Monday 13 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 50 - 52


ಸಿದ್ಧಂ ನ ದೇಯಮಥ ಸಾಧ್ಯಮಪೀತಿ ವಾಚಂ ಶ್ರುತ್ವಾsಸ್ಯ ವಾಕ್ಸಮಯಜಾತಮುರು ಸ್ವಹಸ್ತಾತ್ ।

ಅನ್ನಂ ಚತುರ್ಗ್ಗುಣಮದಾದಮೃತೋಪಮಾನಂ ರಾಮಸ್ತದಾಪ್ಯ ಬುಭುಜೇsಥ ಮುನಿಃ ಸುತುಷ್ಟಃ  ॥೯.೫೦॥

ಮಾಡಿದ್ದು ಕೊಡಬೇಡ,ಮಾಡಿ ಬಡಿಸಬೇಡ (ಸಿದ್ಧ-ಸಾಧ್ಯ)ಇದು ದೂರ್ವಾಸರ ನುಡಿ,
ಶ್ರೀರಾಮ ಕೊಟ್ಟ ದೂರ್ವಾಸರಿಗೆ ಚತುರ್ವಿಧಾನ್ನವ ತನ್ನ ಕೈಯಿಂದ ಸೃಷ್ಟಿ ಮಾಡಿ.
ಭಗವಂತ ಕೊಟ್ಟ ಅಮೃತತುಲ್ಯ ಆಹಾರ,
ಮುನಿ ಸಂತಸದಿಂದ ಮಾಡಿದ ಸ್ವೀಕಾರ.

ತೃಪ್ತೋ ಯಯೌ ಚ ಸಕಲಾನ್ ಪ್ರತಿ ಕೋಪಯಾನಃ ಕಶ್ಚಿನ್ನ ಮೇsರ್ತ್ಥಿತವರಂ ಪ್ರತಿಧಾತುಮೀಶಃ ।
ಏವಂ ಪ್ರತಿಜ್ಞಕ ಋಷಿಃ ಸ ಹಿ ತತ್ಪ್ರತಿಜ್ಞಾಂ ಮೋಘಾಂ ಚಕಾರ ಭಗವಾನ್ ನತು 
ಕಶ್ಚಿದನ್ಯಃ  ॥೯.೫೧॥

ಯಾರೂ ನನ್ನ ಬಯಕೆಯ ಈಡೇರಿಸಲು ಸಮರ್ಥರಲ್ಲವೆಂದು ದೂರ್ವಾಸರ ವಾದ,
ಅಂತಹಾ ಪ್ರತಿಜ್ಞೆಯ ಕೋಪತೋರುವ ಮುನಿ ರಾಮನಿತ್ತ ಅನ್ನದಿಂದ ತೃಪ್ತನಾದ.
ಹೀಗೆ ರಾಮಚಂದ್ರ "ಯಾರಿಂದಲೂ ಕೊಡಲಸಾಧ್ಯ" ಎಂಬ ಮಾತ ಸುಳ್ಳು ಮಾಡಿದ,
ಸರ್ವಶಕ್ತ ಸರ್ವವ್ಯಾಪ್ತ ಸರ್ವಾಂತರ್ಯಾಮಿ ಹರಿಗೆ  ಎಲ್ಲ ಸಾಧ್ಯವೆಂಬುದು ನಿರ್ವಿವಾದ.

ಕುನ್ತೀ ತು ತಸ್ಯ ಹಿ ಮುನೇರ್ವರತೋsಜಯತ್ ತು ರಾಮಃ ಸ ಕೃಷ್ಣತನುವಾ  ಸ್ವಬಲಾಜ್ಜಿಗಾಯ ।
ತಸ್ಮಿಞ್ಛವೇ ಪ್ರತಿಗತೇ ಮುನಿರೂಪಕೇ ಚ ಯಾಹೀತಿ ಲಕ್ಷ್ಮಣಮುವಾಚ 
ರಮಾಪತಿಃ ಸಃ  ॥೯.೫೨॥

ಕುಂತಿ ಮುನಿಯ ಗೆದ್ದದ್ದು ಅವರದೇ ವರಬಲದಿಂದ,
ರಾಮ ಯಾರೂ ಕೊಡದ ಅನ್ನವಿತ್ತು ಮುನಿಯ ಗೆದ್ದ.
ಕೃಷ್ಣರೂಪದಲ್ಲೂ ತನ್ನ ಸ್ವಯಂ ಬಲದಿಂದಲೇ ಗೆದ್ದ.
ಅಲ್ಲಿದ್ದ ಎರಡೂ ಶಿವನ ರೂಪಗಳ ನಿರ್ಗಮನ,
ಲಕ್ಷ್ಮಣಗೆ ತನ್ನ ತೊರೆಯಲು ರಾಮನ ನಿರ್ದೇಶನ.

No comments:

Post a Comment

ಗೋ-ಕುಲ Go-Kula