Tuesday 18 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 151 - 154

ಚಕಾರ ಕರ್ಮ್ಮ ಸಾ ಪೃಥಾ ಮುನೇಃ ಸುಕೋಪನಸ್ಯ ಹಿ ।
ಯಥಾ ನ ಶಕ್ಯತೇ ಪರೈಃ ಶರೀರವಾಙ್ಮನೋನುಗಾ ॥೧೧.೧೫೧ll

ಬೇರೆ ಯಾರೊಬ್ಬರಿಂದ ಮಾಡಲಸಾಧ್ಯವಾದ ಕೆಲಸ,
ಕಾರಣವಿರದೆ ಕೋಪಗೊಳ್ಳುವ ಋಷಿ ಆ ದುರ್ವಾಸ.
ಅಂಥಾ ವಿಚಿತ್ರವಾದ ಋಷಿಯ ಸೇವಾರೂಪವಾದ ವಿಶೇಷ ಕರ್ಮ,
ಪೃಥೆ ದೇಹ ಮಾತು ಮನದಿಂದವರ ಇಂಗಿತ ತಿಳಿದು ಸೇವಿಸಿದ ಮರ್ಮ.

ಸ ವತ್ಸರತ್ರಯೋದಶಂ ತಯಾ ಯಥಾವದರ್ಚ್ಚಿತಃ ।
ಉಪಾದಿಶತ್ ಪರಂ ಮನುಂ ಸಮಸ್ತದೇವವಶ್ಯದಮ್ ॥೧೧.೧೫೨॥

ಹೀಗೆ ಸೇವೆ ಮಾಡುತ್ತಾ ಬಂದಳು ಕುಂತಿ  ಒಂದುವರ್ಷ,
ಆ ಸಮಯಕ್ಕೆ ತುಂಬಿತ್ತು ಅವಳಿಗೆ ಹದಿಮೂರು ವರ್ಷ.
ಅವಳಿಂದ ಪೂಜಿತರಾಗಿ ಸಂತುಷ್ಟರಾದರು ಮುನಿ  ದುರ್ವಾಸ,
ಕೊಟ್ಟರು ದೇವತೆಗಳ ವಶಮಾಡಿಕೊಳ್ಳುವ ಮಂತ್ರದ ಉಪದೇಶ.

ಋತೌ ತು ಸಾ ಸಮಾಪ್ಲುತಾ ಪರೀಕ್ಷಣಾಯಾ ತನ್ಮನೋಃ।
ಸಮಾಹ್ವಯದ್ ದಿವಾಕರಂ ಸ ಚಾsಜಗಾಮ ತತ್ ಕ್ಷಣಾತ್ ॥೧೧.೧೫೩ ॥

ಮೊದಲ ಋತುಸ್ನಾನಾನಂತರ ಪೃಥೆ ಕುತೂಹಲದಿ ಮಾಡಿದಳು ಮಂತ್ರಪರೀಕ್ಷ,
ಮಂತ್ರ ಪಠಿಸಿ ಕರೆದವಳಿಗೆ ಸೂರ್ಯದೇವ ತಾನು ಆಗಿಯೇ ಬಿಟ್ಟ ಪ್ರತ್ಯಕ್ಷ.

ತತೋ ನ ಸಾ ವಿಸರ್ಜ್ಜಿತುಂ ಶಶಾಕ ತಂ ವಿನಾ ರತಿಮ್ ।
ಸುವಾಕ್ಪ್ರಯತ್ನತೋsಪಿ ತಾಮಥಾsಸಸಾದ ಭಾಸ್ಕರಃ ॥೧೧.೧೫೪॥

ಹೀಗೆ ಬಂದ ಸೂರ್ಯ ತನ್ನನ್ನು ಸೇರದಂತೆ ಕುಂತಿ ಪ್ರಯತ್ನದ ವಿವಿಧ ಬಗೆ,
ಘಟನೆ ತಡೆಯಲಾಗದ ಭಾಸ್ಕರ ಕುಂತಿಯ ಸೇರುತ್ತಾನೆ ಪಡೆದವಳ ಒಪ್ಪಿಗೆ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula