Friday 31 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 138 - 143

ಉಕ್ತಂ ಲಕ್ಷಣಶಾಸ್ತ್ರೇ ಚ ಕೃಷ್ಣದ್ವೈಪಾಯನೋದಿತೇ ।
ತ್ರಿಭಾಷಾ ಯೋ ನ ಜಾನಾತಿ ರೀತೀನಾಂ ಶತಮೇವ ಚ  ॥ ೯.೧೩೮ ॥

ವ್ಯತ್ಯಾಸಾದೀನ್ ಸಪ್ತ ಭೇದಾನ್ ವೇದಾದ್ಯರ್ತ್ಥಂ ತಥಾ ವದೇತ್ ।
ಸ ಯಾತಿ ನಿರಯಂ ಘೋರಮನ್ಯಥಾಜ್ಞಾನಸಮ್ಭವಮ್’ ॥೯.೧೩೯ ॥

(ವೇದವ್ಯಾಸರೇ ರಚಿಸಿದಂಥ ಲಕ್ಷಣ ಗ್ರಂಥ,
ಇದರಲ್ಲಿದೆ ಮಹಾಭಾರತಕ್ಹೇಗೆ ಹಚ್ಚಬೇಕು ಅರ್ಥ.
ಅದರಲ್ಲಿದೆ ಯಾವ್ಯಾವ ವಾಕ್ಯ ಘಟನೆ ಶೈಲಿಗಳ ಸೂತ್ರ,
ಅದನ್ನ ತಿಳಿಸಿ ಹೇಳಿ ಸತ್ಯ ತತ್ವ ತಿಳಿಸುವ ಲಕ್ಷಣ ಶಾಸ್ತ್ರ)
ಲಕ್ಷಣ ಗ್ರಂಥದಲ್ಲೇ ಹೇಳಿರುವಂತೆ ಬಳಕೆಯಾಗಿರುವ ಮೂರು ಭಾಷೆ,
ಮಹಾಭಾರತದಲ್ಲಿ ಬರುವ ಸಮಾಧಿ ದರ್ಶನ ಮತ್ತು ಗುಹ್ಯ ಭಾಷೆ.
ಮೂರು ಭಾಷೆ ,ನೂರು ರೀತಿ ,ಅನೇಕ ವ್ಯತ್ಯಾಸ, ಏಳು ಭೇದ,
ತಿಳಿಯದೇ ವೇದಪುರಾಣಗಳ ವ್ಯಾಖ್ಯಾನಿಸುವವರಿಗೆ ನರಕ ಬಾಧ.

ಇತ್ಯನ್ಯೇಷು ಚ ಶಾಸ್ತ್ರೇಷು ತತ್ರತತ್ರೋದಿತಂ ಬಹು ।
ವ್ಯತ್ಯಾಸಃ ಪ್ರಾತಿಲೋಮ್ಯಂ ಚ ಗೋಮೂತ್ರೀ ಪ್ರಘಸಸ್ತಥಾ ॥೯.೧೪೦॥

ಉಕ್ಷಣಃ ಸುಧುರಃ ಸಾಧು ಸಪ್ತ ಭೇದಾಃ ಪ್ರಕೀರ್ತ್ತಿತಾಃ’
ಇತ್ಯಾದಿ ಲಕ್ಷಣಾನ್ಯತ್ರ ನೋಚ್ಯನ್ತೇsನ್ಯಪ್ರಸಙ್ಗತಃ  ॥೯.೧೪೧॥

ವ್ಯತ್ಯಾಸ ,ಪ್ರಾತಿಲೋಮ್ಯ ,ಗೋಮೂತ್ರೀ ,ಪ್ರಘಸ ,ಉಕ್ಷಣ ,ಸುಧುರ ,ಸಾಧು ಇವೇಳು ಕಥಾಭೇದ,
ಅದರದು ಬೇರೆಯೇ ಪ್ರಸಂಗವಾದ್ದರಿಂದ ಅದನ್ನ ತಾವಿಲ್ಲಿ ವಿವರಿಸುತ್ತಿಲ್ಲವೆಂಬುದು ಆಚಾರ್ಯವಾದ.

ಅನುಸಾರೇಣ ತೇಷಾಂ ತು ನಿರ್ಣ್ಣಯಃ ಕ್ರಿಯತೇ ಮಯಾ ।
ತಸ್ಮಾನ್ನಿರ್ಣ್ಣಯಶಾಸ್ತ್ರತ್ವಾದ್ ಗ್ರಾಹ್ಯಮೇತದ್ ಬುಭೂಷುಭಿಃ ॥೯.೧೪೨ ॥

ಆ ಎಲ್ಲಾ ಪ್ರಮಾಣ ಗ್ರಂಥಗಳ ಅನುಸಾರ,
ಆಚಾರ್ಯರು ಕೊಟ್ಟಿರುವ ನಿರ್ಣಯದ ಸಾರ.
ಆ ಕಾರಣದಿಂದ ನಿರ್ಣಯಶಾಸ್ತ್ರವಾದ ಇದು ಅತ್ಯಂತ ಗ್ರಾಹ್ಯ,
ಮಧ್ವರ ಮಾತಷ್ಟಲ್ಲದೆ ವೇದವ್ಯಾಸರ ಇಚ್ಛೆಯಂತೆ ಸ್ವೀಕಾರಾರ್ಹ.

ಇತೀರಿತಾ ರಾಮಕಥಾ ಪರಾ ಮಯಾ ಸಮಸ್ತಶಾಸ್ತ್ರಾನುಸೃತೇರ್ಭವಾಪಹಾ ।
ಪಠೇದಿಮಾಂ ಯಃ ಶೃಣುಯಾದಥಾಪಿ ವಾ ವಿಮುಕ್ತಬನ್ಧಶ್ಚರಣಂ ಹರೇರ್ವ್ರಜೇತ್ ॥೯.೧೪೩ ॥

ಹೇಳುತ್ತಾರೆ ಆಚಾರ್ಯರು ಮಾಡುತ್ತಾ ಉಪಸಂಹಾರ,
ಖಚಿತ ಇದರಿಂದ ಸಂಸಾರ ಬಂಧನದದಿಂದ ಪರಿಹಾರ.
ಉತ್ಕೃಷ್ಟವಾದ ಶ್ರೀರಾಮಕಥೆಯದು ಶಾಸ್ತ್ರಾಧಾರ,
ಮಥಿಸಿದ ಸತ್ಯ ತತ್ವ ಕೊಡಲ್ಪಟ್ಟಿದೆ ನನ್ನಯ ದ್ವಾರ.
ಇದನ್ನ ಓದಿದವ ಕೇಳಿದವ ಅಂತರಾರ್ಥ ತಿಳಿದವ,
ಬಂಧನದಿಂದ ಮುಕ್ತನಾಗಿ ದೇವರ ಪಾದ ಸೇರುವ.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ  ಶ್ರೀರಾಮಸ್ವಧಾಮಪ್ರವೇಶೋ ನಾಮ ನವಮೋsಧ್ಯಾಯಃ ॥

ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಮಹಾಭಾರತ ತಾತ್ಪರ್ಯ ನಿರ್ಣಯ ವಾದ,
ಶ್ರೀರಾಮಚರಿತೇ ಶ್ರೀರಾಮಸ್ವಧಾಮಪ್ರವೇಶೋ ನಾಮ ಒಂಬತ್ತನೇ ಅಧ್ಯಾಯ,
ಗುರ್ವಾಂತರ್ಗತ ಭಗವದ್ ಅನುಗ್ರಹದಿಂದಾದ ಪದಕುಸುಮ ಹರಿಗರ್ಪಿಸಿದ ಭಾವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula