Monday 5 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 69 - 73

ಅಥಾಸ್ಯ ಪುತ್ರತ್ವಮವಾಪ್ತುಮಿಚ್ಛಂಶ್ಚಚಾರ ರುದ್ರಃ ಸುತಪಸ್ತದೀಯಮ್ ।
ದದೌ ಚ ತಸ್ಮೈ ಭಗವಾನ್ ವರಂ ತಂ ಸ್ವಯಂ ಚ ತಪ್ತ್ವೇವ ತಪೋ ವಿಮೋಹಯನ್  ॥೧೦.೬೯॥

ವೇದವ್ಯಾಸರ ಮಗನಾಗಿ ಹುಟ್ಟಬೇಕೆಂದು ರುದ್ರನ ತಪಸ್ಸಾಚರಣೆ,
ಅದರಂತವನಿಗೆ ಅನುಗ್ರಹಿಸಿದರು ತೋರುತ್ತವನಲ್ಲಿ ಪ್ರೀತಿ ಕರುಣೆ.
ಆದರೆ ಇನ್ನೊಂದು ದೃಷ್ಟಿಯಿಂದ ತಾವೇ ತಪಸ್ಸು ಆಚರಿಸಿದ ಆಟ,
ರುದ್ರ ತನ್ನ ಮಗನಾಗಲೆಂದು ದುಷ್ಟಮೋಹನಾರ್ಥ ತೋರಿಸಿದ ನೋಟ.

ವಿಮೋಹನಾಯಾಸುರಸರ್ಗ್ಗಿಣಾಂ ಪ್ರಭುಃ ಸ್ವಯಂ ಕರೋತೀವ ತಪಃ ಪ್ರದರ್ಶಯೇತ್ ।
ಕಾಮಾದಿದೋಷಾಂಶ್ಚ ಮೃಷೈವ ದರ್ಶಯೇನ್ನ ತಾವತಾ ತೇsಸ್ಯ ಹಿ ಸನ್ತಿ ಕುತ್ರಚಿತ್  ॥೧೦.೭೦ ॥

ಸರ್ವಶಕ್ತ ವೇದವ್ಯಾಸರು ಅಸುರಸ್ವಭಾವದವರ ಮೋಹನಾರ್ಥ,
ತೋರಿಕೊಂಡರು ತಾವೇ ತಮ್ಮ ಕಾಮನೆ ಪೂರೈಕೆಗೆ ತಪೋನಿರತ.
ಭಗವಂತನಲ್ಲೆಲ್ಲಿ ಕಾಮಾದಿ ದೋಷ,
ಅವನೆಲ್ಲ ಮೀರಿದ ಸರ್ವಸಮರ್ಥ ಈಶ.

ತತಸ್ತ್ವರಣ್ಯ ಸ್ಮ ಬಭೂವ ಪುತ್ರಕಃ ಶಿವೋsಸ್ಯ ಸೋsಭೂಚ್ಛುಕನಾಮಧೇಯಃ ।
ಶುಕೀ ಹಿ ಭೂತ್ವಾsಭ್ಯಗಮದ್ ಘೃತಾಚೀ ವ್ಯಾಸಂ ವಿಮತ್ಥ್ನನ್ತಮುತಾರಣೀ ತಮ್  ॥೧೦.೭೧॥

ಅಕಾಮಯನ್ ಕಾಮುಕವತ್ ಸ ಭೂತ್ವಾ ತಯಾsರ್ತ್ಥಿತಸ್ತಂ ಶುಕನಾಮಧೇಯಮ್ ।
ಚಕ್ರೇ ಹ್ಯರಣ್ಯೋಸ್ತನಯಂ ಚ ಸೃಷ್ಟ್ವಾ ವಿಮೋಹಯಂಸ್ತತ್ವಮಾರ್ಗ್ಗೇಷ್ವಯೋಗ್ಯಾನ್  ॥೧೦.೭೨॥

ವ್ಯಾಸರ ಮಗ ಶುಕನಾಗಿ ಸದಾಶಿವನ ಆಗಮನ,
ಅರಣಿಮಥನದಿ ಕಾಷ್ಠದ ಮಧ್ಯ ಅವನ ಜನನ.
ಘ್ರುತಾಚಿ ಅಪ್ಸರೆ ಹೆಣ್ಣು ಗಿಣಿಯಾಗಿ ಬಂದ ಪ್ರಸಂಗ,
ಆಗಲೇ ಶುಕನ ಹುಟ್ಟಿಸಿದವಗೆ ಬೇಕೇ ಸ್ತ್ರೀಯ ಸಂಗ.
ಘ್ರುತಾಚಿಯಲ್ಲಿ (ಇನ್ಯಾರಲ್ಲೇ)ಸ್ವರಮಣಗೆಂಥ ಕಾಮ,
ಅಯೋಗ್ಯಮೋಹನಾರ್ಥ ನಾಟಕ ತೋರಿದ ನೇಮ.

ಶುಕಂ ತಮಾಶು ಪ್ರವಿವೇಶ ವಾಯುರ್ವ್ಯಾಸಸ್ಯ ಸೇವಾರ್ತ್ಥಮಥಾಸ್ಯ ಸರ್ವಮ್ ।
ಜ್ಞಾನಂ ದದೌ ಭಗವಾನ್ ಸರ್ವವೇದಾನ್ ಸಭಾರತಂ ಭಾಗವತಂ ಪುರಾಣಾಮ್  ॥೧೦.೭೩ll

ವ್ಯಾಸರ ಸೇವೆಗಾಗಿ ಶುಕನಲ್ಲಿ ವಾಯುವಿನ ಪ್ರವೇಶ,
ವಾಸರಿಂದ ಶುಕನಿಗೆ ಸರ್ವಜ್ಞತ್ವದ ಜ್ಞಾನೋಪದೇಶ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula