Monday 10 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 05 - 08

(ಸಮುದ್ರ ಮಥನದ ಕುರಿತು ಅನೇಕ ಗ್ರಂಥಗಳ ಸಂಗ್ರಹ,
ವಿರೋಧಗಳಿಂದ ಹೇಗೆ ನಿವಾರಣೆಯಾಗಬೇಕು ಸಂದೇಹ.
ಹೇಗೆ ಸಿಗಬೇಕು ನೈಜ ಅರ್ಥಾನುಸಂಧಾನದ ದಾರಿ,
ಮಧ್ವರು ಕೊಟ್ಟಿದ್ದಾರೆ ನಿರ್ಣಯ ಕಾರುಣ್ಯ ತೋರಿ. )

ತ್ವದಾಜ್ಞಯಾ ಬಲಿನಾ ಸನ್ದಧಾನಾ ವರಾದ್ ಗೀರೀಶಸ್ಯ ಪರೈರಚಾಲ್ಯಮ್ ।
ವೃನ್ದಾರಕಾ ಮನ್ದರಮೇತ್ಯ ಬಾಹುಭಿರ್ನ್ನ ಶೇಕುರುದ್ಧರ್ತ್ತುಮಿಮೇ 
ಸಮೇತಾಃ ॥೧೦.೦೫॥

ನಿನ್ನಾಜ್ಞೆಯಂತೆ ದೇವತೆಗಳು ಬಲಿಚಕ್ರವರ್ತಿಯೊಂದಿಗೆ ಮಾಡಿಕೊಂಡರು ಸಂಧಾನ,
ಮಾಡಿದರು ದೈತ್ಯರೊಂದಿಗೆ ಶಿವವರದಿ ಬೇರೊಬ್ಬರು ಎತ್ತಲಾಗದ ಮಂದರವನೆತ್ತುವ ಪ್ರಯತ್ನ.
ಎಲ್ಲರೂ ಸೇರಿ ತಮ್ಮ ಬಾಹುಗಳಿಂದ ಪ್ರಯಾಸ ಪಟ್ಟರೂ ಫಲಿಸಲಿಲ್ಲ ಅವರ ಯತ್ನ.
(ಮಂದರಕ್ಕಿತ್ತು ಯಾರೂ ಅದನ್ನ ಎತ್ತದಂತೆ ಶಿವನ ವರ,
ದೇವ ದಾನವರ ಎತ್ತುವ ಯತ್ನವೂ ಭಗವದಿಚ್ಛೆ ಅನುಸಾರ )

ತದಾ ತ್ವಯಾ ನಿತ್ಯಬಲತ್ವಹೇತುತೋ ಯೋsನನ್ತನಾಮಾ ಗರುಡಸ್ತದಂಸಕೇ ।
ಉತ್ಪಾಟ್ಯ ಚೈಕೇನ ಕರೇಣ ಮನ್ದರೋ ನಿಧಾಪಿತಸ್ತಂ ಸ ಸಹ 
ತ್ವಯಾsವಹತ್॥೧೦.೦೬ ॥

ನಿತ್ಯಶಕ್ತಿಶಾಲಿ ನೀನು ಮಂದರವ ಒಂದೇ ಕೈಯಿಂದ ಕಿತ್ತೆ,
ಅನಂತನೆಂದೂ ಕರೆಯಲ್ಪಡುವ ಗರುಡನ ಹೆಗಲ ಮೇಲಿಟ್ಟೆ.
ನಿನ್ನ ಜೊತೆ ಬೆಟ್ಟವ ಹೊತ್ತ ಗರುಡ ಕ್ಷೀರಸಾಗರದೆಡೆ ಸಾಗಿದನಂತೆ.

ಪುನಃ ಪರೀಕ್ಷದ್ಬಿರಸೌ ಗಿರಿಃ ಸುರೈಃ ಸಹಾಸುರೈರುನ್ನಮಿತಸ್ತದಂಸತಃ ।
ವ್ಯಚೂರ್ಣ್ಣಯತ್ ತಾನಖಿಲಾನ್ ಪುನಶ್ಚ ತೇ ತ್ವದೀಕ್ಷಯಾ ಪೂರ್ವವದುತ್ಥಿತಾಃ 
ಪ್ರಭೋ  ॥೧೦.೦೭ ॥

ದೇವತೆಗಳೂ ಅಸುರರೂ ತಮ್ಮ ಶಕ್ತಿಯ ಪರೀಕ್ಷೆಗಾಗಿ,
ಗರುಡನ ಹೆಗಲಿಂದ ಬೆಟ್ಟವನೆತ್ತಿದರು ಎಲ್ಲರೂ ಒಂದಾಗಿ.
ಎತ್ತಲಾಗದೆ ಎಲ್ಲರೂ ಬಿದ್ದು ಆಯಿತು ಅವರಿಗೆ ಗಾಯ,
ಮೊದಲಿನಂತೆ ಮಾಡಿತವರ ನಿನ್ನ ದಯಾದೃಷ್ಟಿಯ ಛಾಯ.

ಪುನಶ್ಚ ವಾಮೇನ ಕರೇಣ ವೀಶ್ವರೇ ನಿಧಾಯ ತಂ ಸ್ಕನ್ಧಗತಸ್ತ್ವಮಸ್ಯ ।
ಅಗಾಃ ಪಯೋಬ್ಧಿಂ ಸಹಿತಃ ಸುರಾಸುರೈರ್ಮ್ಮತ್ಥ್ನಾ ಚ 
ತೇನಾಬ್ಧಿಮಥಾಪ್ಯಮತ್ಥ್ನಾಃ ॥೧೦.೦೮॥

ಮತ್ತೆ ಮಂದರ ಬೆಟ್ಟವ ನಿನ್ನ ಎಡಗೈಯಿಂದ ಎತ್ತಿದೆ ನೀನು ಸ್ವಾಮಿ,
ಗರುಡನ ಮೇಲಿಟ್ಟು ಅವನನ್ನೇರಿ ಎಲ್ಲರ ಸೇರಿ ಹೊರಟೆ ಭಕ್ತಪ್ರೇಮಿ.
ದೇವ ದಾನವರ ಕೂಡಿ ಕ್ಷೀರಸಾಗರವ ತಲುಪಿದೆ,
ಮಂದರವ ಕಡೆಗೋಲು ಮಾಡಿ ಸಮುದ್ರ ಕಡೆದೆ. 


No comments:

Post a Comment

ಗೋ-ಕುಲ Go-Kula