ಗಾನ್ಧಾರರಾಜಸ್ಯ ಸುತಾಮುವಾಹ ಗಾನ್ಧಾರಿನಾಮ್ನೀಂ ಸುಬಲಸ್ಯ ರಾಜಾ ।
ಜ್ಯೇಷ್ಠೋ ಜ್ಯೇಷ್ಠಾಂ ಶಕುನೇರ್ದ್ದ್ವಾಪರಸ್ಯ ನಾಸ್ತಿಕ್ಯರೂಪಸ್ಯ
ಕುಕರ್ಮ್ಮಹೇತೋಃ ॥೧೧.೧೪೭॥
ಕುಕರ್ಮ್ಮಹೇತೋಃ ॥೧೧.೧೪೭॥
ಸುಬಲ ಎಂಬ ಹೆಸರಿನ
ಗಾಂಧಾರ ದೇಶದ ರಾಜನ ಮಗಳು ಗಾಂಧಾರಿ,
ನಾಸ್ತಿಕ್ಯ
ದುಷ್ಕೃತ್ಯಗಳ ಹೇತು ದ್ವಾಪರ ಅವತಾರಿ ಶಕುನಿಯ ಸೋದರಿ.
ರಾಜ ಧೃತರಾಷ್ಟ್ರ
ವರಿಸಬೇಕಾಗುತ್ತದೆ ಅವಳನ್ನು ದೈವೀಚ್ಛೆಯನುಸಾರಿ.
ಶೂರಸ್ಯ ಪುತ್ರೀ ಗುಣಶೀಲರೂಪಯುಕ್ತಾ ದತ್ತಾ ಸಖ್ಯುರೇವ ಸ್ವಪಿತ್ರಾ ।
ನಾಮ್ನಾ ಪೃಥಾ ಕುನ್ತಿಭೋಜಸ್ಯ ತೇನ ಕುನ್ತೀ ಭಾರ್ಯ್ಯಾ ಪೂರ್ವದೇಹೇsಪಿ
ಪಾಣ್ಡೋಃ ॥೧೧.೧೪೮॥
ಪಾಣ್ಡೋಃ ॥೧೧.೧೪೮॥
ಶೂರನೆಂಬ ಯಾದವನಿಗೆ
ಗುಣ ಶೀಲ ರೂಪದಿ ಕೂಡಿದ ಪೃಥಾ ಎಂಬೊಬ್ಬ ಮಗಳು,
ಅವಳು ಶೂರನಿಂದಲೇ
ಗೆಳೆಯ ಕುಂತೀಭೋಜನಿಗೆ ದತ್ತು ಕೊಡಲ್ಪಟ್ಟವಳು.
ಕುಂತೀಭೋಜ ಸಲಹಿದವಳ
ಹೆಸರಾಯಿತು ಕುಂತಿ,
ಮೂಲದಲ್ಲವಳು
(ಪಾಂಡು) ಪರಾವಹನ ಹೆಂಡತಿ.
ಕೂರ್ಮ್ಮಶ್ಚ ನಾಮ್ನಾ ಮರುದೇವ ಕುನ್ತಿಭೋಜೋsಥೈನಾಂ
ವರ್ದ್ಧಯಾಮಾಸ ಸಮ್ಯಕ್ ।
ತತ್ರಾsಗಮಚ್ಛಙ್ಕರಾಂಶೋsತಿಕೋಪೋ ದುರ್ವಾಸಾಸ್ತಂ ಪ್ರಾಹ ಮಾಂ
ವಾಸಯೇತಿ ॥೧೧.೧೪೯॥
ವಾಸಯೇತಿ ॥೧೧.೧೪೯॥
ಕೂರ್ಮ
ಎಂದೆನಿಸಿಕೊಂಡ ಮರುದ್ದೇವತೆಯೇ ಕುಂತೀಭೋಜ ನಾಮಕನಾಗಿ ಹುಟ್ಟಿದ್ದ,
ಈ ಕುಂತೀಭೋಜ ದತ್ತು
ಮಗಳು ಪೃಥೆಯನ್ನು ಬಲುಪ್ರೀತಿಯಿಂದ ಚೆನ್ನಾಗಿ ಸಾಕಿದ್ದ.
ಈ ಸಮಯದಲ್ಲಿ
ರಾಜ್ಯಕ್ಕೆ ರುದ್ರಾಂಶರಾದ ಕೋಪಿಷ್ಟ ದೂರ್ವಾಸರ ಪ್ರವೇಶ,
ತಮ್ಮ ವಾಸಕ್ಕಲ್ಲಿ
ತಕ್ಕದಾದ ವ್ಯವಸ್ಥೆ ಮಾಡೆಂದು ಕುಂತೀಭೋಜಗಿತ್ತರು ಆದೇಶ.
ತಮಾಹ ರಾಜಾ ಯದಿ ಕನ್ಯಕಾಯಾಃ ಕ್ಷಮಿಷ್ಯಸೇ ಶಕ್ತಿತಃ ಕರ್ಮ್ಮ ಕರ್ತ್ರ್ಯಾಃ
।
ಸುಖಂ ವಸೇತ್ಯೋಮಿತಿ ತೇನ ಚೋಕ್ತೇ ಶುಶ್ರೂಷಣಾಯಾsದಿಶದಾಶು
ಕುನ್ತೀಮ್ ॥೧೧. ೧೫೦॥
ಕುನ್ತೀಮ್ ॥೧೧. ೧೫೦॥
ಕುಂತೀಭೋಜ ರಾಜ
ದೂರ್ವಾಸರಲ್ಲಿ ಮಾಡಿಕೊಳ್ಳುತ್ತಾನೆ ಹೀಗೆಂದು ವಿನಂತಿ,
ಶ್ಯಕ್ತ್ಯಾನುಸಾರ
ಸೇವೆ ಮಾಡುವ ಬಾಲಕಿಯ ಸಹಿಸುವಿರಾದರೆ ನೋಡಿಕೊಳ್ಳುವಳು ಕುಂತಿ.
ದೂರ್ವಾಸರಿಂದ
ಬರುತ್ತದೆ ಆಯಿತು ಎಂಬ ಒಪ್ಪಿಗೆ,
ಕುಂತಿಗಾಜ್ಞಾಪಿಸುತ್ತಾನೆ
ರಾಜ ದೂರ್ವಾಸರ ಸೇವೆಗೆ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula