Thursday 9 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 34 - 39

ತೇನ ಚಾನ್ಧತಮ ಈಯುರಾಸುರಾ ಯಜ್ಞಮಾಹ್ವಯದಸೌ ಚ ಮೈಥಿಲೀಮ್ ।
ತತ್ರ ಭೂಮಿಶಪಥಚ್ಛಲಾನ್ನೃಣಾಮ್ ದೃಷ್ಟಿಮಾರ್ಗ್ಗಮಪಹಾಯ ಸಾ ಸ್ಥಿತಾ ॥೯.೩೪॥

ತೋರಲ್ಪಟ್ಟಿತು ಸೀತಾರಾಮರ ಬಾಹ್ಯ ವಿಯೋಗ ,
ಸುರಾಣಿಕರಾದರು ಅಂಧಂತಮಸ್ಸಿನ ಶಾಶ್ವತ ಭಾಗ .
ರಾಮ ಕರೆಯುತ್ತಾನೆ ಸೀತೆಯ ಅಶ್ವಮೇಧಯಜ್ಞದಿ ಭಾಗಿಯಾಗಲಿಕ್ಕೆ ,
ಭೂಮಾತೆಯ ಕರೆದು ಸೀತೆ ತೋರುತ್ತಾಳೆ ತನ್ನ ಶುದ್ಧತ್ವದ ಪರೀಕ್ಷೆ .
ಜಗನ್ಮಾತೆಯ ಸ್ವೀಕರಿಸಿ ಸನ್ಮಾನಿಸುತ್ತಾಳೆ ಅವಳು ಭೂಮಾತೆ ,
ಜಗದಕಣ್ಣಿಂದ ಮರೆಯಾಗಿ ರಾಮನೊಂದಿಗಿರುತ್ತಾಳೆ ಸೀತಾಮಾತೆ.

ಗುರುಂ ಹಿ ಜಗತೋ ವಿಷ್ಣುರ್ಬಹ್ಮಾಣಮಸೃಜತ್ ಸ್ವಯಮ್ ।
ತೇನ ತದ್ವಚನಂ ಸತ್ಸು ನಾನೃತಂ ಕರುತೇ ಕ್ವಚಿತ್ ॥೯.೩೫॥
ನಾಸತ್ಸ್ವಪ್ಯನೃತಂ ಕುರ್ಯ್ಯಾದ್ ವಚನಂ ಪಾರಲೌಕಿಕಮ್ ।
ಐಹಿಕಂ ತ್ವಸುರೇಷ್ವೇವ ಕ್ವಚಿದ್ಧನ್ತಿ ಜನಾರ್ದ್ದನಃ ॥೯.೩೬ ॥

ಜಗದ್ಗುರುವಾಗಿ ಬ್ರಹ್ಮನ ಮಾಡಿದ ವಿಷ್ಣು ಸಜ್ಜನರಲ್ಲಿ ಮಾಡಲ್ಲವನ ಮಾತ ಸುಳ್ಳು.
ಬ್ರಹ್ಮಪಿತ ವಿಷ್ಣು ಅಸಜ್ಜನರಲ್ಲಾದ ಬ್ರಹ್ಮವಾಕ್ಯವನ್ನೂ ಮಾಡಲ್ಲ ಎಂದೂ ಸುಳ್ಳು.
ಪರಲೋಕಪರವಾದ ಚತುರ್ಮುಖನ  ಮಾತನ್ನೂ ಮಾಡಲ್ಲ ಸುಳ್ಳು.
ಖಂಡಿತಾ ಮಾಡುತ್ತಾನೆ ಅಸುರರಲ್ಲಿ ಐಹಿಕವಾದ ವರಗಳ ಸುಳ್ಳು.
ಅದೃಶ್ಯತ್ವ ,ಅಜೇಯತ್ವ ,ಅವಧ್ಯತ್ವ -ವರಗಳನ್ನು ಮಾಡುವ ಸುಳ್ಳು.

ನಿಜಾಧಿಕ್ಯಸ್ಯ ವಿಜ್ಞಪ್ತ್ಯೈ ಕ್ವಚಿದ್ ವಾಯುಸ್ತದಾಜ್ಞಯಾ ।
ಹನ್ತಿಬ್ರಹ್ಮತ್ವಮಾತ್ಮೀಯಮದ್ಧಾ ಜ್ಞಾಪಯಿತುಂ ಪ್ರಭುಃ ॥೯.೩೭॥

ಭಗವದಾಜ್ಞೆ ಇದ್ದರೆ ವಾಯುದೇವರೂ ಕೆಲವೊಮ್ಮೆ ಬ್ರಹ್ಮನಾಜ್ಞೆ ಮೀರುವುದಿದೆ,
ಮೊದಲನೆಯದಾಗಿ ದೇವತಾವರ್ಗದಲ್ಲಿ ತನ್ನ ಆಧಿಕ್ಯ ತೋರಿಕೊಳ್ಳುವುದಿದೆ.
ಎರಡನೆಯದಾಗಿ ಬ್ರಹ್ಮಪದವಿಗೆ ತಾನೇ ಬರುತ್ತಿರುವದ ತಿಳಿಸುವುದಿದೆ.

ನಾನ್ಯಃ ಕಶ್ಚಿತ್ ತದ್ವರಾಣಾಂ ಶಾಪಾನಾಮಪ್ಯತಿಕ್ರಮೀ ।
ಅಯೋಗ್ಯೇಷು ತು ರುದ್ರಾದಿವಾಕ್ಯಂ ತೌ ಕುರುತೋ ಮೃಷಾ ॥೯.೩೮॥

ಬ್ರಹ್ಮದೇವರ ವರವಾಗಲೀ ಅಥವಾ ಯಾವುದೇ ಶಾಪ,
ಪ್ರಾಣನಾರಾಯಣರ ಬಿಟ್ಟು ಬೇರಾರಿಗಿಲ್ಲ ಮೀರುವ ಪ್ರತಾಪ.
ಮಾಡುತ್ತಾರೆ ಅಯೋಗ್ಯ ಅಪಾತ್ರರಲ್ಲಿ ರುದ್ರಾದಿಗಳ ವರ ಅನೃತ,
ಮುಖ್ಯವಾಗಿರುತ್ತಲ್ಲಿ ತಾರತಮ್ಯ ನಿಯಮನ ಮತ್ತು ಲೋಕಹಿತ.

ಏಕದೇಶೇನ ಸತ್ಯಂ ತು ಯೋಗ್ಯೇಷ್ವಪಿ ಕದಾಚನ ।
ನ ವಿಷ್ಣೋರ್ವಚನಂ ಕ್ವಾಪಿ ಮೃಷಾ ಭವತಿ ಕಸ್ಯಚಿತ್ ।
ಏತದರ್ತ್ಥೋsವತಾರಶ್ಚ ವಿಷ್ಣೋರ್ಭವತಿ ಸರ್ವದಾ ॥೯.೩೯॥

ಕೆಲವೊಮ್ಮೆ, ರುದ್ರಾದಿಗಳ ಮಾತೂ ನಡೆವುದು ಭಾಗಶಃ ಮಾತ್ರ,
ನಾರಾಯಣನ ಮಾತು ಮಾತ್ರ ಎಂದೂ ಸುಳ್ಳಾಗಲ್ಲ ಸರ್ವತ್ರ.
ಸೃಷ್ಟಿ ನಿಯಮನ ಸಂಹಾರ ಎಲ್ಲಾ ಅವನದೇ ಸಂಕಲ್ಪ,
ಅವನವತಾರಗಳಲ್ಲೂ ಬದ್ಧನಾದವನವ  ಸತ್ಯಸಂಕಲ್ಪ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula