Sunday 2 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 01 - 04

ವ್ಯಾಸಾವತಾರಾನುವರ್ಣ್ಣನಮ್

।। ಓಂ ।।

ದ್ವಾಪರೇsಥ ಯುಗೇ ಪ್ರಾಪ್ತೇ ತ್ವಷ್ಟಾವಿಂಶತಿಮೇ ಪುನಃ ।
ಸ್ವಯಂಭುಶರ್ವಶಕ್ರಾದ್ಯಾ ದುಗ್ಧಾಬ್ಧೇಸ್ತೀರಮಾಯಯುಃ   ॥೦೧॥

ಪೂರ್ಣವಾದ ನಂತರ ಶ್ರೀರಾಮಚಂದ್ರಾವತಾರ,
ಸಮೀಪಿಸಿ ಬರುತ್ತಿರಲು ಇಪ್ಪತ್ತೆಂಟನೇ ದ್ವಾಪರ,
ಬ್ರಹ್ಮ ರುದ್ರಾದಿಗಳು ತೆರಳಿದರು ಕ್ಷೀರಸಮುದ್ರತೀರ.

ಪಯೋಬ್ಧೇರುತ್ತರಂ ತೀರಮಾಸಾದ್ಯ ವಿಬುಧರ್ಷಭಾಃ ।
ತುಷ್ಟುವುಃ ಪುಣ್ಡರೀಕಾಕ್ಷಮಕ್ಷಯಂ ಪುರುಷೋತ್ತಮಮ್  ॥೦೨॥

ಸೇರಿ ಬ್ರಹ್ಮಾದಿಗಳೆಲ್ಲಾ ಕ್ಷೀರಸಮುದ್ರದ ಶ್ವೇತದ್ವೀಪ ತೀರ,
ಮಾಡಿದರು ಪುರುಷೋತ್ತಮ ಪುಂಡರೀಕಾಕ್ಷನ ಸ್ತೋತ್ರ.

ನಮೋನಮೋsಗಣ್ಯಗುಣೈಕಧಾಮ್ನೇ ಸಮಸ್ತವಿಜ್ಞಾನಮರೀಚಿಮಾಲಿನೇ ।
ಅನಾದ್ಯವಿಜ್ಞಾನತಮೋನಿಹನ್ತ್ರೇ ಪರಾಮೃತಾನನ್ದಪದಪ್ರದಾಯಿನೇ  ॥೦೩॥

ಅವ ಅಗಣಿತ ಗುಣಗಳ ಶಾಶ್ವತ ನೆಲೆ,
ಧರಿಸಿದವ ಅರಿವು ಕಾಂತಿಯ ಮಾಲೆ.
ಅನಾದಿಕಾಲದ ಅಜ್ಞಾನದ ಕತ್ತಲ ನಾಶಪಡಿಸುವಾತ,
ಉತ್ಕೃಷ್ಟವಾದ ಮೋಕ್ಷದಾನಂದ ಕೊಡುವವನಾತ.
ನಮಸ್ಕಾರ ನಮಸ್ಕಾರಗಳು ನಿನಗೆ ಜಗದ ಆದಿತಾತ.

ಸ್ವದತ್ತಮಾಲಾಭುವಿಪಾತಕೋಪತೋ ದುರ್ವಾಸಸಃ ಶಾಪತ ಆಶು ಹಿ ಶ್ರಿಯಾ ।
ಶಕ್ರೇ ವಿಹೀನೇ ದಿತಿಜೈಃ ಪರಾಜಿತೇ ಪುರಾ ವಯಂ ತ್ವಾಂ ಶರಣಂ ಗತಾಃ ಸ್ಮ  ॥೦೪ ॥

ದೂರ್ವಾಸರು ಇಂದ್ರಗೆ ಕೊಟ್ಟ ವಿಷ್ಣು ನಿರ್ಮಾಲ್ಯ ಮಾಲ,
ನೋಡಿ ಶಪಿಸಿದ್ದರು ಇಂದ್ರನ -ಮಾಲೆ ಸೇರಿದ್ದಾಗ ನೆಲ.
ಆಗಿದ್ದನಾಗ ಇಂದ್ರ ಮೂರ್ಲೋಕ ಸಂಪತ್ತಿನಿಂದ ಚ್ಯುತ,
ಹಿಂದಿನಂತೆ ಇಂದೂ ಬಂದಿದ್ದೇವೆ ನಿನ್ನಲ್ಲಾಗಿ ಶರಣಾಗತ.


No comments:

Post a Comment

ಗೋ-ಕುಲ Go-Kula