Thursday 16 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 69 - 74

ಇತೀರಿತೋ ಮರುತ್ಸುತೋ ಜಗಾದ ವಿಶ್ವನಾಯಕಮ್ ।
ವಿಧೇಹಿ ಪಾದಪಙ್ಕಜೇ ತವೇಶ ಭಕ್ತಿಮುತ್ತಮಾಮ್ ॥೯.೬೯॥

ಶ್ರೀರಾಮ ಹೀಗೆ ಹೇಳಿದಾಗ ಭಕ್ತ ಹನುಮಂತ,
ಜಗತ್ಪತಿಯಲ್ಲಿ ಬೇಡಿಕೊಂಡ ತಾನು ಹೀಗಂತ.
ನಿನ್ನ ಪಾದಕಮಲದಲ್ಲಿ ಎನ್ನ ಭಕ್ತಿ,
ನಿರಂತರವಾಗಿರಲಿ ಅದರ ಉತ್ಪತ್ತಿ.



ಸದಾ ಪ್ರವರ್ದ್ಧಮಾನಯಾ ತಯಾ ರಮೇsಹಮಞ್ಜಸಾ ।
ಸಮಸ್ತಜೀವಸಞ್ಚಯಾತ್ ಸದಾsಧಿಕಾ ಹಿ ಮೇsಸ್ತು ಸಾ ॥೯.೭೦॥

ಸದಾ ವೃದ್ಧಿ ಹೊಂದುವ ಆ ಭಕ್ತಿ,
ಅದರಿಂದಲೇ ನನಗೆ ಸುಖ-ಶಕ್ತಿ.
ಇರಲಿ ಸಮಸ್ತ ಜೀವಗಣಕ್ಕಿಂತ ಅದಧಿಕ,
ಆ ಭಕ್ತಿಯೊಂದಿರಲಿ ನನಗದೇ ತಾರಕ.

ನಮೋನಮೋ ನಮೋನಮೋ ನತೋsಸ್ಮಿತೇ ಸದಾ ಪದಮ್ ।
ಸಮಸ್ತಸದ್ಗುಣೋಚ್ಛ್ರಿತಂ ನಮಾಮಿ ತೇ ಪದಂ ಪುನಃ ॥೯.೭೧॥

ನಮಸ್ಕಾರ, ನಮಸ್ಕಾರ, ನಮಸ್ಕಾರ , ನಮಸ್ಕಾರ.
ಈಗಲೂ ಯಾವಾಗಲೂ ನಿನಗೆ ಎನ್ನ ನಮಸ್ಕಾರ.
ಸಮಸ್ತ ಸದ್ಗುಣಗಳ ಸ್ವರೂಪಕ್ಕೆ ಮತ್ತೆ ನಮಸ್ಕಾರ.

ಇತೀರಿತೇ ತಥೇತಿ ತಂ ಜಗಾದ ಪುಷ್ಕರೇಕ್ಷಣಃ ।
ಜಗಾಮ ಧಾಮ ಚಾsತ್ಮನಸ್ತೃಣಾದಿನಾ ಸಹೈವ ಸಃ ॥೯.೭೨॥

ಈ ರೀತಿ ಹೇಳುತ್ತಿರಲು,ಪುಂಡರೀಕಾಕ್ಷನಾದ ಶ್ರೀಮನ್ನಾರಾಯಣ ,
ಹಾಗೇ ಆಗಲೆಂದು ಬೇಡಿಕೆಯ ಅನುಗ್ರಹಿಸುತ್ತಾನೆ ತತ್ತಕ್ಷಣ.
ಮುಕ್ತಿ ಬಯಸಿ ಬಂದ ಹುಲ್ಲಿನಂಥಾ ತೃಣಜೀವ ಸಮೇತ,
ತನ್ನ ಲೋಕಕ್ಕೆ ತೆರಳುವಂಥವನಾದ ದಶರಥಸುತ ಜಗತ್ಪಿತ.

ಖಗಾ ಮೃಗಸ್ತೃಣಾದಯಃ ಪಿಪೀಲಿಕಾಶ್ಚ ಗರ್ದ್ದಭಾಃ ।
ತದಾssಸುರುತ್ತಮಾ ಯತೋ ನೃವಾನರಾಸ್ತು ಕಿಂಪುನಃ ॥೯.೭೩॥

ಪಕ್ಷಿ ಜಿಂಕೆ ಮತ್ತಿತರ ಮೃಗ ಹುಲ್ಲು ಇರುವೆ,
ರಾಮನಕಾಲದಲ್ಲಿದ್ದವೆಲ್ಲಾ ಉತ್ಕೃಷ್ಟವಾದವೇ.
ಇನ್ನು ಮನುಷ್ಯರು ಮತ್ತು ವಾನರ ಸಮೂಹ,
ಉತ್ಕೃಷ್ಟರಾಗಿದ್ದರೆಂಬುದದು ನಿಸ್ಸಂದೇಹ.

ಸದೈವ ರಾಮಭಾವನಾಃ ಸದಾ ಸುತತ್ತ್ವವೇದಿನಃ ।
ಯತೋsಭವಂಸ್ತತಸ್ತು ತೇ ಯಯುಃ ಪದಂ ಹರೇಸ್ತದಾ ॥೯.೭೪ ॥

ಪ್ರಜೆಗಳೆಲ್ಲಾ ಶ್ರೀರಾಮನಲ್ಲಿ ಇಟ್ಟಿದ್ದರು ಉನ್ನತ ಭಕ್ತಿ,
ಒಳ್ಳೇ ತತ್ವ ಬಲ್ಲವರಾಗಿ ಮಾಡುತ್ತಿದ್ದರದರ ಅಭಿವ್ಯಕ್ತಿ.
ಹಾಗಾಗಿ ದೊರಕಿತವರಿಗೆ ರಾಮಪಾದ ಸೇರುವ ಶಕ್ತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula