Sunday, 19 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 89 - 93

ದಧ್ರೇ ಚ್ಛತ್ರಂ ಹನೂಮಾನ್ ಸ್ರವದಮೃತಮಯಂ ಪೂರ್ಣ್ಣಚನ್ದ್ರಾಯುತಾಭಂ
ಸೀತಾ ಸೈವಾಖಿಲಾಕ್ಷ್ಣಾಂ ವಿಷಯಮುಪಗತಾ ಶ್ರೀರಿತಿ ಹ್ರೀರಥೈಕಾ ।
ದ್ವೇಧಾ ಭೂತ ದಧಾರ ವ್ಯಜನಮುಭಯತಃ ಪೂರ್ಣ್ಣಚನ್ದ್ರಾಂಶುಗೌರಂ
ಪ್ರೋದ್ಯದ್ಭಾಸ್ವತ್ಪ್ರಭಾಭಾ ಸಕಲಗುಣತನುರ್ಭೂಷಿತಾ ಭೂಷಣೈಃ 
ಸ್ವೈಃ ॥೯.೮೯॥

ಪೂರ್ಣಚಂದ್ರಕಾಂತಿಯ ಅಮೃತ ಸುರಿಸುವಂಥ ಶ್ವೇತ ಛತ್ರ ,
ಜಗತ್ಪಿತ ಶ್ರೀರಾಮಚಂದ್ರಗೆ ಹನುಮಂತ ತಾ ಹಿಡಿದ ಪಾತ್ರ .
ಸೂರ್ಯಕಾಂತಿಯ ಗುಣಸಾಗರಿಯಾದ ದೇವರ ಪಕ್ಕದಲ್ಲಿಹ ಜಗನ್ಮಾತೆ ,
ಶ್ರೀ-ಭೂ ರೂಪದಿಂದ ಪಕ್ಕ ಚಾಮರ ಹಿಡಿದಳು ಅದೃಶ್ಯಳಾಗಿದ್ದ ಸೀತಾಮಾತೆ .

ಸಾಕ್ಷಾಚ್ಚಕ್ರತನುಸ್ತಥೈವ ಭರತಶ್ಚಕ್ರಂ ದಧದ್ ದಕ್ಷಿಣೇ-
ನಾsಯಾತ್ ಸವ್ಯತ ಏವ ಶಙ್ಖವರಭೃಚ್ಛಙ್ಕಾತ್ಮಕಃ ಶತ್ರುಹಾ ।
ಅಗ್ರೇ ಬ್ರಹ್ಮಪುರೋಗಮಾಃ ಸುರಗಣಾ ವೇದಾಶ್ಚ ಸೋಙ್ಕಾರಕಾಃ
ಪಶ್ಚಾತ್ ಸರ್ವಜಗಜ್ಜಗಾಮ ರಘುಪಂ ಯಾನ್ತಂ ನಿಜಂ ಧಾಮ ತಮ್ ॥೯.೯೦॥

ಚಕ್ರಾಭಿಮಾನಿ ಭರತ ಶ್ರೀರಾಮನ ಬಲಬದಿಯಲ್ಲಿ ಸುದರ್ಶನ ಚಕ್ರವ ಹಿಡಿದ ,
ಶಂಖಾಭಿಮಾನಿ ಶತ್ರುಘ್ನ ರಾಮನ ಎಡಬದಿಯಲ್ಲಿ ಪಾಂಚ್ಯಜನ್ಯ ಹಿಡಿದು ನಡೆದ .
ಶ್ರೀರಾಮನ ಮುಂದೆ ಓಂಕಾರ ಸಹಿತ ಬ್ರಹ್ಮಾದಿ ದೇವತೆಗಳ ಹಿಂಡು ,
ಮುಕ್ತಿದಾತನ ಹಿಂದೆ ಸಮಸ್ತ ಮುಕ್ತಿಯೋಗ್ಯ   ಜೀವರ ದಂಡು .

ತಸ್ಯ ಸೂರ್ಯ್ಯಸುತಪೂರ್ವವಾನರಾ ದಕ್ಷಿಣೇನ ಮನುಜಾಸ್ತು ಸವ್ಯತಃ ।
ರಾಮಜನ್ಮಚರಿತಾನಿ ತಸ್ಯ ತೇ ಕೀರ್ತ್ತಯನ್ತ ಉಚಥೈರ್ದ್ದ್ರುತಂ 
ಯಯುಃ ॥೯.೯೧॥

ಸುಗ್ರೀವಾದಿ ಕಪಿಗಳು ಅನುಸರಿಸಿದರೆ ಬಲಗಡೆಯ  ನಡೆ ,
ಸೇವಕ ಆತ್ಮೀಯ ಮನುಷ್ಯಾದಿಗಳದು ಎಡಬದಿಯ  ಪಡೆ .
ಎಲ್ಲರ ಬಾಯಲ್ಲೂ ಭಕ್ತಿಯುತ ವೇದಸೂಕ್ತ ಭರಿತ ,
ಶ್ರೀರಾಮಚಂದ್ರದೇವರ ಮನೋಹರ ಜನ್ಮಚರಿತ .

ಗನ್ಧರ್ವೈರ್ಗ್ಗೀಯಮಾನೋ ವಿಬುಧಮುನಿಗಣೈರಬ್ಜಸಮ್ಭೂತಿಪೂರ್ವೈ-
ರ್ವೇದೋದಾರಾರ್ತ್ಥವಾಗ್ಭಿಃ ಪ್ರಣಿಹಿತಸುಮನಃ ಸರ್ವದಾ ಸ್ತೂಯಮಾನಃ ।
ಸರ್ವೈರ್ಭೂತೈಶ್ಚ ಭಕ್ತ್ಯಾ ಸ್ವನಿಮಿಷನಯನೈಃ ಕೌತುಕಾದ್ ವೀಕ್ಷ್ಯಮಾಣಃ ।
ಪ್ರಾಯಾಚ್ಛೇಷಗರುತ್ಮದಾದಿಕನಿಜೈಃ ಸಂಸೇವಿತಃ ಸ್ವಂ ಪದಮ್ ॥೯.೯೨॥

ಗಂಧರ್ವರಿಂದ ನಡೆಯುತ್ತಿತ್ತು ಸ್ತೋತ್ರ ಗಾಯನ,
ಬ್ರಹ್ಮಾದಿಗಳಿಂದ  ಉತ್ಕೃಷ್ಟ  ವೇದಗಳ  ವಚನ.
ಎಲ್ಲರೂ ಸುರಿಸುತ್ತಿದ್ದರು ರಾಮಚಂದ್ರನ ಮೇಲೆ ಪುಷ್ಪವೃಷ್ಟಿ,
ಹೋಲಿಕೆಯಿರದ ಭಗವಂತನೆಡೆಗೆ ಎಲ್ಲರದೂ  ಅಚ್ಚರಿಯ ದೃಷ್ಟಿ.
ಶ್ರೀರಾಮ ಗರುಡ ಶೇಷ ಮೊದಲಾದ ಪರಿವಾರದಿಂದ,
ಎಲ್ಲರನ್ನ ಕೂಡಿದವನಾಗಿ ತನ್ನ ಧಾಮದೆಡೆಗೆ ನಡೆದ.

ಬ್ರಹ್ಮರುದ್ರಗರುಡೈಃ ಸಶೇಷಕೈಃ ಪ್ರೋಚ್ಯಮಾನಸುಗುಣೋರುವಿಸ್ತರಃ ।
ಆರುರೋಹ ವಿಭುರಮ್ಬರಂ ಶನೈಸ್ತೇ ಚ 
ದಿವ್ಯವಪುಷೋsಭವಂಸ್ತದಾ ॥೯.೯೩॥

ಎಲ್ಲರ ಜೊತೆ ಸಾಗುತ್ತಾ ಬ್ರಹ್ಮ ರುದ್ರ ಮೊದಲಾದವರಿಂದ,
ಮೆಲ್ಲಗೆ ಭೂಮಿ ಬಿಟ್ಟವನಾಗಿ ಆಕಾಶದೆಡೆಗೆ  ಏರಿದ.
ದೈವಪ್ರಭಾವ ಕಳಚಿತೆಲ್ಲರ ಪ್ರಾಕೃತ ದೇಹ ದೋಷ,
ಮೆಲ್ಲನೆ ದೈವದೊಡಗೂಡಿ ಏರಿದರು ಮೇಲಿನಾಕಾಶ.

No comments:

Post a Comment

ಗೋ-ಕುಲ Go-Kula