಷ್ಠರ
ವಶದಲ್ಲಿತ್ತು ಅಮೃತ ಕರೆವ ಮುದಿತನ ಕಳೆವ ನಂದಿನಿ ಧೇನು,
ಅದನ್ನೇ
ವಶಪಡಿಸಿಕೊಂಡು ಕಟ್ಟಿತರಲು ಗಂಡನ ಪ್ರಚೋದಿಸುತ್ತಾಳೆ ತಾನು.
ತಯಾ ದ್ಯುನಾಮ ಸ ವಸುಃ ಪ್ರಚೋದಿತೋ ಭ್ರಾತೃಸ್ನೇಹಾತ್ ಸಪ್ತಭಿರನ್ವಿತೋsಪರೈಃ ।
ಬಬನ್ಧ ತಾಂ ಗಾಮಥ ತಾಞ್ಛಶಾಪ ವಸಿಷ್ಠಸಂಸ್ಥಃ ಕಮಲೋದ್ಭವಃ
ಪ್ರಭುಃ
॥೧೧.೨೪॥
ವರಾಂಗಿಯಿಂದ
ಪ್ರೇರಿತನಾದ ಗಂಡ ದ್ಯು ನಾಮಕ ವಸು,
ತನ್ನ ಸೋದರರೊಂದಿಗೆ
ಕೂಡಿ ಕಟ್ಟಿದ ವಸಿಷ್ಠರ ಆ ಹಸು.
ವಸಿಷ್ಠರಲ್ಲಿನ
ಬ್ರಹ್ಮನಿಂದ ಶಾಪಕ್ಕೊಳಗಾದ ವೃಂದ ಅಷ್ಟವಸು.
No comments:
Post a Comment
ಗೋ-ಕುಲ Go-Kula